Namma Lacchi: ರಿಯಾಳಿಂದ ಮನೆ ತೊರೆಯಲು ಹೊರಟ ಲಚ್ಚಿ..ಎಲ್ಲಿಗೆ ಮುಂದಿನ ಪಯಣ?

By ಎಸ್ ಸುಮಂತ್

ನಮ್ಮ ಲಚ್ಚಿ ಎಲ್ಲಿ ಸೇರಬೇಕೋ ಅಲ್ಲಿಗೆ ಸೇರಿದ್ದಾಳೆ. ತಂದೆಯ ಪ್ರೀತಿಯನ್ನು, ಅಜ್ಜಿಯ ಮಮತೆಯನ್ನು, ದೊಡ್ಡಮ್ಮನ ವಾತ್ಸಲ್ಯವನ್ನು ಫೀಲ್ ಮಾಡ್ತಾ ಇದ್ದಾಳೆ. ಅಮ್ಮ ಇಲ್ಲ ಎಂಬ ನೋವಿನ ಜೊತೆಗೆ ಎಲ್ಲರ ಪ್ರೀತಿ ಸಿಕ್ಕಿದೆ. ಅದೊಂದೇ ಸಮಾಧಾನ ಲಚ್ಚಿಗೆ. ಎಷ್ಟೇ ನೋವಾದರೂ ಸರಿ ಅವರೆಲ್ಲರ ಪ್ರೀತಿಯ ಮುಂದೆ ಎಲ್ಲವನ್ನು ಮರೆತಿದ್ದಾಳೆ. ಸಿಕ್ಕ ಪ್ರೀತಿಯನ್ನೇ ಸ್ವೀಕರಿಸಿ, ಖುಷಿ ಪಡುತ್ತಿದ್ದಾಳೆ.

ಆದರೆ, ಆ ಖುಷಿಯನ್ನು ಸಂಪೂರ್ಣವಾಗಿ ಅನುಭವಿಸುವುದಕ್ಕೆ ಆಗುತ್ತಿಲ್ಲ. ಯಾಕಂದ್ರೆ ರಿಯಾಳ ಸಮಸ್ಯೆ ಲಚ್ಚಿಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಯಾವಾಗಲೂ ಲಚ್ಚಿಯ ಮೇಲೆ ಕತ್ತಿ ಮಸೆಯುವ ರಿಯಾ, ಈಗ ಲಚ್ಚಿಯನ್ನು ಪರ್ಮನೆಂಟ್ ಆಗಿ ಮನೆಯಿಂದ ಹೊರಗೆ ಕಳುಹಿಸುವ ಪ್ಲ್ಯಾನ್ ಮಾಡಿದ್ದಾಳೆ.

Namma Lacchi Serial Written Update on June 5th episode

ಲಚ್ಚಿಯ ಸತ್ಯ ಮನೆಯವರ ಎದುರು ಬಹಿರಂಗ

ರಿಯಾಳನ್ನು ದೊಡ್ಡ ಸಿಂಗರ್ ಮಾಡುವುದಕ್ಕೆ ಲಚ್ಚಿಯೇ ಬ್ಯಾಕ್ ಬೋನ್ ಆಗಿ ನಿಂತಿದ್ದಳು. ರಿಯಾ ಬರೀ ಲಿಪ್ ಸಿಂಕ್ ಮಾಡಿದರೆ ಲಚ್ಚಿಯ ಧ್ವನಿಯಿಂದ ಹಾಡು ಸಲೀಸಾಗಿ ಬರ್ತಾ ಇತ್ತು. ಸಂಗಮ್‌ಗೆ ಅದ್ಯಾವಾಗ ಅನುಮಾನ ಶುರುವಾಯ್ತೋ ಅಲ್ಲಿಂದ ಹುಡುಕಾಟವನ್ನು ಶುರು ಮಾಡಿದ. ಆಗಲೇ ಲಚ್ವಿಯ ರಿಯಲ್ ಟ್ಯಾಲೆಂಟ್ ಸಂಗಮ್ ಮುಂದೆ ಹೊರಗೆ ಬಂತು. ಈಗ ಲಚ್ಚಿಯನ್ನೇ ಬೆಳೆಸಲು ಹೊರಟಾಗ ದೀಪಿಕಾ ನಾಟಕ ಶುರು ಮಾಡಿಕೊಂಡಿದ್ದಾಳೆ.

ದೀಪಿಕಾಳ ಸ್ಥಿತಿಗೆ ಲಚ್ಚಿಯೇ ಕಾರಣ

ದೀಪಿಕಾ ಸದ್ಯ ಆಸ್ಪತ್ರೆಯಲ್ಲಿದ್ದಾಳೆ. ಈಗ ರಿಯಾಳಿಗೆ ಮತ್ತೊಂದು ಛಾನ್ಸ್ ಸಿಕ್ಕಿದೆ. ರಿಯಾಗೆ ಲಚ್ಚಿ ಕಂಡರೆ ಅದೆಷ್ಟು ಕೋಪ ಅಂದ್ರೆ ಅಬ್ಬಬ್ಬಾ ಜೀವ ತೆಗೆಯುವುದಕ್ಕೆ ಹೋಗಿದ್ದಳು. ಈಗ ಅಮ್ಮ ಆಸ್ಪತ್ರೆಯಲ್ಲಿರುವುದನ್ನೇ ಬಂಡವಾಳ ಮಾಡಿಕೊಂಡು ಲಚ್ಚಿಯ ಮುಂದೆ ಕಣ್ಣೀರು ಹಾಕುತ್ತಿದ್ದಾಳೆ. ನಿನ್ನಿಂದ ಮನೆಯಲ್ಲಿ ಜಗಳವಾಗ್ತಾ ಇದೆ. ನಿನ್ನಿಂದ ಮಮ್ಮಿ ಡ್ಯಾಡಿ ಮಧ್ಯೆ ಜಗಳವಾಗುತ್ತಿದೆ ಎಂದು ಕಣ್ಣೀರು ಹಾಕುತ್ತಿದ್ದಾಳೆ‌.

ರಿಯಾಳ ಮಾತಿಗೆ ಒಪ್ಪಿದ ಲಚ್ಚಿ

ರಿಯಾಳ ನಾಟಕ ನೋಡಿ ಲಚ್ಚಿ ಕಂಗಲಾಗಿದ್ದಾಳೆ. "ನಾನು ನಿಮಗೆ ಕೊಟ್ಟ ಮಾತನ್ನೇ ಉಳಿಸಿಕೊಂಡಿದ್ದೀನಿ. ಯಾರ ಬಳಿಯೂ ನಾನು ಸತ್ಯ ಹೇಳಿಲ್ಲ" ಅಂದ್ರು ರಿಯಾ ಕೇಳಿಸಿಕೊಳ್ಳುವುದಕ್ಕೆ ರೆಡಿ ಇಲ್ಲ. ನೀನು ಮನೆ ಬಿಟ್ಟು ಹೋಗು ಎಂಬುದೇ ಅವಳ ವಾದವಾಗಿದೆ. ನಿನ್ನಿಂದಾನೇ ಮನೆಯ ನೆಮ್ಮದಿ ನಾಶವಾಗುತ್ತಿದೆ ಎಂದು ಒತ್ತಿ ಒತ್ತಿ ಹೇಳುತ್ತಿದ್ದಾಳೆ. ರಿಯಾಳ ಮಾತಿಗೆ ಲಚ್ಚಿ ಕೂಡ ಒಪ್ಪಿಗೆ ಸೂಚಿಸಿದ್ದಾಳೆ. ಮನೆ ಬಿಟ್ಟು ಹೋಗಲು ಒಪ್ಪಿದ್ದಾಳೆ. ರಿಯಾಳಿಗೆ ಬೇಕಾಗಿದ್ದು ಅದೇ ಅಲ್ಲವೇ. ಸಾಕಷ್ಟು ಸಲ ಪ್ರಯತ್ನ ಪಟ್ಟಿದ್ದಳು. ಈಗ ಅದು ನನಸಾಗುತ್ತಿದೆ‌.

Namma Lacchi Serial Written Update on June 5th episode

ಲಚ್ವಿಯನ್ನು ತಡೆಯಲೇಬೇಕಿದೆ ಸಂಗಮ್

ಲಚ್ಚಿಗೆ ಬೆಂಗಳೂರು ತೀರಾ ಹೊಸದು. ಅಲ್ಲಿ ಯಾರ ಪರಿಚಯವೂ ಇಲ್ಲ. ತಪ್ಪಿಸಿಕೊಂಡು ಬಂದಾಗಲೂ ಸ್ಲಂ ಹುಡುಗರಿಂದ ಬಚಾವ್ ಆದಳು. ಹಾಡು ಹಾಡುವುದಕ್ಕೆ ಬರುತ್ತೆ ಎಂದು ಗೊತ್ತಾದ ಮೇಲೆ ಶ್ರೀಮಂತರ ಮನೆ ಸೇರಿದಳು. ಅಲ್ಲಿ ಎಲ್ಲರ ಪ್ರೀತಿ ಗಳಿಸಿದ್ದಾಳೆ. ಸ್ವಂತ ತಂದೆಗೆ ಈಗ ಲಚ್ಚಿಯೆಂದರೆ ಇಷ್ಟ. ಆದರೆ ಇಬ್ಬರಿಗೂ ಅದರ ಅರಿವಿಲ್ಲ. ಈಗ ಮನೆ ಬಿಟ್ಟು ಹೊರಟ ಲಚ್ಚಿಗೆ ಮತ್ತೆ ಅನಾಥಭಾವ ಕಾಡದೆ ಇರುವುದಿಲ್ಲ. ಸ್ಲಂ ಹುಡುಗರ ಜೊತೆಗೆ ಹೋಗುವುದು ಅನುಮಾನ. ಅಷ್ಟು ದೊಡ್ಡ ಸಿಟಿಯಲ್ಲಿ ಕಳೆದೋದರೆ ಮತ್ತೆ ಮಗಳು ಬೇಕು ಅಂತ ಹುಡುಕುವುದಾದರೂ ಹೇಗೆ..?

More from Filmibeat

English summary
Star suvarna serial Namma Lacchi Written Update on June 5th episode. Here is the details about Lacchi left home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X