Namma Lacchi: 'ನಾಗದೇವತೆ' ಸಿನಿಮಾ ನೋಡಿ ಲಚ್ಚಿಗೆ ಹುತ್ತದಲ್ಲಿ ಕೈ ಹಾಕೋಕೆ ಹೇಳಿದ ರಿಯಾ.. ಮುಂದೇನಾಯ್ತು?
ರಿಯಾ ಯಾವತ್ತಿಗೂ ಬುದ್ದಿ ಕಲಿಯೋಲ್ಲ ಅನ್ನೋದು ಎಲ್ಲರ ಮನಸ್ಸಲ್ಲೂ ಬಂದಿದೆ. ಲಚ್ಚಿಯನ್ನು ಹೇಗಾದರೂ ಮಾಡಿ, ಮನೆಯಿಂದ ಹೊರಗೆ ಹಾಕಬೇಕು ಅಂತ ಪ್ಲ್ಯಾನ್ ಮಾಡಿ ಮಾಡಿ, ಫೇಲ್ ಆಗಿದ್ದಾಳೆ. ಆದರೂ, ಮತ್ತೆ ಮತ್ತೆ ಪ್ರಯತ್ನ ಬಿಡುತ್ತಿಲ್ಲ. ಈಗ ಮತ್ತೆ ಹೊಸ ಪ್ಲ್ಹಾನ್ ಮಾಡುತ್ತಿದ್ದಾಳೆ.
ರಿಯಾಳಿಗೆ ಜೆಜೆ ಸಿಕ್ಕಾಪಟ್ಟೆ ಬೆಂಬಲ ನೀಡಿದ್ದಾಳೆ. ಆದರೆ ಲಚ್ಚಿ, ಜೆಜೆ ಬಳಿ ಮನವಿ ಮಾಡಿಕೊಂಡಿದ್ದಳು. ನನ್ನ ತಪ್ಪಾದರೂ ಏನು, ನಿಮ್ಗೆ ಏನು ನೋವು ಕೊಟ್ಟಿಲ್ಲ. ದಯವಿಟ್ಟು ನನಗೆ ಹಿಂಸೆ ಕೊಡಬೇಡಿ ಅಂತ ಲಚ್ಚಿ ಬೇಡಿಕೊಂಡ ತಕ್ಷಣ ಜೆಜೆ ಕರಗಿದ್ದಾರೆ. ಆದರೆ ರಿಯಾ ಮತ್ತೆ ಎಚ್ಚರ ಮಾಡಿದ್ದಾಳೆ.

'ನಾಗದೇವತೆ' ಸಿನಿಮಾ ನೋಡಿ ಬಂತು ಐಡಿಯಾ
ರಿಯಾಗೆ ಲಚ್ಚಿಯನ್ನು ಮನೆಯಿಂದ ಹೊರ ಹಾಕಬೇಕು, ಡ್ಯಾಡಿನಿಂದ ದೂರ ಮಾಡಬೇಕು ಅನ್ನೋದಷ್ಟೇ ಉದ್ದೇಶ. ಅದಕ್ಕಾಗಿಯೇ ಇರೋ ಬರೋ ಪ್ಲ್ಯಾನ್ ಮಾಡ್ತಾ ಇರ್ತಾಳೆ. ಈಗ ಟೈಮ್ ಪಾಸ್‌ಗೆ ಅಂತ ಸಿನಿಮಾ ನೋಡ್ತಾ ಕೂತಿದ್ಲು. ಚಿಪ್ಸ್ ತಿಂದ್ಕೊಂಡು, ನಾಗದೇವತೆ ಸಿನಿಮಾ ನೋಡ್ತಿದ್ದ ರಿಯಾಗೆ ಹೊಳೆದಿದ್ದು, ಲಚ್ಚಿಯನ್ನು ಮತ್ತೊಂದು ಸಂಕಟಕ್ಕೆ ಸಿಲುಕಿಸುವ ಯತ್ನ. ಸಿನಿಮಾದಿಂದ ಹೊಸ ಐಡಿಯಾ ತಗೊಂಡು, ಪ್ರಯೋಗ ಮಾಡಲು ಹೊರಟಿದ್ದಾಳೆ.
ಹಾವು ಕಚ್ಚಿಸಲು ಪ್ಲ್ಯಾನ್ ಮಾಡಿದ ರಿಯಾ
ಲಚ್ಚಿಯ ಅಪ್ಪ ಯಾರು ಅಂತ ಸಂಗಮ್ ಹುಡುಕಾಟ ಶುರು ಮಾಡಿದ್ದಾನೆ. ಯಾರನ್ನೋ ಕರೆ ತಂದು ನೀವೂ ಲಚ್ಚಿ ಅಪ್ಪನ ಎಂದು ಕೇಳಿದ್ದಾನೆ. ಈ ಕಡೆ ಲಚ್ಚಿ ಮನೆಯಲ್ಲಿ ಏನು ಕೆಲಸ ಇಲ್ಲ ಅಂತ ಬೇಸರದಲ್ಲಿ ಕೂತಿದ್ದಾಳೆ. ಲಚ್ಚಿ ಹತ್ರ ಬಂದ ರಿಯಾ ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ಲಚ್ಚಿ ಬೇರೆ ಏನು ಕೆಲಸ ಇಲ್ಲ. ಅದಕ್ಕೆ ಸುಮ್ನೆ ಕೂತಿದ್ದೀನಿ ಅಂತ ಹೇಳಿದ್ದಾಳೆ. ರಿಯಾ ಸ್ವಲ್ಪ ನಂಬಿಕೆ ಬರಿಸಬೇಕಲ್ವಾ. ಹೀಗಾಗಿ ಕ್ಲೋಸ್ ಆಗಿದ್ದಾಳೆ. ಸ್ವಲ್ಪ ಮಾತನಾಡಿದ್ದಾಳೆ.
ಹುತ್ತದೊಳಗೆ ಕೈ ಹಾಕಲು ಹೇಳಿದ ರಿಯಾ
ಕೆಲಸ ಏನು ಇಲ್ಲ ಅಂದಿದ್ಕೆ ರಿಯಾ, ಹಾಗಾದ್ರೆ ತಾನು ಹೇಳಿದಂತೆ ಮಾಡ್ತೀಯ ಎಂದು ಕೇಳಿದ್ದಾಳೆ. ಲಚ್ಚಿನೋ ಸ್ವಾಭಿಮಾನದ ಹುಡುಗಿ, ಕೂತು ತಿನ್ನಬಾರದು ಅಂತ ನಂಬಿರೋ ಹುಡುಗಿ. ಅದಕ್ಕೆ ಕೆಲಸ ಅಂದ್ರೆ ನಾನು ಮಾಡ್ತೀನಿ ಅಂತ ಓಡಿ ಬರ್ತಾಳೆ. ರಿಯಾ ಕರೆದ ತಕ್ಷಣ ಸರಿ ಮಾಡ್ತೀನಿ, ಬರ್ತೀನಿ ಅಂತ ಹೊರಟಿದ್ದಾಳೆ. ರಿಯಾ, ಲಚ್ಚಿಯನ್ನು ನೇರವಾಗಿ ಹುತ್ತದ ಬಳಿ ಕರೆದುಕೊಂಡು ಹೋಗಿದ್ದಾಳೆ. ಅದನ್ನು ನೋಡಿ ಲಚ್ಚಿ ಶಾಕ್ ಆಗಿದ್ದಾಳೆ.

ಲಚ್ಚಿಯನ್ನು ದೇವರೇ ಕಾಪಾಡುತ್ತಾನಾ..?
ಲಚ್ಚಿಯನ್ನು ಹುತ್ತದ ಬಳಿ ನಿಲ್ಲಿಸಿ ಹುತ್ತದ ಒಳಕ್ಕೆ ಕೈ ಹಾಕು ಅಂತ ಹೇಳಿದ್ದಾಳೆ. ಆದರೆ ಲಚ್ಚಿ ಅದಕ್ಕೆ ಒಪ್ಪಿಲ್ಲ. ಕಡೆಗೆ ಮತ್ತೆ ಎಮೋಷನಲ್ ಬ್ಲಾಕ್ ಮೇಲ್ ಮಾಡಿದ್ದಾಳೆ. ಮನೆಯಲ್ಲಿ ಎಲ್ಲರನ್ನು ನೀನು ನಿನ್ನ ಕಡೆಗೆ ಸೆಳೆದುಕೊಂಡಿಲ್ಲ ಅನ್ನೋದೇ ಸತ್ಯ ಆದ್ರೆ, ಈ ಹುತ್ತದಲ್ಲಿ ಕೈ ಹಾಕು ಎಂದಿದ್ದಾಳೆ. ಆಗ ಲಚ್ಚಿ, ನಾನು ತಪ್ಪಿತಸ್ಥೆ ಅಲ್ಲ ಅನ್ನೋದು ಜನಕ್ಕೆ ಗೊತ್ತು. ಆದರೆ, ಹುತ್ತದಲ್ಲಿರುವ ಹಾವಿಗೆ ಹೇಗೆ ಗೊತ್ತಾಗುತ್ತೆ. ಅದು ಕಚ್ಚಿದರೆ ಏನು ಮಾಡೋದು ಅಂತ ಭಯ ಪಟ್ಟಿದ್ದಾಳೆ. ಆದರೆ, ರಿಯಾ ಬಿಟ್ಟಿಲ್ಲ. ಹುತ್ತದ ಒಳಗೆ ಕೈ ಹಾಕುವ ತನಕ ಬಿಟ್ಟಿಲ್ಲ.


Click it and Unblock the Notifications











