Namma Lacchi: ಗಿರಿಜಾಳನ್ನು ಉಳಿಸಲು ಹೊರಟ ಸಂಗಮ್‌ಗೆ ಹೆಂಡತಿ, ಮಗಳ ಸ್ಥಿತಿ ತಿಳಿಯಲೇ ಇಲ್ಲ..!
ಗಿರಿಜಾಳ ಸ್ಥಿತಿ ತುಂಬಾ ಗಂಭೀರವಾಗಿದೆ. ಕ್ಯಾನ್ಸರ್ ಕೊನೆ ಹಂತವನ್ನು ತಲುಪುತ್ತಿದೆ. ಆ ಕಡೆ ಕೈಯ್ಯಲ್ಲಿ ಒಂದು ಪೈಸೆಯೂ ಹಣವಿಲ್ಲ. ತಂಗಿಯ ಸ್ಥಿತಿ ಕಂಡು ಅಣ್ಣ, ಅಮ್ಮನ ಸ್ಥಿತಿ ಕಂಡು ಮಗಳು ಇಬ್ಬರು ಕೂಡ ಮರುಗುತ್ತಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆಯೇ ಗಿರಿಜಾಳನ್ನು ಬಿಟ್ಟು ಹಣ ಹೊಂದಿಸಿಕೊಂಡು ಬರಲು ಹೋಗಿದ್ದಾರೆ.
ಸಂಗಮ್ ಕಾರ್ಯಕ್ರಮದ ಜೊತೆಗೆ ಹಳೆಯ ಪ್ರೀತಿಯನ್ನು ಹುಡುಕಿಕೊಂಡು ಬಂದು ನಿಂತಿದ್ದಾನೆ. ಬರುವಾಗ ಅಪಘಾತವಾದರೂ, ಆ ಕನವರಿಕೆಯಲ್ಲೂ ಗಿರಿಜಾಳನ್ನೇ ಕನವರಿಸಿದ್ದಾನೆ. ಆದರೆ, ಹೆಸರನ್ನು ಹೇಳದೆ ಸುಮ್ಮನೆ ಆಗಿ ಬಿಟ್ಟಿದ್ದಾನೆ. ಸಂಗಮ್, ಗಿರಿಜಾಳ ಹೆಸರನ್ನು ಹೇಳಿದ್ದರೆ ಸಾಕು, ಊರಿನವರೆಲ್ಲಾ ಸೇರಿ ಸಹಾಯಕ್ಕೆ ನಿಲ್ಲುತ್ತಾ ಇದ್ರು. ಆದರೆ ವಿಧಿ ಈಗಲೇ ಒಂದು ಮಾಡುವುದಕ್ಕೆ ಬಿಡುವುದು ಸುಲಭದ ಮಾತಲ್ಲ.

ಸಂಗಮ್ ಲೆಕ್ಕದಲ್ಲಿ ಗಿರಿಜಾ ಎಲ್ಲಿದ್ದಾಳೆ..?
ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡು ಎಂಬ ಮಾತಿದೆ. ಆದರೆ, ಸಂಗಮ್ ಅದ್ಯಾಕೋ ಆ ಮಾತನ್ನು ನೆನಪು ಸಹ ಇಟ್ಟುಕೊಂಡಿಲ್ಲ ಅನ್ಸುತ್ತೆ. ಗಿರಿಜಾಗೆ ಮಾತು ಕೊಟ್ಟು ಹೋದವನು ವಾಪಸ್ ಬರಲೇ ಇಲ್ಲ. ಆದ್ರೀಗ, ಅದೇ ಊರಿಗೆ ಬಂದಿರುವ ಸಂಗಮ್ ಗಿರಿಜಾ ಬಗ್ಗೆಯೇ ತಪ್ಪಾಗಿ ಯೋಚನೆ ಮಾಡುತ್ತಿದ್ದಾನೆ. ಅಲ್ಲಿನ ವೈದ್ಯರು, ನೀವೂ ಯಾರನ್ನು ಹುಡುಕುತ್ತಿರುವಿರಿ ಎಂದು ಕೇಳಿದರೆ, ಅವರು ಈಗ ಎಲ್ಲೋ ಒಂದು ಕಡೆ ಸುಖವಾಗಿ ಇರಬಹುದೇನೋ. ಬಿಡಿ ಬೇಡ ಎಂದು ಸುಮ್ಮನಾಗಿದ್ದಾನೆ. ಆದರೆ ಗಿರಿಜಾ ಅವನಿಗಾಗಿ ಕಾಯುತ್ತಿರುವುದು ಅವನ ಮನಸ್ಸಿಗೂ ನಾಟಲಿಲ್ಲ.

ಗಿರಿಜಾ ನೋಡಿದರೂ ಕೂಗಲು ಶಕ್ತಿಯಿಲ್ಲ..!
ಗಿರಿಜಾಳನ್ನು ಅಡ್ಮಿಟ್ ಮಾಡಿರುವ ಆಸ್ಪತ್ರೆಗೆ ಸಂಗಮ್‌ನನ್ನು ದಾಖಲು ಮಾಡಲಾಗಿದೆ. ಗಿರಿಜಾಳಿಗೆ ಧ್ವನಿ ಗೊತ್ತಾಗಿ ಆದಷ್ಟು ಕೂಗಲು ಯತ್ನಿಸಿದ್ದಾಳೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಗಮ್‌ಗೆ ಆ ಧ್ವನಿ ಕೇಳಿಸಲೇ ಇಲ್ಲ. ಗಿರಿಜಾಗೆ ಪ್ರಜ್ಞೆ ಹೋಯಿತು. ಬಳಿಕ ಸಂಗಮ್‌ಗೆ ಆ ಬೆಡ್ ಮೇಲಿದ್ದ ಗಿರಿಜಾ ನೋಡಿ ಏನೋ ಸಂಕಟ. ಮಾತನಾಡಿಸಲು ಯತ್ನಿಸಿದಾಗಲೂ ಸರಿಯಾಗಿಲ್ಲ. ಮುಖ ನೋಡಲು ಅವಕಾಶವಾಗಲಿಲ್ಲ, ಗುರುತು ಕೂಡ ಸಿಗಲಿಲ್ಲ.

ಸಂಗಮ್‌ನಿಂದ ಗುಣಮುಖವಾಗ್ತಾಳಾ ಗಿರಿಜಾ..?
ಗಿರಿಜಾಳ ಸ್ಥಿತಿ ಕಂಡು ಸಂಗಮ್ ನಿಂತಲ್ಲಿಯೇ ಮರುಗುತ್ತಿದ್ದ. ಆದ್ರೆ ಅದು ಗಿರಿಜಾನೇ ಎಂದು ಗೊತ್ತಾಗಲಿಲ್ಲ. ಗೊತ್ತಾಗಿದ್ದರೆ ಅವನ ಮನಸ್ಸು ತಡೆಯಲು ಸಾಧ್ಯವಿರಲಿಲ್ಲ. ನರ್ಸ್ ಬಳಿ ವಿಚಾರಿಸಿದಾಗ ಯಾರು ಇಲ್ಲವೆಂಬುದು ಗೊತ್ತಾಗುತ್ತೆ. ಹಣದ ಅವಶ್ಯಕತೆ ಇದೆ ಎಂಬುದು ತಿಳಿಯುತ್ತದೆ. ಆಗ ಆಕೆಯ ಜೀವಕ್ಕಾಗಿ ನಾನೇ ಹಣ ನೀಡುತ್ತೇನೆ. ಚಿಕಿತ್ಸೆ ಕೊಡಿಸಿ ಎಂದು ಹೇಳಿದ್ದಾನೆ. ನರ್ಸ್‌ಗೆ ಸಂಗಮ್ ಮಾತು ಕೇಳಿ ಖುಷಿಯಾಗಿದೆ.

ಸಂಗಮ್‌ನನ್ನು ಹುಡುಕಿ ಬಂದ ದೀಪಿಕಾ
ಲಚ್ಚಿಗೆ ಸಂಗಮ್ ಅಂದ್ರೆ ಆರಾಧ್ಯ ದೈವ. ಅವರನ್ನು ಪೂಜಿಸುತ್ತಾಳೆ, ಪ್ರೀತಿಸುತ್ತಾಳೆ. ಈಗ ಊರಿಗೆ ಬಂದಿರುವ ಸಂಗಮ್‌ನನ್ನು ಕಂಡು ಖುಷಿಯಾಗಿದ್ದಾಳೆ. ಅವರನ್ನು ಹತ್ತಿರದಿಂದ ನೋಡ್ತೇನೆ ಅಂತ ಖುಷಿಯಾಗಿದ್ದಾಳೆ. ಈ ಬೆನ್ನಲ್ಲೇ ದೀಪಿಕಾ ಕೂಡ ಮೇಲುಕೋಟೆಯತ್ತ ಹೊರಟಿದ್ದಾಳೆ. ಯಾವುದೋ ಹೇಳಿಕೊಳ್ಳಲಾಗದ ಸೀಕ್ರೆಟ್ ಮೆಂಟೈನ್ ಮಾಡ್ತಿದ್ದಾನೆ ಅಂತ ಅನುಮಾನ ಪಟ್ಟಿದ್ದಾಳೆ. ಸಂಗಮ್ ನನ್ನು ಹುಡುಕಿ ಬಂದ ದೀಪಿಕಾ ಮತ್ತೆ ಇಬ್ಬರನ್ನು ದೂರ ಮಾಡುತ್ತಾಳೆ. ಈ ಬಾರಿಯು ಗಿರಿಜಾಳನ್ನು ನೋಡದೆ ಸಂಗಮ್ ಹೋದರೆ ಆ ಜೀವಕ್ಕೆ ಎಲ್ಲಿಯ ನೆಮ್ಮದಿ..?


Click it and Unblock the Notifications











