Namma Lacchi: ಇದೊಂದು ಅಗ್ರಿಮೆಂಟ್ ಮದುವೆ .. ಸತ್ಯ ಗೊತ್ತಾದ ಮೇಲೆ ದೀಪಿಕಾ ತೆಗೆದುಕೊಂಡ ನಿರ್ಧಾರವೇನು?
ದೀಪಿಕಾ ಸಂಪಿಗೆ ಹಳ್ಳಿಯಿಂದ ವಾಪಾಸ್ ಆಗುವಾಗ ಕಾರು ಹತ್ತಿಸಿದ್ದು, ತನ್ನ ಗಂಡ ಪ್ರೇಮಿಸಿದ್ದ ಹುಡುಗಿ ಎಂಬ ಅರಿವು ಇಲ್ಲದೆ ಕೊಲೆ ಮಾಡಿ ಬಂದಿದ್ದಾಳೆ. ಆದರೆ, ಸಂಗಮ್ ಪ್ರೀತಿ ಅದನ್ನು ಮನಸ್ಸಿಗೆ ನಾಟುವಂತೆ ಮಾಡಿದೆ. ಆ ಕಡೆ ಸಂಗಮ್‌ಗೂ ಸತ್ಯ ಗೊತ್ತಿಲ್ಲ ಗಿರಿಜಾ ಸತ್ತಿದ್ದಾಳಾ ಎಂಬುದು. ಈ ಕಡೆ ದೀಪಿಕಾಗೂ ಗೊತ್ತಿಲ್ಲ ನಾನು ಕೊಂದದ್ದು ಗಿರಿಜಾಳನ್ನು ಅಂತ.
ಸಂಗಮ್ ಮಾತಾಡಿದ ಯಾವುದೋ ಗುಂಗು ದೀಪಿಕಾಳನ್ನು ರೊಚ್ಚಿಗೇಳುವಂತೆ ಮಾಡಿದೆ. ಸಂಗಮ್ ಮನಸ್ಸಲ್ಲಿ ಇನ್ಯಾವುದೋ ಸತ್ಯವಿರುವುದು ಗೊತ್ತಾಗಿದೆ. ಆ ಸತ್ಯವೇನು ಎಂಬುದನ್ನು ತಿಳಿಯಲೇಬೇಕೆಂಬ ಸಾಹಸಕ್ಕೆ ಕೈ ಹಾಕಿದ್ದಾಳೆ. ಆದರೆ, ದೀಪಿಕಾಗೆ ಅರಿವಿರಲಿಲ್ಲ ಸತ್ಯ ಗೊತ್ತಾದರೇ ತನಗೆ ಅರಗಿಸಿಕೊಳ್ಳುವ ಶಕ್ತಿ ಇಲ್ಲವೆಂದು.

ದೀಪಿಕಾಗೆ ಗೊತ್ತಾಯ್ತು ಪ್ರೇಯಸಿಯ ವಿಚಾರ
ಇಷ್ಟು ವರ್ಷಗಳ ಕಾಲ ತನ್ನ ಪ್ರೀತಿಯ ಪಯಣವನ್ನು ಸಂಗಮ್ ಯಾರಿಗೂ ಗೊತ್ತಾಗದಂತೆ ಮುಚ್ಚಿಟ್ಟುಕೊಂಡು ಬಂದಿದ್ದ. ಅದರಲ್ಲೂ ದೀಪಿಕಾಗೆ ಗೊತ್ತಾಗದಂತೆ ಕಾಪಾಡಿದ್ದ. ಅದ್ಯಾವಾಗ ಮೇಲುಕೋಟೆಗೆ ಹೋಗಿ, ಹಳೆಯ ನೆನಪಲ್ಲಿ ತೋಯ್ದು, ಗಿರಿಜಾಳ ಪ್ರೀತಿಯ ನೆನಪಲ್ಲಿ ಮಿಂದೆದ್ದು ಬಂದನೋ ಅವನ ಕಂಟ್ರೋಲ್‌ನಲ್ಲಿ ಅವನೇ ಇಲ್ಲದಂತೆ ಆಗಿ ಬಿಟ್ಟ. ಆ ನಶೆಯಲ್ಲಿಯೇ ದೀಪಿಕಾಳ ಮುಂದೆ ತನ್ನ ಪ್ರೇಮ ಪಯಣದ ಸುಂದರ ನೆನಪುಗಳನ್ನು ಹೇಳಿಕೊಂಡ. ಭೇಟಿಯಾಗಿದ್ದು ಯಾವಾಗ, ಪ್ರೀತಿ ಚಿಗುರಿದ್ದು ಹೇಗೆ..? ಎಲ್ಲವನ್ನೂ ಮೊದಲೇ ಯಾವಾಗಲೂ ಕಿಡಿಕಾರುವ ದೀಪಿಕಾ ಹಳೆಯದ್ದೊಂದು ಲವ್ ಸ್ಟೋರಿ ಕೇಳಿದರೇ ಸುಮ್ಮನೆ ಇರ್ತಾಳಾ..?

ದೀಪಿಕಾಳ ತಂದೆಯ ವಿಚಾರ ತಿಳಿದೇ ಬಿಡ್ತು!
ಗಿರಿಜಾಳನ್ನು ಮರೆತು ನಿನ್ನನ್ನು ಮದುವೆಯಾಗಿದ್ದು, ಯಾಕೆ ಎಂಬುದನ್ನು ಬಿಡಿಸಿ ಹೇಳಿದ್ದಾನೆ. ರೊಟ್ಟಿ ಹಳಸಿತ್ತು, ನಾಯಿ ಹಸಿದಿತ್ತು ಎಂಬ ಉದಾಹರಣೆಯನ್ನು ಕೊಟ್ಟು ತಿಳಿಸಿದ್ದಾನೆ. "ಅವತ್ತು ನಾನು ಅವಕಾಶಕ್ಕಾಗಿ ಕಾದೆ. ಗಾಡ್ ಫಾದರ್ ಆಗಿ ನಿಲ್ತೀನಿ ಅಂತ ನಿಮ್ಮ ತಂದೆ ಅಂದ್ರು. ನಾನು ಖುಷಿ ಪಟ್ಟೆ. ಆದರೆ, ಅವರು ಒಂದು ಕಂಡೀಷನ್ ಹಾಕಿದ್ರು. ಗಾಡ್ ಫಾದರ್‌ನಿಂದ ಫಾದರ್ ಇನ್ ಲಾ ಆಗ್ಬೇಕು ಅಂದುಕೊಂಡಿದ್ದೀನಿ. ನನ್ನ ಮಗಳನ್ನು ಮದುವೆಯಾದರೆ ಮಾತ್ರ ಬೆಳೆಸ್ತೀನಿ ಅಂದ್ರು. ನಂಗೂ ಸಕ್ಸಸ್ ಬೇಕಿತ್ತು. ಅಗ್ರಿಮೆಂಟ್‌ಗೆ ಸಹಿ ಹಾಕಿದೆ" ಎಂದಿದ್ದಾನೆ.

ಗೋಪಾಲನಿಗೆ ಸಿಕ್ತಾನಾ ಸಂಗಮ್ ?
ಈ ಕಡೆ ಲಚ್ಚಿಗೆ ಅಪ್ಪ ಯಾರು ಅಂತಾನೇ ಗೊತ್ತಿಲ್ಲ. ಪ್ರಾಣಕ್ಕೆ ಪ್ರಾಣವಾಗಿದ್ದ ಅವ್ವ ಮಸಣ ಸೇರಿದ್ದಾಳೆ. ಇನ್ನು ಶಾಂತಾ ಲಾಭವೇ ಇಲ್ಲದೆ ನೀರು ಸಹ ಕೊಡಲ್ಲ. ಅದಕ್ಕೆ ಗೋಪಾಲ, ಲಚ್ಚಿಯ ಮಾವ ಒಂದು ನಿರ್ಧಾರಕ್ಕೆ ಬಂದಿದ್ದಾನೆ. ಅದನ್ನು ಶಾಂತಾ ಬಳಿ ಕೂಡ ಹೇಳಿದ್ದಾನೆ. "ಸಂಗಮ್ ಅವರನ್ನು ಭೇಟಿ ಮಾಡಿ ಇರುವ ಸತ್ಯವನ್ನು ಹೇಳೋಣಾ ಅಂದುಕೊಂಡಿದ್ದೀನಿ" ಎಂದಾಗ ಶಾಂತ ಕೂಡ ಸರಿ ಎಂದಿದ್ದಾಳೆ.

ದೀಪಿಕಾಳ ಕೆಲಸದಾಳಾಗುತ್ತಾಳಾ ಲಚ್ಚಿ?
ಮೊದಲೇ ಸಂಗಮ್ ಮತ್ತು ಗಿರಿಜಾ ಲವ್ ಸ್ಟೋರಿ ಕೇಳಿ ದೀಪಿಕಾ ಧಗಧಗ ಅಂತ ಉರೀತಾ ಇದ್ದಾಳೆ. ಇನ್ನು ಗಿರಿಜಾಗೊಬ್ಬಳು ಮಗಳಿದ್ದಾಳೆ. ರಿಯಾಗೆ ಸಮ ಎಂದು ಗೊತ್ತಾದರೆ ಸುಮ್ಮನೆ ಬಿಡುತ್ತಾಳಾ..? ಸಂಗಮ್ ಗೆ ಎದುರಾಡದೆ ಮನೆಗೆ ಕರೆದುಕೊಂಡು ಬಂದರೂ ಲಚ್ಚಿಯನ್ನು ಪ್ರೀತಿಯಿಂದ ಅಂತು ನೋಡಿಕೊಳ್ಳಲ್ಲ. ಬದಲಿಗೆ ಮನೆ ಕೆಲಸದವಳಂತೆ, ಶಾಂತಾಳಿಗಿಂತ ನೋವು ಕೊಟ್ಟು, ಹಿಂಸೆ ಕೊಡುವ ಮನಸ್ಥಿತಿಯಲ್ಲಿದ್ದಾಳೆ ದೀಪಿಕಾ.


Click it and Unblock the Notifications











