Namma Lacchi: ಸಂಗಮ್ - ಗಿರಿಜಾ ಲವ್ ಸ್ಟೋರಿ ದೀಪಿಕಾಗೆ ತಿಳಿದೇ ಹೋಯ್ತು.. ಆದರೂ ವೀಕ್ಷಕರಿಗೆ ಬೇಸರ!
ಲಚ್ಚಿಯ ಪ್ರೀತಿಯ ಅಮ್ಮ ಭೂಮಿ ಬಿಟ್ಟು ಶಾಶ್ವತವಾಗಿ ಹೊರಟೇ ಹೋಗಿದ್ದಾಳೆ. ಮಗಳಿಗಾಗಿ ಎದ್ದು ಬರಬಹುದು ಎಂಬ ಊಹೆಯನ್ನು ಮೀರಿ ಗಿರಿಜಾ ಬೆಂಕಿಯಲ್ಲಿ ಆವಿಯಾಗಿ ಹೋಗಿಯೇ ಬಿಟ್ಟಿದ್ದಾಳೆ. ಲಚ್ಚಿ ಈಗ ಕಂಪ್ಲೀಟ್ ಅನಾಥವಾಗಿದ್ದಾಳೆ. ಒಬ್ಬಳೇ ಕೂತು ಅವ್ವನಿಲ್ಲದ ದಿನಗಳನ್ನು ದೂಡುವುದು ಹೇಗೆ ಅಂತ ಲೆಕ್ಕ ಹಾಕುತ್ತಿದ್ದಾಳೆ. ಲಚ್ಚಿಗೆ ಈಗ ಉಳಿದಿರುವುದು ಕಣ್ಣೀರು ಬಿಟ್ಟರೆ, ಅವ್ವನ ನೆನಪುಗಳಷ್ಟೇ.
ಅಪ್ಪನ ಹುಡುಕಾಟವನ್ನು ಅವ್ವ ಇದ್ದಾಗಲೇ ಶುರು ಮಾಡಿದ್ದಳು. ಆದರೆ, ಅವ್ವ ತಮ್ಮಿಬ್ಬರ ಪ್ರೇಮಕಥೆಯನ್ನಷ್ಟೇ ಹೇಳಿದ್ದಳೇ ವಿನಃ, ಆ ಪ್ರೇಮಕಥೆಯ ಹೀರೊ ಹೆಸರನ್ನೇ ಹೇಳದೆ ಉಳಿಸಿ ಬಿಟ್ಟಿದ್ದಳು. ಅಪ್ಪನ ಹುಡುಕಾಟ ಶುರುವಾದಾಗಲೇ ಲಚ್ಚಿಗೆ ಅವ್ವನ ಅನಾರೋಗ್ಯದ ಚಿಂತೆ ಶುರುವಾಗಿತ್ತು.

ದೀಪಿಕಾಳಿಗೆ ತಿಳಿದೇ ಹೋಯ್ತು ಗಿರಿಜಾಳ ವಿಚಾರ
ಸಂಗಮ್ ಮೇಲುಕೋಟೆಯಿಂದ ಬಂದಾಗಿಂದ ಆರೋಗ್ಯ ಸರಿ ಇಲ್ಲ. ಜೊತೆಗೆ ಸಂಗಮ್ ನಾರ್ಮಲ್ ಆಗಿ ನಡೆದುಕೊಳ್ಳುತ್ತಿಲ್ಲ. ಏನೇನೋ ಮಾತನಾಡುತ್ತಾನೇ, ಹೇಗೇಗೋ ಆಡುತ್ತಾನೆ. ಇದೆಲ್ಲಕ್ಕೂ ಯಾವುದೋ ಕಾರಣವಿದೆ ಎಂದು ಅದರ ಹಿಂದೆ ಹೋದ ದೀಪಿಕಾಗೆ ಸತ್ಯದ ಅರಿವಾಗಿದೆ. ಕಡೆಗೂ ದೀಪಿಕಾಗೆ, ಗಿರಿಜಾಳ ವಿಚಾರ ಗೊತ್ತಾಗಿದೆ. ಗಿರಿಜಾ ನಾನು ಪ್ರೀತಿಸಿದ ಹುಡುಗಿ ಎಂದು ಕಿರುಚಿ ಹೇಳಿದ್ದಾನೆ ಸಂಗಮ್.

ಬ್ಲಾಕ್ ಮೇಲ್ ಮಾಡಿ ವಿಚಾರ ತಿಳಿದ ದೀಪಿಕಾ
ಸಂಗಮ್ ಬಂದಾಗಿನಿಂದ ಏನನ್ನೋ ಕಳೆದುಕೊಂಡವನಂತೆ ಆಡುತ್ತಿದ್ದಾನೆ. ಅವನ ಕಂಟ್ರೋಲ್‌ನಲ್ಲಿ ಅವನೇ ಇಲ್ಲ. ಇದು ದೀಪಿಕಾಗೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಅರೆ ಪ್ರಜ್ಞಾವಸ್ಥೆಯಲ್ಲಿ ಮಲಗಿದ್ದ ಸಂಗಮ್‌ನನ್ನು ಸಾಕಷ್ಟು ಕಾಡಿಸಿದ್ದಾಳೆ. ವಿಚಾರ ಹೇಳು ಅಂತ. ಆಗಲೂ ಸಂಗಮ್ ಹೇಳಲಿಲ್ಲ. ಕೋಪಗೊಂದ ದೀಪಿಕಾ, ಸಂಗಮ್‌ಗೆ ಏನಿಷ್ಟ ಎಂಬುದು ಗೊತ್ತಿದ್ದ ಕಾರಣ ಆ ಕೆಲಸವನ್ನು ಮಾಡಿದ್ದಾಳೆ. ಸಂಗೀತ ವಾದ್ಯಗಳೆಂದರೆ ಸಂಗಮ್‌ಗೆ ಬಲು ಆಸೆ. ಬಲು ಪ್ರೀತಿ. ಅವುಗಳನ್ನು ಹೊಡೆದು ಹಾಕುವ ಪ್ರಯತ್ನ ಮಾಡಿ, ಸಂಗಮ್ ಬಳಿ ನಿಜ ಬಾಯಿ ಬಿಡಿಸಿದ್ದಾಳೆ. ಎಲ್ಲದನ್ನು ಚೂರ್ ಚೂರ್ ಮಾಡ್ತೀನಿ ಎಂದು ಹೆದರಿಸಿದಾಗ ಸಂಗಮ್, ಗಿರಿಜಾ ನಾನು ಪ್ರೀತಿಸಿದ ಹುಡುಗಿ ಎಂದು ಕಿರುಚಿದ್ದಾನೆ.

ಸಂಗಮ್‌ಗೆ ಗಿರಿಜಾ ಸಾವಿನ ಸುದ್ದಿ ಗೊತ್ತಾಯ್ತಾ?
ದೀಪಿಕಾಗೆ ಒಳ ಭಯ ಹೆಚ್ಚಾಗಿದೆ. ಅಲ್ಲಿ ಹಳ್ಳಿಯಿಂದ ಬರುವಾಗ ಗಿರಿಜಾಳಿಗೆ ಕಾರು ಗುದ್ದಿಸಿ, ಪ್ರಾಣ ತೆಗೆದು ಬಂದಿದ್ದಾಳೆ. ಆಕೆ ಸತ್ತಲಕಾ ಬದುಕಿದಳಾ ಎಂಬುದನ್ನು ನೋಡಿಲ್ಲ. ಈ ಕಡೆ ಸಂಗಮ್ ಅದೇ ಗುಂಗಲ್ಲಿದ್ದಾನೆ. ಯಾವುದೋ ಹೆಂಗಸಿನ ಮೇಲೆ ಕಾರು ಹತ್ತಿದ್ದನ್ನು ನೋಡಿದ್ದಾನೆ. ಕನವರಿಕೆಯಲ್ಲಿ ಗಿರಿಜಾಳೇ ಸತ್ತು ಹೋದಳೆಂದುಕೊಂಡು, ಗಿರಿಜಾಳ ಮೇಲೆ ದೀಪಿಕಾನೆ ಕಾರು ಹತ್ತಿಸಿದಳೆಂದು ಸಂಗಮ್ ಭ್ರಮೆಯಲ್ಲಿದ್ದಾನೆ. ಆದರೆ ಆ ಭ್ರಮೆಯೇ ನಿಜವೆಂದು ತಿಳಿಯಲು ಇನ್ನೆಷ್ಟು ದಿನ ಬೇಕೋ..?.

ಗಿರಿಜಾ ಸತ್ತಿದ್ದಕ್ಕೆ ಪ್ರೇಕ್ಷಕರು ಬೇಸರ
ಕಥೆ ಚೆನ್ನಾಗಿ ಸಾಗುತ್ತಾ ಇತ್ತು. ಗಿರಿಜಾ ಮತ್ತು ಲಚ್ಚಿಯ ಬಾಂಧವ್ಯ ನೋಡುವುದಕ್ಕೆ ಇನ್ನಷ್ಟು ಖುಷಿಯಾಗ್ತಾ ಇತ್ತು. ಆದ್ರೆ ಗಿರಿಜಾಳ ಪಾತ್ರ ಇಷ್ಟು ಬೇಗ ಅಗತ್ಯವಾಗಿದ್ದಕ್ಕೆ ಪ್ರೇಕ್ಷಕವರ್ಗ ತುಂಬಾನೇ ಬೇಸರ ಮಾಡಿಕೊಂಡಿದೆ. "ಗಿರಿಜಾಳನ್ನು ಸಾಯಿಸಬಾರದಿತ್ತು, ಗಿರಿಜಾ ಇದ್ದಿದ್ದರೆ ಕಥೆ ಇನ್ನು ಚೆನ್ನಾಗಿ ತೋರಿಸಬಹುದಿತ್ತು, ಗಿರಿಜಾ ಇಲ್ಲದೆ ಲಚ್ಚಿಗೆ ದಿಕ್ಕು ಯಾರು, ದೀಪಿಕಾ ಮನೆಗೆ ಕರೆದುಕೊಂಡು ಹೋದರೆ ಅಲ್ಲಿ ಅಮ್ಮ ಮಗಳು ಬಿಡುತ್ತಾರಾ, ನಾವೆಲ್ಲಾ ಎಷ್ಟೇ ಕೇಳಿಕೊಂಡರೂ ಗಿರಿಜಾಳನ್ನು ಬದುಕಿಸಲೇ ಇಲ್ಲ" ಎಂದಹ ಆಕ್ರೋಶ ಹೊರ ಹಾಕುತ್ತಿದ್ದಾರೆ.


Click it and Unblock the Notifications











