Namma Lacchi: ಗೊತ್ತಿಲ್ಲದ ಊರಲ್ಲಿ ಕಳೆದೋಗಿದ್ದಾಳೆ ಲಚ್ಚಿ : ಸಂಗಮ್ ಕೈಗೆ ಸಿಗೋದು ಹೇಗೆ?
ಲಚ್ಚಿಯಿಂದ ಹಣವನ್ನೇ ನಿರೀಕ್ಷೆ ಮಾಡುತ್ತಿದ್ದ ಶಾಂತಾ, ಕೊನೆಯಲ್ಲಿ ಮಾರಾಟ ಮಾಡಿ ಬಿಡೋಣಾ ಎಂದು ನಿರ್ಧರಿಸಿದ್ದಳು. ಗೋಪಾಲನಿಲ್ಲದ ಸಮಯ ನೋಡಿಕೊಂಡು ಲಚ್ಚಿಯನ್ನು ಮಾರುವ ಎಲ್ಲಾ ಯೋಜನೆಯನ್ನು ಹಾಕಿಕೊಂಡಿದ್ದಳು. ಮಕ್ಕಳಿಂದ ಹೇಗೋ ಲಚ್ಚಿ ತಪ್ಪಿಸಿಕೊಂಡಳು. ಆದರೆ ಶಾಂತಾಳಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಹಿಂದೆ ಹಿಂದೆಯೇ ಹುಡುಕುತ್ತಾ ಬಂದಳು.
ಅಷ್ಟರಲ್ಲಿ ಗೋಪಾಲ ಕೂಡ ಸಿಕ್ಕಿದ. ತಂಗಿ ಗಿರಿಜಾಳ ಸಾವಿಗೆ ನ್ಯಾಯ ಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಗೋಪಾಲ ಬರುವಷ್ಟರಲ್ಲಿ ಲಚ್ಚಿಯ ಬದುಕು ಅಪಾಯದಲ್ಲಿತ್ತು. ಮಕ್ಕಳಿಂದ ವಿಚಾರ ತಿಳಿದು ಲಚ್ಚಿಯನ್ನು ಹುಡುಕಲು ಹೊರಟ. ಅದೇ ಹಾದಿಯಲ್ಲಿಯೇ ಬಂದ ಲಚ್ಚಿ ಕಡೆಗೂ ಮಾಮನ ಕೈಗೆ ಸಿಕ್ಕಿದಳು. ಗೋಪಾಲ ಪ್ಲ್ಯಾನ್ ಮಾಡಿ, ಲಚ್ಚಿಯನ್ನು ಸಂಗಮ್ ಬಳಿ ಬಿಡುವುದಕ್ಕೆ ಹೊರಟಿದ್ದಾನೆ.

ಲಚ್ಚಿ ವೇಷ ಬದಲಿಸಿದ ಗೋಪಾಲ
ಶಾಂತಾಳಿಂದ ಲಚ್ಚಿಯನ್ನು ಹೇಗಾದರೂ ಕಾಪಾಡಬೇಕು ಎಂದುಕೊಂಡ ಗೋಪಾಲ, ಬೇರೆ ರೀತಿಯದ್ದೇ ಪ್ಲ್ಯಾನ್ ಮಾಡಿದ. ಬೆಂಗಳೂರಿಗೆ ಬಸ್ ಹತ್ತಬೇಕು ಎಂದುಕೊಂಡಾಗಲೇ ಅಲ್ಲಿಗೇ ಬಂದು ನಿಂತಿದ್ದಳು ಶಾಂತಾ. ಹೀಗಾಗಿ ಏನು ಮಾಡಬೇಕು ಎಂಬುದು ತಿಳಿಯದೆ ಗಂಡು ಮಗುವಿನ ವೇಷ ಹಾಕಿಸುವುದಕ್ಕೆ ನಿರ್ಧರಿಸಿದ. ವಿಗ್ ಹಾಕಿ, ಶರ್ಟ್, ಚಡ್ಡಿ ಹಾಕಿ, ವಿಭೂತಿ ಬಳಿದು ಬಾಲಕನಂತೆಯೇ ಮಾಡಿದ.
ಲಚ್ಚಿಯನ್ನು ಹಾಗೋ ಹೀಗೋ ಬೆಂಗಳೂರಿನ ಬಸ್ ಹತ್ತಿಸಿಬಿಟ್ಟ. ಈ ಕಡೆ ಶಾಂತಾಳಿಗೆ ಅನುಮಾನ ಬಂದು ಬಸ್‌ನಲ್ಲಿ ಹತ್ತಿ ಎಲ್ಲಾ ಚೆಕ್ ಮಾಡಿದಳು. ಲಚ್ಚಿಗೆ ಆತಂಕ ಅತ್ತೆ ನನ್ನ ನೋಡೊ ಬಿಟ್ಟರೆ ಅಂತ. ಆದರೆ, ಕಡೆಗೂ ಶಾಂತಾಳಿಗೆ ಲಚ್ಚಿಯ ಗುರುತು ಸಿಗಲೇ ಇಲ್ಲ. ಬಸ್‌ನಿಂದ ಇಳಿದ ಮೇಲೆ ಗೋಪಾಲ, ಅವಳಿಗೆ ಸರಿಯಾಗಿಯೇ ಬುದ್ದಿ ಕಲಿಸಿದ. ಕಪಾಳಕ್ಕೆ ಹೊಡೆದು ಲಚ್ಚಿಯ ಜೀವನಕ್ಕೆ ಬರದಂತೆ ಎಚ್ಚರಿಕೆ ನೀಡಿದ್ದಾನೆ.
ಲಚ್ಚಿಯನ್ನು ಒಬ್ಬಂಟಿ ಮಾಡಿದ ಗೋಪಾಲ
ಶಾಂತಾಳಿಂದ ಮೊದಲು ಲಚ್ಚಿಯನ್ನು ಕಾಪಾಡಬೇಕು ಎಂಬುದೇ ಗೋಪಾಲನ ಗುರಿಯಾಗಿತ್ತು. ಹೀಗಾಗಿ ಶಾಂತಾಳಿಗೆ ಕಪಾಳ ಮೋಕ್ಷ ಮಾಡಿ, ಬಸ್ ಹತ್ತೋಣ ಎನ್ನುವಷ್ಟರಲ್ಲಿ ಬೆಂಗಳೂರು ಬಸ್ ಅಲ್ಲಿಂದ ಮುಂದೆ ಚಲಿಸಿದೆ. ಗೋಪಾಲನ ಕಣ್ಣಿಗೆ ಕಾಣದಷ್ಟು ದೂರಕ್ಕೆ ಬಸ್ ಸಂಚರಿಸಿದೆ. ಈ ಕಡೆ ಗೋಪಾಲನಿಗೆ ಆತಂಕ ಶುರುವಾಗಿದೆ. ಲಚ್ಚಿ ಗೊತ್ತಿಲ್ಲದ ಊರಿಗೆ ಒಬ್ಬಳೆ ಪ್ರಯಾಣಿಸಿ, ಬದುಕುವುದಾದರೂ ಹೇಗೆ..? ಇದು ಗೋಪಾಲನ ಆತಂಕಕ್ಕೂ ಕಾರಣವಾಗಿದೆ.

ಅತ್ತೆಯ ಕಣ್ತಪ್ಪಿಸಿ ಲಚ್ಚಿ ಬಸ್ ನಲ್ಲಿ ಕುಳಿತು ಬಿಟ್ಟಿದ್ದಾಳೆ. ಗೋಪಾಲ ಕೂಡ ಲಚ್ಚಿತ ತಂಟೆಗೆ ಬರದಂತೆ ಶಾಂತಾಳನ್ನ ನೋಡಿಕೊಂಡಿದ್ದಾನೆ. ಆದರೆ, ಈಗ ಲಚ್ಚಿ ಕುಳಿತಿದ್ದ ಬಸ್ ಮಂಡ್ಯದಿಂದ ಹೊರಟಿದೆ. ನಿದ್ದೆಗೆ ಜಾರಿದ ಲಚ್ಚಿಗೆ ಎಚ್ಚರವಾದಾಗ ಕಂಡಿದ್ದು, ಪರಿಚಯವೇ ಇಲ್ಲದ, ಮಹಾಸಾಗರ ಎಂದೇ ಭಾವಿಸಿದ್ದ ಬೆಂಗಳೂರು. ಅದು ಕಂಡಕ್ಟರ್ ಎಚ್ಚರ ಮಾಡಿದಾಗಲೇ ತಿಳಿದಿದ್ದು, ತಾನೂ ಬೆಂಗಳೂರಿನಲ್ಲಿ ಇರುವುದೆಂದು.
ಹಿಂದಿನ ಸೀಟಿನಲ್ಲಿಯೇ ಮಾಮ ಕುಳಿತಿದ್ದಾನೆಂದುಕೊಂಡಿದ್ದ ಲಚ್ಚಿಗೆ ಆಘಾತವಾಗಿದೆ. ಬಸ್ಸಿನಿಂದ ಕೆಳಗೆ ಇಳಿದರೇ ಮಾಮನ ಸುಳಿವೇ ಇಲ್ಲ. ನೋಡ ನೋಡುತ್ತಿದ್ದಂತೆ ಬಸ್ ಕೂಡ ಮುಂದೇ ಸಾಗಿಯೇ ಬಿಡ್ತು. ಲಚ್ಚಿಗೆ ದಿಕ್ಕು ತೋಚದಂತೆ ಆಗಿದೆ. ಈಗ ಕತ್ತಲ ಹಾದಿಯಲ್ಲಿಯೇ ಲಚ್ಚಿಯ ಪಯಣ ಸಾಗಿದೆ. ಈ ಪಯಣದಲ್ಲಿಯೇ ಲಚ್ಚಿಗೆ ತಂದೆ ಸಿಗಬಹುದು. ಅವಳ ಬದುಕು ಮುಂದೆ ಸಂಗಮ್ ಮನೆಯಲ್ಲಿಯೇ ಸಾಗಬಹುದು.


Click it and Unblock the Notifications











