Namma Lacchi: ಅತ್ತೆಯಿಂದ ತಪ್ಪಿಸಿಕೊಂಡು ಲಚ್ಚಿ.. ಅಪ್ಪನ ಮಡಿಲು ಸೇರ್ತಾಳಾ?
ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡುತ್ತಾ ಇದ್ದಂತ ಗಿರಿಜಾ ಬಿಟ್ಟು ಹೋಗಿದ್ದಾಳೆ. ಲಚ್ಚಿಗೆ ಇನ್ನು ಅವ್ವ ಇಲ್ಲದ ಬದುಕನ್ನು ದೂಡುವುದಕ್ಕೆ ತಿಳಿಯುತ್ತಿಲ್ಲ. ಇದರ ಮಧ್ಯೆ ಅತ್ತೆಯ ಕಾಟ ಜೋರಾಗಿಯೇ ಶುರುವಾಗಿದೆ. ಲಚ್ಚಿಯ ಹಾಡಿನಿಂದ ಒಳ್ಳೆಯ ಹಣ ಸಂಪಾದನೆ ಮಾಡಿಕೊಳ್ಳಬಹುದು ಎಂದು ಅದ್ಯಾವಾಗ ಶಾಂತಾಳಿಗೆ ಗೊತ್ತಾಯ್ತೋ ಅಂದಿನಿಂದಾನೇ ಲಚ್ಚಿಯ ಹಿಂದೆ ಬಿದ್ದಳು ಶಾಂತಾ. ಗಿರಿಜಾ ಇದ್ದಾಗ ಹೆದರಿಸಿ, ಬೆದರಿಸಿ ಹಣ ಸಂಪಾದನೆ ಮಾಡುತ್ತಿದ್ದಳು. ಆದರೆ ಈಗ ಪ್ರೀತಿಯ ನಾಟಕವಾಡಿ ಲಚ್ಚಿಯನ್ನು ಯಾಮಾರಿಸಲು ಹೋಗಿದ್ದಳು.
ಗಿರಿಜಾ ಸತ್ತ ಮೇಲೆ ಶಾಂತಾಳ ವರ್ತನೆ ತುಂಬಾ ಬದಲಾಗಿತ್ತು. ಲಚ್ಚಿಯನ್ನು ಮುದ್ದು ಮಾಡ್ತಾ ಇದ್ಲು, ಹೊಸ ಬಟ್ಟೆ ಕೊಡಿಸ್ತಾ ಇದ್ಲು, ಸಮಯಕ್ಕೆ ಸರಿಯಾಗಿ ಊಟ ಕೊಡುತ್ತಿದ್ದಳು. ಸಂಪೂರ್ಣವಾಗಿ ಅತ್ತೆ ಬದಲಾಗಿದ್ದಾಳೆ ಎಂದೇ ನಂಬಿದ್ದಳು. ಆಮೇಲೆ ಅವಳ ಬಂಡವಾಳ ಮಾಮ ಹೇಳಿದ ಮೇಲೆ ಗೊತ್ತಾಗೋಯ್ತು.

ಶಾಂತಾಳಿಂದ ಲಚ್ಚಿಗೆ ಅಪಾಯ
ಗೋಪಾಲ ಬುದ್ದಿ ಮಾತು ಹೇಳಿದ್ದ. ಲಚ್ಚಿಯನ್ನು ಅವಳ ಅಪ್ಪಯ್ಯನ ಬಳಿ ಬಿಡೋಣಾ, ನೀನು ಬೇಕಾದ್ರೆ ಸಾಕಿರುವುದಕ್ಕೆ ಒಂದಿಷ್ಟು ಹಣ ಕೇಳು ಎಂದಿದ್ದ. ಅದಕ್ಕೆ ಶಾಂತಾ ಕೂಡ ಮೊದಲಿಗೆ ಒಪ್ಪಿದ್ದಳು. ಬಳಿಕ ಅದೇನು ದುರಾಸೆ ಬೆಳೆಯಿತೋ. ಮತ್ತದೆ ಹಾಡು ಹೇಳುವುದಕ್ಕೇನೆ ಬಿಡಲು ತೀರ್ಮಾನಿಸಿದಳು. ಈಗ ಲಚ್ಚಿಯನ್ನು ಹಣ ತೆಗೆದುಕೊಂಡು, ಕಾರ್ಯಕ್ರಮಕ್ಕೆ ಕಳುಹಿಸಲು ರೆಡಿಯಾಗಿದ್ದಾಳೆ. ಕರೆದುಕೊಂಡು ಹೋಗುವುದಕ್ಕೆ ಆತನು ಬಂದಿದ್ದಾನೆ. ಲಚ್ಚಿಗೆ ಇಷ್ಟವಿಲ್ಲದೆ ಇದ್ದರೂ, ಶಾಂತ ಬಲವಂತವಾಗಿ ಕಳುಹಿಸುತ್ತಿದ್ದಾಳೆ.

ಸಂಪಿಗೆಹಳ್ಳಿಗೆ ಬಂದ ದೀಪಿಕಾ
ಇತ್ತ ದೀಪಿಕಾಗೆ ಸಂಗಮ್‌ನ ಲವ್ ಸ್ಟೋರಿ ಗೊತ್ತಾಗಿದೆ. ತನಗೂ ಒಂದು ಲವ್ ಸ್ಟೋರಿ ಇತ್ತು ಎಂಬುದನ್ನು ಗಿರಿಜಾ ಒಪ್ಪಿಕೊಳ್ಳುವುದಕ್ಕೆ ಸಿದ್ದವಿಲ್ಲ. ಆದರೆ, ಸಂಗಮ್‌ಗಿರುವ ಲವ್ ಸ್ಟೋರಿಯನ್ನು ಹುಡುಕಿ ತರಲು ಹೊರಟಿದ್ದಾಳೆ. ಸಂಪಿಗೆ ಹಳ್ಳಿಗೆ ಬಂದಿರುವ ದೀಪಿಕಾ, ಗಿರಿಜಾಳ ಮನೆ ಅರಸಿ ಹೊರಟಿದ್ದಾಳೆ. ಜೊತೆಗೆ ಊರಿನಲ್ಲಿಯೇ ಒಬ್ಬ ವ್ಯಕ್ತಿ ಸಿಕ್ಕಿದ್ದು, ಆತನಿಂದ ಗಿರಿಜಾಳ ಮನೆ ಹುಡುಕಿ ಹೊರಟಿದ್ದಾಳೆ. ಎದುರಲ್ಲಿಯೇ ಗಿರಿಜಾಳ ಮಗಳು ಕಂಡಿದ್ದಾಳೆ. ಮಾತನಾಡಿಸೋಣಾ ಎನ್ನುವಷ್ಟರಲ್ಲಿ ಆ ವ್ಯಕ್ತಿಯೇ ಅದನ್ನು ತಪ್ಪಿಸಿದ್ದಾನೆ.

ಅತ್ತೆ ಮಕ್ಕಳಿಂದ ಲಚ್ಚಿಗೆ ಸಹಾಯ
ಲಚ್ಚಿಗೆ ತನ್ನ ಗೋಪಾಲ್ ಮಾಮ ಬುದ್ದಿ ಹೇಳಿ ಹೋಗಿದ್ದ. ಅತ್ತೆ ನಿನ್ನನ್ನು ಮಾರುವುದಕ್ಕೆ ಹಿಂದೆ ಮುಂದೆ ನೋಡಲ್ಲ. ಅವಳಿಂದ ದೂರ ಇರು. ನಾನು ನಿಮ್ಮವ್ವನ ಅಸ್ತಿ ಬಿಟ್ಟು ಬರುತ್ತೇನೆ ಎಂದಿದ್ದ. ಈಗ ಲಚ್ಚಿ ಅಸಾಹಯಕ ಸ್ಥಿತಿಯಲ್ಲಿದ್ದಾಳೆ. ಒಮ್ಮೆ ಅತ್ತೆಯಿಂದ, ಹಣ ಕೊಟ್ಟವನಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದಳು. ಮತ್ತೆ ಸಿಕ್ಕಿಬಿದ್ದಳು. ಇದನ್ನು ಕಂಡ ಸುಗ್ಗಿ ಮತ್ತು ತಮ್ಮ ಲಚ್ಚಿಯ ಸಹಾಯಕ್ಕೆ ನಿಂತರು. ಆ ವ್ಯಕ್ತಿ ಮತ್ತು ಅವ್ವನನ್ನು ಹಿಡಿದುಕೊಂಡು ಲಚ್ಚಿಗೆ ಸಹಾಯ ಮಾಡಿದ್ದಾರೆ.

ಲಚ್ಚಿಗೆ ತಂದೆಯ ಭೇಟಿ ಮಾಡುವ ಸಮಯ ಬಂತಾ..?
ಲಚ್ಚಿಗೆ ಅಪ್ಪ ಯಾರು ಅಂತ ಗೊತ್ತೆ ಆಗಲಿಲ್ಲ. ಆದರೆ ಈಗ ಅನಿವಾರ್ಯತೆ ಕಾರಣದಿಂದ ಲಚ್ಚಿ ಊರು ಬಿಡುತ್ತಿದ್ದಾಳೆ. ಆ ಕಡೆ ದೀಪಿಕಾ ಸಂಪಿಗೆ ಹಳ್ಳಿಗೆ ಹೋಗಿದ್ದಾಳೆ ಎಂಬ ಆತಂಕದಲ್ಲಿದ್ದಾನೆ ಸಂಗಮ್. ಹೀಗಾಗಿ ದೀಪಿಕಾಳನ್ನು ಹುಡುಕಿ ಸಂಗಮ್ ಕೂಡ ಹೊರಟಿದ್ದಾನೆ. ಇದರ ಮಧ್ಯೆ ಲಚ್ಚಿಯೂ ಸಂಗಮ್ ಗೆ ಸಿಗುವ ಸಾಧ್ಯತೆ ದಟ್ಟವಾಗಿದೆ. ತಂದೆ ಮಗಳ ಒಂದಾಗುವ ಸಮಯ ಬಂದೇ ಬಿಟ್ಟಿದೆ.


Click it and Unblock the Notifications











