Namma Lacchi: ಗಿರಿಜಾಳ ಪ್ರೇಮಿ ಸಂಗಮ್ ಸಿಕ್ಕಿ ಬಿಟ್ರು : ಮತ್ತೆ ಅಡ್ಡಿಯಾಗ್ತಾಳಾ ದೀಪಿಕಾ?
ಲಚ್ಚಿಗೆ ತಂದೆಯೇ ಗುರುವು. ಏಕಲವ್ಯನಂತೆ ಲಚ್ಚಿ ಸಂಗಮ್‌ನನ್ನು ನೋಡಿ ನೋಡಿ, ಅವರ ಹಾಡನ್ನು ಕೇಳುತ್ತಾ ಬೆಳೆದವಳು. ಅವರೇ ನಮ್ಮ ತಂದೆ ಎಂದು ಗೊತ್ತಾಗಿ ಬಿಟ್ಟರೆ ಆ ಕೂಸಿಗೆ ಅದೆಷ್ಟು ಸಂಭ್ರಮ, ಸಡಗರವೋ ಕಾಣೆ. ಆದ್ರೆ, ಗಿರಿಜಾ ಆ ವಿಚಾರವನ್ನು ಹೇಳುವುದಕ್ಕೆ ಸಿದ್ಧವಿಲ್ಲ. ಅವ್ವ ಅಪ್ಪನ ಲವ್ ಸ್ಟೋರಿ ಕೇಳಿನೆ ಲಚ್ಚಿಗೆ ಕಿಕ್ ಹತ್ತಿದೆ. ಅಪ್ಪ ಅವ್ವನ್ನ ಒಂದು ಮಾಡ್ತೀನಿ ಅಂತ ಒದ್ದಾಡುತ್ತಿದ್ದಾಳೆ.
ದೇವರ ದಯೆ ಈಗ ಮೂವರು ಒಬ್ಬರಿಗೊಬ್ಬರು ಭೇಟಿಯಾಗಿದ್ದಾರೆ. ಲಚ್ಚಿಗೆ ಗುರುವನ್ನು ನೋಡಬೇಕೆಂಬ ಆಸೆ ಈಡೇರಿದೆ. ಊರಿಗೆ ಬಂದ ಗುರುವಿಗಾಗಿ ಓಡೋಡಿ ಹೋಗಿ ನೋಡಿದ್ದಾಳೆ. ಅಲ್ಲಿಯೂ ತನ್ನವ್ವನ ಕಾಯಿಲೆಗಾಗಿ ಸಹಾಯ ಕೇಳಲು ಯತ್ನಿಸಿದ್ದಾಳೆ. ಆದ್ರೆ ಸಂಗಮ್ ಆಜೆ ತನ್ನರಸಿ ಎಂದು ಗೊತ್ತಿಲ್ಲದೆ ಚಿಕಿತ್ಸೆಗೆ ಹಣ ಕೊಟ್ಟು ಬಂದಿದ್ದಾನೆ.

ಆಸ್ಪತ್ರೆಯಿಂದ ಎದ್ದು ಬಂದ ಗಿರಿಜಾ
ಗಿರಿಜಾಳ ಕಾಯಿಲೆ ಮಿತಿ ಮೀರಿದೆ. ವೈದ್ಯರು ಕೂಡ ಸೂಚನೆ ನೀಡಿದ್ದಾರೆ. ಬಹಳ ಬೇಗ ಚಿಕಿತ್ಸೆ ನೀಡಬೇಕು. ಇಲ್ಲವಾದಲ್ಲಿ ಉಳಿಸುವುದು ಕಷ್ಟ ಅಂತ. ಅದರ ಜೊತೆಗೆ ಕಾಯಿಲೆ ಕೂಡ ಜಾಸ್ತಿಯಾಗಿದೆ. ಹೀಗಾಗಿ ಹಣ ಖರ್ಚು ಮಾಡಿದರೂ ಗಿರಿಜಾ ಉಳಿವುದು ಕಷ್ಟ. ಆದ್ರೆ ಸಂಗಮ್ ಎಂಬ ಹೆಸರು ಹೇಳುವುದಕ್ಕೆ ಆಗದೆ ಕೆಟ್ಟ ಹೆಸರು ತೆಗೆದುಕೊಂಡಿದ್ದ ಗಿರಿಜಾಳ ಕಣ್ಣ ಮುಂದೆ ಸಂಗಮ್ ಕಾಣಿಸಿಕೊಂಡಿದ್ದಾನೆ. ಮಾತನಾಡಿಸುವುದಕ್ಕೆ ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ. ಸಂಗಮ್ ಮೇಲುಕೋಟೆಯಲ್ಲಿಯೇ ಇರುವುದನ್ನು ಅರಿತ ಗಿರಿಜಾ ಆಸ್ಪತ್ರೆಯಿಂದ ಆಕ್ಸಿಜನ್ ಕಿತ್ತು ಬಿಸಾಕಿ ಬಂದಿದ್ದಾಳೆ.

ಬಯಸಿದ ಸಂಗಮ್ ಸಿಕ್ಕೆಬಿಟ್ಟ..!
ಸಂಗಮ್‌ನನ್ನು ನೋಡಲೇಬೇಕೆಂಬ ಬಯಕೆ ಗಿರಿಜಾಳದ್ದು. ಹಾಸಿಗೆ ಮೇಲೆ ಮಲಗಿರುವ ಗಿರಿಜಾ ನನ್ನೊಳು ಅಂತ ಗೊತ್ತಿಲ್ಲದೆ ಚಿಕಿತ್ಸೆಗೆ ಹಣ ಕೊಟ್ಟು ಬಂದಿದ್ದಾನೆ ಸಂಗಮ್. ಆದ್ರೆ ಈ ಬಾರಿ ಸಂಗಮ್‌ನನ್ನು ಭೇಟಿ ಮಾಡಬೇಕು ಎಂಬ ಆಸೆಯಿಂದ ರಸ್ತೆಯಲ್ಲೆಲ್ಲಾ, ಸುಸ್ತಾಗಿ ಬಂದ ಗಿರಿಜಾ ಒಂದು ಕಾರಿಗೆ ಹೊಡೆದು ಕೊಂಡಿದ್ದಾಳೆ. ಅದೃಷ್ಟ ಆ ಕಾರಿನಲ್ಲಿ ಇದ್ದದ್ದು ಆಕೆಯ ಸಂಗಮ್. ನೋಡಿ ಖುಷಿಯಾಗಿದ್ದಾಳೆ.

ಸಂಗಮ್ ಈಗ ದೀಪಿಕಾ ಕೈಗೊಂಬೆ
ದೀಪಿಕಾಳಿಗೆ ಸಂಗಮ್‌ನನ್ನು ತನ್ನ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಬೇಕೆಂಬುದು ಹಠ. ಸಂಗಮ್ ಕೂಡ ಅವಳು ಹೇಳಿದಂತೆ ತಲೆ ಅಲ್ಲಾಡಿಸಿ ಸುಮ್ಮನೆ ಆಗಿ ಬಿಡುತ್ತಾನೆ. ತನಗಿರುವ ಆಸೆ ಆಕಾಂಕ್ಷೆಗಳೆಲ್ಲವನ್ನು ನೆಲ ಸಮ ಮಾಡಿ ಸುಮ್ಮನೆ ತಲೆಯಾಡಿಸುವಂತೆ ಆಗಿದ್ದಾನೆ. ಆದ್ರೆ ಮೇಲುಕೋಟೆಗೆ ಬಂದಿರುವ ವಿಚಾರ ಹೇಳದೆ ಇರುವುದಕ್ಕೆ ಹುಡುಕಿಕೊಂಡು ಬಂದಿದ್ದಾಳೆ. ಎಷ್ಟೋ ವರ್ಷದ ಬಳಿಕ ಒಂದಾಗುತ್ತಿರುವ ಪ್ರೇಮಿಗಳು ದೀಪಿಕಾ ಕಣ್ಣಿಗೆ ಬಿದ್ದರೆ ಮುಗಿಯಿತು.

ಯಾರ ಪರ ನಿಲ್ತಾನೆ ಸಂಗಮ್..?
ಸಂಗಮ್‌ಗೆ ಈಗ ಬೆಂಕಿ ಮತ್ತು ಸಮುದ್ರ ಮಧ್ಯೆ ನಿಂತ ಅನುಭವ. ಗಿರಿಜಾಳನ್ನು ಪ್ರೀತಿಸಿ, ಯಾರಿಗೂ ಗೊತ್ತಿಲ್ಲದೆ ಮದುವೆಯಾಗಿ ಹೋದ ಸಂಗಮ್ ಮತ್ತೆ ಬರಲೇ ಇಲ್ಲ. ಈಗ ಲಚ್ಚಿಯನ್ನು ಸಾಕುತ್ತಾ, ಇವತ್ತೋ ನಾಳೆಯೋ ಸಾಯುವ ಸ್ಥಿತಿಯಲ್ಲಿದ್ದಾಳೆ ಗಿರಿಜಾ. ಈಗಲೂ ದೀಪಿಕಾಳನ್ನೆ ಆಯ್ಕೆ ಮಾಡಿದರೆ ಆ ಬದುಕಿಗೊಂದು, ಪ್ರೀತಿಗೊಂದು ಬೆಲೆ ಇರಲ್ಲ. ಲಚ್ಚಿ ಅಪ್ಪನಿಗಾಗಿ ಹಂಬಲಿಸುತ್ತಾ ಇದ್ದಾಳೆ. ಗಿರಿಜಾ ಪ್ರೀತಿಗಾಗಿ ಕನವರಿಸುತ್ತಾ ಇದ್ದಾಳೆ.


Click it and Unblock the Notifications











