Namma Lacchi: ಗಿರಿಜಾ ಪಾತ್ರ ಇಲ್ಲಿಗೆ ಕೊನೆ ಆಯ್ತಾ? 'ನಮ್ಮ ಲಚ್ಚಿ' ಕಥೆಯಲ್ಲೇನಿದು ಟ್ವಿಸ್ಟ್?
ತಂದೆ ಯಾರು ಎಂಬುದು ತಿಳಿಯಬಾರದು.. ತಂದೆಯ ಗುಣ ಲಚ್ಚಿಗೆ ಬರಬಾರದು ಅಂತ ಗಿರಿಜಾ ಪಟ್ಟ ಪಾಡು ಅಷ್ಟಿಷ್ಟಲ್ಲ. ಆದ್ರೆ ಕಡೆಗೆ ಆಗಿದ್ದೇನು? ಎಲ್ಲವೂ ಉಲ್ಟಾನೇ. ಆ ಕಡೆ ರಿಯಾಗೆ ಹಾಡು ಹಾಡು ಎಂದರೂ ಸಂಗೀತ ಒಲಿದಿಲ್ಲ. ಈ ಕಡೆ ಲಚ್ಚಿಗೆ ಹಾಡುವುದನ್ನು ಮೊದಲು ನಿಲ್ಲಿಸು ಎಂದರೂ ತಂದೆಯ ಗುಣ ಬಿಡುತ್ತಿಲ್ಲ.
ಲಚ್ಚಿಗೆ ತನ್ನ ತಂದೆ ಯಾರು ಎಂಬುದನ್ನು ಹೇಳದೆ ಗಿರಿಜಾ ಇಂದು ನಿಶ್ಯಬ್ಧವಾಗಿ ಮಲಗಿದ್ದಾಳೆ. ಲಚ್ಚಿ ಈಗ ಅನಾಥವಾಗಿದ್ದಾಳೆ. ಅಪ್ಪ ಯಾರೆಂದು ತಿಳಿದಿಲ್ಲ. ಅವ್ವ ಜೀವಂತವಾಗಿಲ್ಲ. ಲಚ್ಚಿಯ ಮುಂದಿನ ಬದುಕು ಹೇಗೆ ಎಂಬ ಚಿಂತೆ ಎಲ್ಲರನ್ನು ಕಾಡುತ್ತಿದೆ. ಸದ್ಯ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನೇ ಸಾಯಿಸಲಾಗಿದೆ. ಹಾಗಿದ್ದರೆ, ಗಿರಿಜಾ ಪಾತ್ರ ಇಲ್ಲಿಗೆ ಕೊನೆ ಆಯ್ತಾ? ಇಲ್ಲಾ ವೀಕ್ಷಕರಿಗೆ ಟ್ವಿಸ್ಟ್ ಕಾದಿದೆಯಾ? ಇಂತಹ ನೂರೆಂಟು ಪ್ರಶ್ನೆಗಳು ಎದ್ದಿವೆ.

ಕಡೆಗೂ ಕಸಿದು ಬಿಟ್ಟಳು ಜೀವ..?
ಮೇಲುಕೋಟೆಗೆ ಬಂದ ದೀಪಿಕಾ ಸುಮ್ಮನೆ ಕಾರಿನಲ್ಲಿ ಕೂತಿದ್ದರೆ ಇಷ್ಟೆಲ್ಲಾ ಸಮಸ್ಯೆಗಳು ಆಗ್ತಾನೆ ಇರ್ಲಿಲ್ಲ. ಆದ್ರೆ ಜಟಕ ಗಾಡಿಯಂತೆ ಓಡಿಸುತ್ತೀಯಾ ಅಂತ ಹೇಳಿ, ಡ್ರೈವರ್ ಕಡೆಯಿಂದ ಕಾರು ತೆಗೆದುಕೊಂಡವಳು ಜೋರಾಗಿ ಓಡಿಸಲು ಆರಂಭಿದಳು. ಎಷ್ಟೇ ಹೇಳಿದರು ಕೇಳದೆ, ಕಡೆಗೂ ರಸ್ತೆಯಲ್ಲಿ ಬರುತ್ತಿದ್ದ ಗಿರಿಜಾಳ ಮೇಲೆ ಕಾರು ಹತ್ತಿಸಿಯೇ ಬಿಟ್ಟಳು. ಗಿರಿಜಾ ಪ್ರಜ್ಞೆ ಕಳೆದುಕೊಂಡಿದ್ದನ್ನು ಕಂಡು, ಊರಿನವರೆಲ್ಲಾ ಬರುವುದನ್ನು ಗಮನಿಸಿ, ಡ್ರೈವರ್‌ಗೆ ಬ್ಲಾಕ್ ಮೇಲ್ ಮಾಡಿದಳು. ನೀನೇ ಆಕ್ಸಿಡೆಂಟ್ ಮಾಡಿದ್ದು ಎಂದು ಹೇಳುತ್ತೇನೆ ಎಂದು ಹೇಳಿ, ಹೆದರಿಸಿ ಅಲ್ಲಿಂದ ಎಲ್ಲರೂ ಓಡಿ ಹೋಗುವಂತೆ ಮಾಡಿದಳು.

ಮತ್ತೆ ಬರ್ತಾನಾ ಮೇಲುಕೋಟೆಗೆ ಸಂಗಮ್..?
ಸಂಗಮ್ ಗಿರಿಜಾಳನ್ನು ನೆನೆದೆ ಮೇಲುಕೋಟೆಗೆ ಬಂದಿದ್ದ. ನೋಡುವಂತ ಅವಕಾಶ ಸಾಕಷ್ಟು ಬಾರಿ ಸಿಕ್ಕಿದರು ಇಬ್ಬರು ಮುಖಾ ಮುಖಿಯಾಗಲೇ ಇಲ್ಲ. ಗಿರಿಜಾ, ಸಂಗಮ್‌ನನ್ನು ನೋಡಿ ಕೂಗಿ ಕರೆದರು ಸಂಗಮ್‌ಗೆ ಅದು ಕೇಳಿಸಲೇ ಇಲ್ಲ. ಕಾರ್ಯಕ್ರಮ ಮುಗಿಸಿ ಮನೆಗೆ ಬಂದಿದ್ದಾನೆ. ಮನೆಯಲ್ಲೂ ಗಿರಿಜಾಳ ಹಳೆಯ ನೆನಪುಗಳೇ ಕಾಣಿಸುತ್ತಿವೆ. ಅವಳ ಪ್ರೀತಿಯೇ ಚುಚ್ಚುತ್ತಿದೆ. ಮತ್ತೆ ಎದ್ದು ಮೇಲುಕೋಟೆಗೆ ಹೋಗ್ತಾನಾ ಸಂಗಮ್ ಎನ್ನುವಷ್ಟು ಡಿಸ್ಟರ್ಬ್ ಆಗುತ್ತಿದ್ದಾನೆ.

ಗಿರಿಜಾ ನಿಜಕ್ಕೂ ಸತ್ತಿದ್ದಾಳಾ..?
ಗಿರಿಜಾಳಿಗೆ ಸಂಪೂರ್ಣವಾಗಿ ಶಕ್ತಿ ಕುಂದಿತ್ತು. ರಕ್ತದ ಕ್ಯಾನ್ಸರ್ ಕೊನೆ ಹಂತಕ್ಕೆ ತಲುಪಿತ್ತು. ಆಸ್ಪತ್ರೆಯಲ್ಲಿ ಡ್ರಿಪ್ಸ್ ಹಾಕಿಸಿಕೊಂಡಿದ್ದ ಗಿರಿಜಾ ಕಿತ್ತು ಬಿಸಾಕಿ ಹಾಗೆ ಬಂದಿದ್ದಳು. ಅಷ್ಟರಲ್ಲಾಗಲೇ ಸುಸ್ತಾಗಿದ್ದಳು. ಕಾರು ಗುದ್ದಿದ ರಭಸಕ್ಕೆ ಏನು ಮಾತನಾಡದ ಸ್ಥಿತಿ ತಲುಪಿದ್ದಾಳೆ. ಮೂರ್ಚೆ ಹೋಗಿರುವ ಸಾಧ್ಯತೆಯೂ ಇದೆ. ಆದರೆ, ಗಿರಿಜಾ ಇನ್ನಿಲ್ಲ ಎಂದೇ ಭಾವಿಸಿ, ಅವಳನ್ನು ಮಲಗಿಸಿದ್ದಾರೆ. ಹೂವಿನ ಅಲಂಕಾರ ಮಾಡಿದ್ದಾರೆ.

ಲಚ್ಚಿ ಮುಂದಿನ ಭವಿಷ್ಯವೇನು?
ಗಿರಿಜಾಗೆ ಲಚ್ಚಿ ಹಾಡುವುದು ಕೊಂಚವೂ ಇಷ್ಟವಿರಲಿಲ್ಲ. ತಂದೆಯಂತೆಯೇ ಆಗಿ ಬಿಡುತ್ತಾಳೆ ಎಂಬ ನೋವು ಅವಳನ್ನು ಕಾಡುತ್ತಿತ್ತು. ಅದಕ್ಕಾಗಿಯೇ ಲಚ್ಚಿಗೆ ಹಾಡು ಹೇಳಲು ಬಿಡುತ್ತಾ ಇರಲಿಲ್ಲ. ಲಚ್ಚಿ ಹಾಡಿದಾಗೆಲ್ಲಾ ಹೊಡೆಯುತ್ತಿದ್ದಳು. ಈಗ ಲಚ್ಚಿಯ ಹಾಡಿನಿಂದ ಗಿರಿಜಾಳನ್ನು ಎಚ್ಚರಗೊಳಿಸಬೇಕಿದೆ. ತಾಯಿಯ ಚಿಕಿತ್ಸೆಗಾಗಿ ಹಣ ಹೊಂದಿಸಿಕೊಂಡು ಬಂದ ಲಚ್ಚಿಗೆ ದೊಡ್ಡ ಆಘಾತವೇ ನಡೆದು ಹೋಗಿದೆ. ತಾಯಿ ಇನ್ನಿಲ್ಲ ಎಂಬುದನ್ನು ಆ ಪುಟ್ಟ ಕಂದ ಹೇಗೆ ತಾನೇ ಸಹಿಸಿಕೊಳ್ಳುತ್ತೆ. ಹೇಗಾದರೂ ಮಾಡಿ ಅವ್ವನನ್ನು ಬದುಕಿಸಿಕೊಳ್ಳಬೇಕು ಅಂತ ಹಾಡು ಹಾಡಲು ಶುರು ಮಾಡಿದ್ದಾಳೆ.


Click it and Unblock the Notifications











