Namma Lacchi: ಹಾಡುಗಾರಿಕೆ ಶಾಂತಾಳಿಗೆ ವರ.. ಲಚ್ಚಿಗೆ ಶಾಪ.. ಮಾಮನ ಮಾತು ಕೇಳಿ ಸೇಫ್ ಆಗ್ತಾಳಾ ?
ಲಚ್ಚಿಯ ಅಪ್ಪ ಸಂಗಮ್ ಎಂಬುದು ಗೋಪಾಲ್‌ಗೆ ಮೊದಲಿನಿಂದಾನೂ ಗೊತ್ತು. ಶಾಂತಾಗೆ ಇತ್ತೀಚೆಗಷ್ಟೇ ಗೊತ್ತಾಯ್ತು. ಈಗ ಗೋಪಾಲ ಒಂದು ನಿರ್ಧಾರಕ್ಕೆ ಬಂದಿದ್ದಾನೆ. ಲಚ್ಚಿಯನ್ನು ಸಂಗಮ್‌ಗೆ ಒಪ್ಪಿಸಿಬಿಡೋಣಾ ಅಂತ. ಇಷ್ಟು ವರ್ಷ ನಿಮ್ಮ ಮಗಳನ್ನು ಸಾಕಿದ್ದೀವಿ. ಇವಳು ನಿಮ್ಮ ಮತ್ತು
ಲಚ್ಚಿಗೆ ಗಿರಿಜಾನೇ ಪ್ರಪಂಚ ಆಗಿದ್ದಳು. ಗಿರಿಜಾಳೆ ಊಟ ಮಾಡಿಸ್ತಾ ಇದ್ಲು. ಗಿರಿಜಾಳೆ ಬಟ್ಟೆ ಹಾಕ್ತಾ ಇದ್ಲು. ಗಿರಿಜಾಳೆ ಕಷ್ಟ ಸುಖ ನೋಡಿಕೊಳ್ಳುತ್ತಾ ಇದ್ಲು. ಆದ್ರೆ ಗಿರಿಜಾಳ ಹಠಾತ್ ನಿಧನದಿಂದ ಲಚ್ಚಿ ಕಂಗಾಲಾಗಿ ಹೋಗಿದ್ದಾಳೆ. ಅವ್ವ ಎಲ್ಲಿಗೆ ಹೋಗಿದ್ದಾಳೆ ಎಂಬ ಅರಿವು ಇಲ್ಲದೆ ಇರುವ ವಯಸ್ಸು ಅದು. ಅವ್ವ ನೀನು ಬೇಕು ಅಂತ ಅಷ್ಟೇ ಹಠ ಮಾಡುತ್ತಿದ್ದಾಳೆ. ಇದರ ನಡುವೆ ಲಚ್ಚಿವ ನೋವನ್ನು ಶಾಂತ ಬಂಡವಾಳ ಮಾಡಿಕೊಳ್ಳುತ್ತಿದ್ದಾಳೆ.
ಲಚ್ಚಿಗೆ ಹಾಡೆಂದರೆ ಪ್ರಾಣ. ಬಳುವಳಿ ಬಂದಿರುವುದು ಅವರ ಅಪ್ಪನಿಂದ. ಬದುಕಿರುವ ತನಕ ಅವರ ಅವ್ವ ಗಿರಿಜಾಗೆ ಸುತಾರಾಮ್ ಲಚ್ಚಿ ಹಾಡುವುದು ಇಷ್ಟವಿರಲಿಲ್ಲ. ಇದೆ ಸಂಗೀತವನ್ನು ಇದೀಗ ಶಾಂತಾ ಬಂಡವಾಳ ಮಾಡಿಕೊಂಡಿದ್ದಾಳೆ. ಗಿರಿಜಾ ಬದುಕಿದ್ದಾಗಲೇ ಹೆದರಿಸಿ, ಬೆದರಿಸಿ ಹಾಡಿಸುತ್ತಿದ್ದಳು. ಈಗ ಆ ದಾರಿಗಿಂತ ಸಮಾಧಾನ ಮಾಡಿ, ಆಸೆ ತೋರಿಸಿ ಹಾಡಿಸುತ್ತಾಳೆ.

ಲಚ್ಚಿಗೆ ಸಿಗ್ತಾನಾ ಅಪ್ಪಯ್ಯ..?
ಲಚ್ಚಿಯ ಅಪ್ಪ ಸಂಗಮ್ ಎಂಬುದು ಗೋಪಾಲ್‌ಗೆ ಮೊದಲಿನಿಂದಾನೂ ಗೊತ್ತು. ಶಾಂತಾಗೆ ಇತ್ತೀಚೆಗಷ್ಟೇ ಗೊತ್ತಾಯ್ತು. ಈಗ ಗೋಪಾಲ ಒಂದು ನಿರ್ಧಾರಕ್ಕೆ ಬಂದಿದ್ದಾನೆ. ಲಚ್ಚಿಯನ್ನು ಸಂಗಮ್‌ಗೆ ಒಪ್ಪಿಸಿಬಿಡೋಣಾ ಅಂತ. ಇಷ್ಟು ವರ್ಷ ನಿಮ್ಮ ಮಗಳನ್ನು ಸಾಕಿದ್ದೀವಿ. ಇವಳು ನಿಮ್ಮ ಮತ್ತು ಗಿರಿಜಾಳ ಮಗಳು ಅಂತ ಬಿಟ್ಟು ಬರೋಣಾ. ನೀನು ಬೇಕಾದ್ರೆ ಇಷ್ಟು ವರ್ಷ ಸಾಕಿದ್ದಕ್ಕೆ ಹಣ ಬೇಕು ಅಂತ ಕೇಳು ಎಂದಿದ್ದಾನೆ. ಅದಕ್ಕೂ ಒಪ್ಪಿದ್ದ ಶಾಂತಾ ಅದ್ಯಾಕೋ ಈಗ ಉಲ್ಟಾ ಹೊಡೆಯುತ್ತಿದ್ದಾಳೆ.

ಶಾಂತಾಳ ಸ್ವಾರ್ಥದ ಬಗ್ಗೆ ಲಚ್ಚಿಗೆ ಕಿವಿ ಮಾತು
ಸಂಗಮ್ ಬಳಿ ಲಚ್ಚಿಯನ್ನು ಬಿಡುವ ತೀರ್ಮಾನವಾಗಿತ್ತು. ಅದರಂತೆ ಶಾಂತ ಕೂಡ ಇದೇ ಒಳ್ಳೆ ಐಡಿಯಾ ಅಂತ ಅಸ್ತು ಎಂದಿದ್ದಳು. ಆದರೆ, ಶಾಂತಾಗೆ ಅದೇನು ಅರ್ಥವಾಯಿತೋ ಏನೋ..? ಲಚ್ಚಿಯನ್ನು ಬಿಟ್ಟು ಬಂದರೆ ಮತ್ತೆ ಮತ್ತೆ ಹಣ ಪಡೆಯುವುದಕ್ಕೆ ಆಗಲ್ಲ ಎಂದು ತಿಳಿದು, ಬೇಡ ಹಾಡು ಹಾಡಿಯೇ ಅವಳಿಂದ ಹಣ ಸಂಪಾದಿಸುತ್ತೀನಿ ಅಂತ ಕೂತಿದ್ದಾಳೆ. ಇದರಿಂದ ಕಂಗಾಲಾದ ಗೋಪಾಲ ಲಚ್ಚಿ ಬಳಿ ಬಂದು ನಿನ್ನ ಅತ್ತೆ ಶಾಂತಾಳನ್ನು ನಂಬಬೇಡ. ಹಣಕ್ಕೋಸ್ಕರ ನಿನ್ನ ಮಾರಿ ಬಿಡುತ್ತಾಳೆ ಎಂದು ಹೆದರಿಸಿದ್ದಾನೆ.

ಗೋಪಾಲ ಇಲ್ಲದ ವೇಳೆ ಲಚ್ಚಿಯನ್ನು ಬಳಸಿಕೊಳ್ತಾಳಾ ಶಾಂತಾ..?
ಸದ್ಯ ಗೋಪಾಲನಿಗೆ ದೊಡ್ಡ ಜವಾಬ್ದಾರಿ ಇದೆ. ಒಂದು ಲಚ್ಚಿಯ ಭವಿಷ್ಯ ಮತ್ತೊಂದು ಗಿರಿಜಾಳ ಆತ್ಮಕ್ಕ ಮುಕ್ತಿ ನೀಡುವುದು. ಅದಕ್ಕೆಂದೇ ಆಸ್ತಿ ತೆಗೆದುಕೊಂಡು ಹೊರಟಿದ್ದಾನೆ. ಆದರೆ, ಈ ಗ್ಯಾಪ್‌ನಲ್ಲಿ ಶಾಂತ ತನ್ನ ಬೇಳೆ ಬೇಯಿಸಿಕೊಳ್ಳುವ ಪ್ಲ್ಯಾನ್ ಕೂಡ ಮಾಡಿದ್ದಾಳೆ. ಗೋಪಾಲ ಅದೇನೆ ಹೇಳಿ ಹೋದರೂ ಶಾಂತಾಳಿಗೆ ಯಾವ ರೀತಿ ಪೂಸಿ ಹೊಡೆಯಬಹುದು ಎಂಬುದು ಗೊತ್ತಿದೆ.

ಅಪ್ಪನ ಆಸೆ ತೋರಿಸಿ ಹಾಡು ಹೇಳಿಸುತ್ತಾಳಾ?
ಶಾಂತಾಳಿಗೆ ಲಚ್ಚಿಯ ಅಪ್ಪನ ಬಗ್ಗೆ ಗೊತ್ತು. ಲಚ್ಚಿಗೆ ತಂದೆ ಬಗ್ಗೆ ತಿಳಿಯುವ ಕುತೂಹಲ. ಶಾಂತಾಗೆ ಹಣದ ಮೇಲೆ ಮೋಹ. ಈಗ ಲಚ್ಚಿಮಾವನ ಮಾತಿಗೆ ಕಟ್ಟು ಬಿದ್ದು ಹಾಡು ಹೇಳದೇ ಹೋದರೆ, ಶಾಂತಾಗೆ ಲಚ್ಚಿಯನ್ನು ಪಳಗಿಸುವ ವಿಚಾರವೂ ತಿಳಿದಿದೆ. ಅದುವೇ ಅವರ ಅಪ್ಪನ ಬಗ್ಗೆ ಸತ್ಯ ಹೇಳ್ತೀನಿ ಅಂತ ಹೇಳಿದ್ರೆ ಖಂಡಿತ ಶಾಂತಾ ಕುಣಿದಂತೆ ಲಚ್ಚಿಕುಣಿಯಲಿದ್ದಾಳೆ.


Click it and Unblock the Notifications











