Namma Lacchi: ಲಚ್ಚಿ ಮೇಲೆ ಪ್ರೀತಿ ತೋರಿಸುತ್ತಿರುವ ಶಾಂತಾ ಮೇಲೆ ಮಕ್ಕಳಿಗೂ ಅನುಮಾನ..!

By ಎಸ್ ಸುಮಂತ್

ಲಚ್ಚಿ ಈಗ ತಂದೆ ಗೊತ್ತಿಲ್ಲದ, ತಾಯಿ ಇಲ್ಲದ ಅನಾಥೆಯಾಗಿದ್ದಾಳೆ. ಲಚ್ಚಿಗೆ ಇನ್ನು ಜೊತೆಯಾಗಿರೋದು ಅತ್ತೆಯ ಮಕ್ಕಳು ಮಾತ್ರ. ಸುಗ್ಗಿ ಎಂದರೆ ಲಚ್ಚಿಗೆ ಬಹಳ ಪ್ರೀತಿ. ಗಿರಿಜಾ ಬದುಕಿದ್ದಾಗಂತು ಶಾಂತಾ ಯಾವತ್ತಿಗೂ ಲಚ್ಚಿಯನ್ನು ಪ್ರೀತಿಸಿದವಳೇ ಅಲ್ಲ. ಅಮ್ಮ ಮಗಳನ್ನು ಕಂಡರೆ ಉರಿದು ಉರಿದು ಬೀಳ್ತಾ ಇದ್ದಳು. ಇನ್ನು ಇದೀಗ ಶಾಂತಾಳನ್ನು ಯಾರೂ ಕೇಳುವಂತೆಯೂ ಇಲ್ಲ.

ಲಚ್ಚಿಯ ಕಂಠವನ್ನು ಶಾಂತಾ ಯಾವಾಗಲೂ ಹಣಕ್ಕಾಗಿಯೇ ಬಳಕೆ ಮಾಡಿಕೊಳ್ತಾ ಇದ್ದಳು. ಲಚ್ಚಿಯಿಂದ ಹಣ ಬರುತ್ತೆ ಎಂದು ಗೊತ್ತಾಗಿದ್ದೆ ತಡ, ಲಚ್ಚಿಗೆ ಹಿಂಸೆ ಕೊಡುವುದಕ್ಕೆ ಶುರು ಮಾಡಿದಳು, ಬದುಕಿದ್ದ ಗಿರಿಜಾಳಿಗೆ, ಸಂಗಮ್ ಹೆಸರೇಳಿ ಕೊಡುವುದಕ್ಕೆ ಶುರು ಮಾಡಿದಳು. ಆದರೆ, ಈಗ ಲಚ್ಚಿ ಮೇಲೆ ಅಪಾರ ಪ್ರೀತಿ ಬಂದವಳಂತೆ ಆಡುತ್ತಿದ್ದಾಳೆ.

ಗಿರಿಜಾ ಸತ್ತಾಗ ಆಸ್ತಿಗೆ ಕಣ್ಣಾಕಿದ್ದ ಶಾಂತಾ

ಗಿರಿಜಾ ಸತ್ತಾಗ ಆಸ್ತಿಗೆ ಕಣ್ಣಾಕಿದ್ದ ಶಾಂತಾ

ಶಾಂತಾಳಿಗೆ ಪ್ರೀತಿಗಿಂತ ಆಸ್ತಿ‌ ಮೇಲೆಯೇ ಹೆಚ್ಚು ಆಸಕ್ತಿ. ಅದಕ್ಕೆಂದೇ ಯಾವಾಗಲೂ ಲಚ್ಚಿಯನ್ನು ಹಾಡು ಹೇಳುವುದಕ್ಕೆ ಕಳುಹಿಸಿ, ತಾನೂ ಹಣ ಮಾಡಿಕೊಳ್ಳುತ್ತಿದ್ದಳು. ಗಿರಿಜಾ ಸತ್ತಾಗಲೂ ಶಾಂತಾಳ ಮನಸ್ಸಿಗೇನು ನೋವಾಗಲಿಲ್ಲ. ಒಂದು ಕ್ಷಣ ಶಾಕ್ ಆದಳು ಅಷ್ಟೇ. ಆದರೆ, ಅವಳ ಸಾವಿನ ಬಳಿಕ ಮನೆಯಲ್ಲಿ ಗಿರಿಜಾಳ ಪಾಲಿಗಿದ್ದ ಹಸು, ಒಂದು ಎಕರೆ ಹೊಲ ನನ್ನದಾಯ್ತಲ್ಲ ಎಂದೇ ಖುಷಿ ಪಟ್ಟವಳು ಶಾಂತಾ. ಯಾವಾಗಲೂ ಹಣ ಹಣ ಎಂದೇ ಬಾಯಿ ಬಿಡುತ್ತಿದ್ದ ಶಾಂತಾ, ಗಿರಿಜಾ ಬದುಕಿದ್ದಾಗಲೂ ಅವಳನ್ನು ಸಂತಸದಿಂದ ಇರಲು ಒಂದು ದಿನವೂ ಬಿಟ್ಟಿರಲಿಲ್ಲ. ಅವಮಾನಗಳನ್ನು ಮಾಡುತ್ತಾ ಇದ್ದಳು.

ಲಚ್ಚಿಗೆ ಸಮಾಧಾನ ಮಾಡಿದ ಶಾಂತಾ

ಲಚ್ಚಿಗೆ ಸಮಾಧಾನ ಮಾಡಿದ ಶಾಂತಾ

ಈಗ ಲಚ್ಚಿಗೆ ಪ್ರಪಂಚವೇ ಮುಳುಗಿ ಹೋದ ಅನುಭವವಾಗ್ತಾ ಇದೆ. ಅವ್ವನಿಲ್ಲದ ಬದುಕು ಬದುಕುವುದಾದರೂ ಹೇಗೆ ಅನ್ನೋ ಪ್ರಶ್ನೆ ಕಾಡುತ್ತಿದೆ. ಒಬ್ಬಳೇ ಕೂತು ಅಳುತ್ತಾಲೇ, ಊಟ ಮಾಡದೆ ಉಪವಾಸ ಮಾಡುತ್ತಿದ್ದಾಳೆ. ಲಚ್ಚಿಯ ಕಣ್ಣೀರಿಗೆ ಪಾರವೇ ಇಲ್ಲದಂತಾಗಿದೆ. ಒಬ್ಬಳೇ ಕೂತು ಅಳುತ್ತಾ ಕೂತಿದ್ದಳು. ಆಗ ಬಂದ ಶಾಂತಾ ಸಮಾಧಾನ ಮಾಡುವ ಪ್ರಯತ್ನ ಮಾಡಿದಳು. ಲಚ್ಚಿಗೆ ರೇಡಿಯೋ ಅಂದ್ರೆ ಪ್ರಾಣ. ಕೋಗಿಲಮ್ಮ ಅಂತಾನೇ ಅಂತಾಳೆ. ಶಾಂತಾ ಬಂದು ಕೋಗಿಲಮ್ಮ ನಿನ್ನ ಜೊತೆಗಿಟ್ಟುಕೋ ಸಮಾಧಾನ ಆಗುತ್ತೆ ಅಂತ ಕೊಟ್ಟಿದ್ದಾಳೆ.

ಅಮ್ಮನ ನಡವಳಿಕೆಗೆ ಮಕ್ಕಳೇ ಶಾಕ್..!

ಅಮ್ಮನ ನಡವಳಿಕೆಗೆ ಮಕ್ಕಳೇ ಶಾಕ್..!

ಶಾಂತಾ ಎಷ್ಟು ಸ್ವಾರ್ಥಿ ಅನ್ನೋದು ಎಲ್ಲರಿಗೂ ಗೊತ್ತು. ಮಕ್ಕಳಿಗೂ ಗೊತ್ತಾಗಿದೆ. ಲಚ್ಚಿಯನ್ನು ಯಾವತ್ತು ಪ್ರೀತಿಯಿಂದ ಮಾತನಾಡಿಸಿದವಳೇ ಅಲ್ಲ. ಗಿರಿಜಾಗೆ ಅವಮಾನ ಮಾಡ್ತಾ ಇದ್ದಳು. ಇದನ್ನೆಲ್ಲಾ ಮಕ್ಕಳು ಕಣ್ಣಾರೆ ನೋಡ್ತಾ ಇದ್ರು. ಈಗ ಲಚ್ಚಿಗೆ ಆಸರೆಯಾದವಳಂತೆ ನಡೆದುಕೊಳ್ಳುತ್ತಿದ್ದಾಗ ಮಕ್ಕಳೇ ಅನುಮಾನ ಪಡುತ್ತಾ ಇದ್ದಾರೆ. ಸುಗ್ಗಿ, ತಮ್ಮನ ಬಳಿ ನೋಡು ಅವ್ವ ಎಷ್ಟು ನಾಟಕವಾಡ್ತಾ ಇದ್ದಾಳೆ ಅಂದಾಗ ತಮ್ಮ ಇಲ್ಲ ಅವ್ವ ಬದಲಾಗಿದ್ದಾಳೆ ಅನ್ನುತ್ತಿದ್ದಾಳೆ.

ಗಿರಿಜಾಳ ಸ್ಥಾನದಲ್ಲಿ ಜೊತೆಯಾದ ಶಾಂತಾ

ಗಿರಿಜಾಳ ಸ್ಥಾನದಲ್ಲಿ ಜೊತೆಯಾದ ಶಾಂತಾ

ಲಚ್ಚಿಯ ಜೊತೆಗೆ ಯಾವಾಗಲೂ ಗಿರಿಜಾ ಮಲಗಿಕೊಳ್ಳುತ್ತಿದ್ದಳು. ಈಗ ಗಿರಿಜಾ ಇಹಲೋಕ ತ್ಯಜಿಸಿ ಹೋಗಿದ್ದಾಳೆ. ಈಗ ಲಚ್ಚಿಯ ಜೊತೆಗೆ ಮಲಗಿಕೊಳ್ಳುವುದಕ್ಕೆ ಗಿರಿಜಾ ಇಲ್ಲ. ಲಚ್ಚಿಗೆ ಅಮ್ಮನ ಮೇಲೆ ಕೈ ಹಾಕಿ ಮಲಗುವ ಅಭ್ಯಾಸ. ಈಗ ಆ ಜಾಗ ಖಾಲಿ ಇದೆ. ಆದರೆ, ಸ್ವಾರ್ಥದಿಂದಾನೇ ಬದುಕುವ ಶಾಂತಾ ಆ ಜಾಗವನ್ನು ತುಂಬಲು ಹೊರಟಿದ್ದಾಳೆ. ಲಚ್ಚಿಯ ಪಕ್ಕಾ ಸ್ವಾರ್ಥದಿಂದಾನೇ ಮಲಗಿದ್ದಾಳೆ.

More from Filmibeat

English summary
Star Suvarna Namma Lacchi Serial Written Update on March 14th Episode. Here is the details about Shanthala doing drama.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X