Namma Lacchi: ದೀಪಿಕಾಳನ್ನು ಕಟ್ಟಿಹಾಕಲು ಸಂಗಮ್‌ಗೆ ಒಳ್ಳೆ ಚಾನ್ಸ್.. ಆದರೆ ಲಚ್ಚಿ ದ್ರೋಹ ಮಾಡಲ್ಲ..!
ಲಚ್ಚಿಯ ಧ್ವನಿಯಿಂದಾನೆ ರಿಯಾ ಫೇಮಸ್ ಆಗಿದ್ದಾಳೆ. ಅನಾಥ ಎಂದು ಗೊತ್ತಿದ್ದರು ದೀಪಿಕಾ ಲಚ್ಚಿಯನ್ನು ಕರೆದುಕೊಂಡು ಬಂದಿರುವುದಕ್ಕೆ ಇದೇ ಕಾರಣ. ಇದು ಈಗ ಗುಟ್ಟಾಗಿ ಉಳಿದಿಲ್ಲ. ಸಂಗಮ್ ಮತ್ತು ಸಾಗರ್ ಗೂ ವಿಚಾರ ತಿಳಿದಿದೆ. ಅದರಲ್ಲೂ ಸಂಗಮ್ ಲಚ್ಚಿಗೆ ನ್ಯಾಯ ಒದಗಿಸುವುಕ್ಕೆ ಸಾಕಷ್ಟು ಶ್ರಮ ಹಾಕುತ್ತಿದ್ದಾನೆ. ಆದರೆ ಅದು ವರ್ಕೌಟ್ ಆಗುವುದು ಸುಲಭವಲ್ಲ.
ಸದ್ಯಕ್ಕೆ ರಿಯಾಳನ್ನು ಲಾಂಚ್ ಮಾಡುವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಾ ಇದೆ. ಇಲ್ಲಿಯೂ ಸಂಗಮ್ ನ ಪ್ರಯತ್ನ ಕೈ ತಪ್ಪಿಲ್ಲ. ರಿಯಾ ತನ್ನ ಮಾತನ್ನು ಕೇಳುತ್ತಾಳೆ ಎಂದು ನಂಬಿಕೊಂಡಿರುವ ಸಂಗಮ್ ಅವಳಿಗೆ ಎಲ್ಲಾ ರೀತಿಯಿಂದಾನೂ ಹೇಳಿಕೊಡುತ್ತಿದ್ದಾನೆ. ಈ ವಾಯ್ಸ್ ನನ್ನದಲ್ಲ, ಲಚ್ಚಿಯದ್ದು ಅಂತ ಹೇಳಬೇಕು ಎಂದು ರಿಯಾಳ ಮನವರಿಕೆ ಮಾಡಿದ್ದಾನೆ. ಆದರೆ ರಿಯಾ ದೀಪಿಕಾಳ ಮಗಳು ಎಂಬುದನ್ನು ಪ್ರೂವ್ ಮಾಡಿದ್ದಾಳೆ.

ಸಂಗಮ್ ಬಳಿ ಚಾಲೆಂಜ್ ಹಾಕಿದ ದೀಪಿಕಾ
ಸಂಗಮ್ ರಿಯಾಳಿಗೆ ಸತ್ಯ ಹೇಳುವಂತೆ ಹೇಳಿಕೊಟ್ಟಿದ್ದ. ದೀಪಿಕಾ ಕೇಳಿದಾಗ ನನ್ನ ಮಗಳದ್ದು ಅಂತ ಹೆಮ್ಮೆಯಿಂದ ಹೇಳಿಕೊಂಡಿದ್ದ. ಆದರೆ, ರಿಯಾ ಸ್ಟೇಜ್ ಮೇಲೆ ಸತ್ಯವನ್ನು ಒಪ್ಪಿಕೊಳ್ಳಲೇ ಇಲ್ಲ. ತಾನೇ ಹಾಡಿದ್ದು ಎಂಬುದನ್ನೇ ಮುಂದುವರೆಸಿದಳು. ಇದನ್ನು ಕೇಳಿದ ಸಂಗಮ್‌ಗೆ ಬೇಸರವಾಗಿತ್ತು. ಅದೇ ಸಮಯಕ್ಕೆ ದೀಪಿಕಾ ಕೂಡ ಒಂದಷ್ಟು ರೇಗಿಸಿದ್ದಳು. ಅವಳು ನನ್ನ ಮಗಳು ನಾನು ಹೇಳಿದಂತೆ ಕೇಳುತ್ತಾಳೆ ಎಂದಿದ್ದಳು. ಇದು ಸಂಗಮ್‌ನನ್ನು ಇನ್ನಷ್ಟು ಕೆರಳಿಸಿತ್ತು.
ಹಾಡಲು ಒಪ್ಪುತ್ತಿಲ್ಲ ರಿಯಾ
ಸಂಗಮ್‌ಗೆ ಹೇಳುವಾಗಲೇ ವೇದಿಕೆ ಮೇಲಿದ್ದ ಆಂಕರ್ ಬೇರೆ ರೀತಿಯಾಗಿಯೇ ಅನೌನ್ಸ್ ಮಾಡಿದರು. ಅದನ್ನು ಕೇಳಿ ದೀಪಿಕಾಗೂ ಶಾಕ್ ಆಗಿತ್ತು. ರಿಯಾಳಿಂದ ಲೈವ್ ಆಗಿ ಹಾಡು ಕೇಳುವಾಸೆ ಎಂದಾಗ ಒಂದು ಕ್ಷಣ ದೀಪಿಕಾ, ಅವರಮ್ಮನಿಗೆ ಗಾಬರಿಯಾಗಿತ್ತು. ರಿಯಾ ಕೂಡ ಒಪ್ಪಿಗೆ ನೀಡಲೇ ಇಲ್ಲ. ಇಲ್ಲ ನಾನು ಹಾಡಲ್ಲ ಎಂದೇ ಹೇಳಿದಳು. ತಕ್ಷಣ ಸ್ಟೇಜ್ ಮೇಲೆ ಬಂದ ದೀಪಿಕಾ, ಹಾಡು ತಾನೇ ಹಾಡುತ್ತಾಳೆ. ಆದರೆ ಸದ್ಯಕ್ಕೆ ಸಣ್ಣದೊಂದು ಬ್ರೇಕ್ ತಗೊಳ್ಳಿ ಅಂತ ಹೇಳಿ ಸುಮ್ಮನೆ ಮಾಡಿದಳು.
ಲಚ್ಚಿಯನ್ನು ತಡೆದ ಸಂಗಮ್
ಮೊದಲಿನಂತೆ ಈಗಲೂ ಪ್ಲ್ಯಾನ್ ಮಾಡಲು ದೀಪಿಕಾ ಒದ್ದಾಡಿದಳು. ಸಂಗಮ್ ಬಳಿ ಕೂತಿದ್ದ ಲಚ್ಚಿಯನ್ನು ಕರೆದಳು. ಲಚ್ಚಿ ಎದ್ದು ಹೋಗಲು ಹೊರಟಾಗ ಸಂಗಮ್ ಕೈ ಹಿಡಿದು ಕೂರಿಸಿದ. ಈಗ ಸಂಗಮ್ ಸಮಯ. ದೀಪಿಕಾಗೆ ಒಂದು ಕ್ಷಣ ಕೋಪ ಬಂದಿದೆ. ಯಾಕಂದ್ರೆ ಲಚ್ಚಿ ಹಾಡಿದರಷ್ಟೇ ರಿಯಾಳ ಹಾಡು ಎಂದು ನಂಬುವುದು. ಆಂಕರ್ ಮಾಡಿದ ಎಡವಟ್ಟಿನಿಂದಾಗಿ ಮತ್ತಷ್ಟು ಕುಪಿತಗೊಂಡಿದ್ದಾಳೆ.

ಹಾಡು ಹಾಡ್ತಾಳಾ ಲಚ್ಚಿ..?
ಲಚ್ಚಿಗೆ ನಿಯತ್ತು ಜಾಸ್ತಿ. ತಾನು ಹಾಡುವುದರಿಂದಾನೇ ಇವರು ನನ್ನ ಮನೆಯಲ್ಲಿ ಇರಿಸಿಕೊಂಡಿರುವುದು ಎಂಬುದು ಅವಳಿಗೆ ಗೊತ್ತಿಲ್ಲ. ಸಂಗಮ್ ಆ ಬಗ್ಗೆ ಅಷ್ಟೆಲ್ಲಾ ಹೇಳಿದರೂ ಲಚ್ಚಿಯ ಮನಸ್ಸು ಮಾತ್ರ ನಿಯತ್ತಿನದ್ದಾಗಿದೆ. ಕೆಲಸ ಮಾಡಿಯೇ ಊಟ ಮಾಡುತ್ತೀನಿ ಎನ್ನುತ್ತಾಳೆ. ತನ್ನ ಕೈಲಾದ ಕೆಲಸವನ್ನು ಮಾಡಿಯೇ ತಿನ್ನುತ್ತಾಳೆ. ಹೀಗಿರುವಾಗ ಈಗ ದೀಪಿಕಾ ಕರೆಯುತ್ತಿದ್ದರು ಹೋಗದೆ ಹೇಗಿರುತ್ತಾಳೆ. ಸಂಗಮ್ ತಡೆಯುತ್ತಿದ್ದರು ಲಚ್ಚಿಗೆ ನಿಯತ್ತು ಎಂಬುದು ಕಾಡುತ್ತಿದೆ. ಅವರ ಋಣ ನನ್ನ ಮೇಲಿದೆ ಎಂಬ ಭಾವನೆಯಲ್ಲಿ ಬದುಕುತ್ತಿದ್ದಾಳೆ. ಹೀಗಾಗಿ ಗುರುವಿನ ಮಾತು ಮೀರಿಯೂ ರಿಯಾಳನ್ನು ಬೆಳೆಸುವ ಸಾಧ್ಯತೆ ಇದೆ.


Click it and Unblock the Notifications











