Namma Lacchi: ತಂದೆಯ ಮನೆ ಬಳಿ ಬಂದ ಲಚ್ಚಿಗೆ ಸಂಗಮ್ ದರ್ಶನವಾಗುತ್ತಾ..?
ಲಚ್ಚಿಗೆ ಅವರ ಮಾಮಾ ಗೋಪಾಲ ಹುಡುಗನ ವೇಷ ಹಾಕಿ, ಬೆಂಗಳೂರಿನ ಬಸ್ ಹತ್ತಿಸಿದ್ದಾನೆ. ಶಾಂತಾಳಿಂದ ಕಣ್ತಪ್ಪಿಸಲು ಹೋಗಿ, ಲಚ್ಚಿಯನ್ನೇ ಕಳೆದುಕೊಂಡಿದ್ದಾನೆ. ಸಂಪಿಗೆ ಹಳ್ಳಿಯಿಂದ ಬಸ್ ಹತ್ತಿ ಕುಳಿತ ಲಚ್ಚಿ ಬಂದು ತಲುಪಿದ್ದು ಮಾತ್ರ ಬೆಂಗಳೂರಿನಲ್ಲಿ. ಕಣ್ಬಿಟ್ಟು ನೋಡಿದಾಗ ಹೊಸ ಪ್ರಪಂಚ. ತನ್ನವರಿಲ್ಲದ ಊರಲ್ಲ ಮಾಮಾ ಹಾಕಿದ ವೇಷವೇ ಉಪಯೋಗಕ್ಕೆ ಬಂದಿದೆ.
ಲಚ್ಚಿಯನ್ನು ಹುಡುಗ ಎಂದುಕೊಂಡು ಬೆಂಗಳೂರಿನ ಸಿಟಿ ಹುಡುಗರು, ಅವಳನ್ನು ಕಾಪಾಡುತ್ತಿದ್ದಾರೆ. ಲಚ್ಚಿಗೆ ಸದ್ಯ ಮಲಗಲು, ಊಟ ಮಾಡಲು ಯಾವುದೇ ಕೊರತೆ ಇಲ್ಲ. ಬೆಳಗ್ಗೆ ಆದರೆ ತಂದೆ ಮನೆಯಿಂದಾನೇ ತಿಂಡಿಯೂ ಬರುತ್ತೆ. ದೇವರು ಹೊಟ್ಟೆ ತುಂಬಾ ಊಟ ಹಾಕಿ, ಲಚ್ಚಿಯನ್ನು ಕಾಪಾಡುತ್ತಿದ್ದಾನೆ. ಆದರೆ ಲಚ್ಚಿಗೂ ಸದಾ ತನ್ನ ಮಾಮನದ್ದೆ ಚಿಂತೆಯಾಗಿದೆ.
ದೇವಸ್ಥಾನದಲ್ಲಿ ಸಿಕ್ತು ಸಂಗಮ್ ಶೂ
ಲಚ್ಚಿಗೆ ದೇವರ ಮೇಲೆ ಅಪಾರವಾದಂತ ಪ್ರೀತಿ. ಫ್ರೆಂಡ್ಸ್ ಎಲ್ಲಾ ದೇವಸ್ಥಾನಕ್ಕೆ ದುಡಿಮೆಗೆ ಅಂತ ಬಂದರು. ಆಗ ಶಿವನನ್ನು ಕಂಡು ಓಡೋಡಿ ಹೋದ ಲಚ್ಚಿ, ಶಿವಪ್ಪನ ಬಳಿ ಪ್ರಾರ್ಥನೆ ಮಾಡಿದಳು. ಶಿವಪ್ಪ ನನ್ನ ಅಪ್ಪನನ್ನು ಹುಡುಕಿ ಕೊಡು ಎಂದು ಗೋಗರೆದಳು. ಆ ಮುದ್ದು ಮಾತಿಗೆ ಮರುಳಾದ ಶಿವಪ್ಪ ಅವಳ ತಂದೆಯನ್ನು ಅಲ್ಲಿಗೆ ಕರೆಸಿದ. ಆದರೆ ಅವಳ ಹಿಂದೆಯೇ ಇದ್ದ ತಂದೆಯನ್ನು ಲಚ್ಚಿಗೆ ಕಂಡು ಹಿಡಿಯಲು ಆಗದೆ ಹೋಯ್ತು.

ಲಚ್ಚಿಗೆ ಇಂದು ನಿನ್ನೆಯಿಂದಲ್ಲ. ಸಂಗಮ್ ಅಪ್ಪ ಅಂದ್ರೆ ಹಳ್ಳಿಯಲ್ಲಿದ್ದಾಗಿನಿಂದಲೂ ಆಸೆ. ಅವರ ಹಾಡುಗಳನ್ನೇ ಕೇಳಿ ಕಲಿತವಳು, ಬೆಳೆದವಳು. ಈಗ ಅದೇ ಸಂಗಮಪ್ಪ ನಮ್ಮ ಪಕ್ಕದಲ್ಲಿಯೇ ಇದ್ದಾರೆ ಅಂದ್ರೆ ಲಚ್ಚಿಗೆ ಖುಷಿ ಆಗಲ್ವಾ. ಅದರಲ್ಲೂ ದೇವಸ್ಥಾನದಲ್ಲಿ ಅವರದ್ದೇ ಶೂ ಬೇರೆ ಸಿಕ್ಕಿದೆ. ಅದಕ್ಕೆ ಫ್ರೆಂಡ್ಸ್ ಬಳಿ, ಹೇಗಾದರೂ ಮಾಡಿ ಅಲ್ಲಿಗೆ ಕರೆದುಕೊಂಡು ಹೋಗುವಂತೆ ಕೇಳಿದ್ದಾಳೆ. ಫ್ರೆಂಡ್ಸ್ ಎಲ್ಲಾ ಸಂಗಮ್ ಸಾತನೂರ್ ಅಂದ್ರೆ ಸುಮ್ ಸುಮ್ಮನೆ ಸಿಕ್ಕಿ ಬಿಡುತ್ತಾರಾ ಎಂದು ಕೇಳಿದಾಗ ಲಚ್ಚಿ ಹಠ ಮಾಡಿದ್ದಾಳೆ. ಆಗ ಫ್ರೆಂಡ್ಸ್ ಎಲ್ಲಾ ಕರೆದುಕೊಂಡು ಹೋಗುವ ಮಾತು ನೀಡಿದ್ದಾರೆ.
ಸಂಗಮ್‌ನನ್ನು ಹುಡುಕಿ ಬಂದ ಗೋಪಾಲ
ಲಚ್ಚಿಯನ್ನು ಬೆಂಗಳೂರಿನ ಬಸ್ ಹತ್ತಿಸಿ ಗೋಪಾಲ ಕಳುಹಿಸಿಬಿಟ್ಟ. ಆದರೆ ಈಗ ಲಚ್ಚಿಯನ್ನು ಇಷ್ಟು ದೊಡ್ಡ ಸಿಟಿಯಲ್ಲಿ ಹುಡುಕಿದರು ಸಿಗುತ್ತಿಲ್ಲ. ಅದಕ್ಕೆ ಸಂಗಮ್ ಬಳಿ ಸಹಾಯ ಕೇಳಿದರೆ ಸಹಾಯವಾದೀತು ಅಂದುಕೊಂಡು ಮನೆಯ ಬಳಿ ಬಂದರೆ, ಸೆಕ್ಯೂರಿಟಿ ಅವರಿಲ್ಲ ಎಂಬ ಉತ್ತರ ನೀಡಿದ್ದಾನೆ. ಸೆಕ್ಯೂರಿಟಿ ಹೇಳಿದ ಉತ್ತರಕ್ಕೆ ಗೋಪಾಲ ನಂಬಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಆದರೆ ಸಂಗಮ್ ಮನೆಯಲ್ಲಿಯೇ ಇದ್ದದ್ದು ಅವನ ಗಮನಕ್ಕೆ ಬಂದಿಲ್ಲ.

ಇತ್ತ ಗೋಪಾಲ, ಸಂಗಮ್ ಮನೆಯಿಂದ ಹೊರ ನಡೆದಾಗ ಲಚ್ಚಿ ಎಂಟ್ರಿಯಾಗಿದ್ದಾಳೆ. ಇದು ಗೋಪಾಲನೂ ಗಮನಿಸಲಿಲ್ಲ. ಲಚ್ಚಿಯೂ ಗಮನಿಸಲಿಲ್ಲ. ಸಂಗಮ್ ಬಿಟ್ಟು ಹೋದ ಶೂ ಹಿಡಿದು ಬಂದಿದ್ದಾಳೆ. ಸ್ನೇಹಿತರು ಕೂಡ ಕೊಟ್ಟ ಮಾತಿನಂತೆ ಲಚ್ಚಿಯನ್ನು ಮನೆ ಬಳಿ ಕರೆದುಕೊಂಡು ಬಂದಿದ್ದಾರೆ. ಆದರೆ ಸೆಕ್ಯೂರಿಟಿಯೇ ಆ ಶೂ ತೆಗೆದುಕೊಂಡು ಕಳುಹಿಸಿದರೆ ಲಚ್ಚಿಯ ದೊಡ್ಡ ಕನಸು ಭಗ್ನವಾಗುತ್ತದೆ. ಸಂಗಮ್ ನೋಡುವ ಆಸೆಗೆ ತಣ್ಣೀರು ಬೀಳುತ್ತದೆ.


Click it and Unblock the Notifications











