Namma Lacchi: ಲಚ್ಚಿ ಹಣ ತಂದರೂ ಉಳಿಯಲ್ವಾ ಗಿರಿಜಾ ? ದೇವಿ ಕೊಟ್ಟ ಸೂಚನೆ ಏನು..?
ಲಚ್ಚಿಯ ಪರಿಸ್ಥಿತಿಯನ್ನು ಎಂಥಾ ಕಲ್ಲು ಹೃದಯದವರಿಗೂ ನೋಡುವುದಕ್ಕೆ ಆಗುತ್ತಿಲ್ಲ. ಪ್ರಪಂಚದಲ್ಲಿ ಲಚ್ಚಿ ಪ್ರೀತಿಸೋ ಜೀವ ಅಂದ್ರೆ ಒಂದು ಗಿರಿಜಾ, ಮತ್ತೊಂದು ಸಂಗಮ್. ಆದ್ರೆ ಸಂಗಮ್ ಕಣ್ಣ ಮುಂದೆ ಬಂದರು, ಕೈಹಿಡಿದು ಕುಲುಕಿದರು ಇವರೇ ನಮ್ಮಪ್ಪ ಎಂದು ಗೊತ್ತಿಲ್ಲ. ಪ್ರಪಂಚದಲ್ಲಿ ಅವ್ವನೇ ಮುಖ್ಯ, ಅವ್ವನೇ ಪ್ರೀತಿ ಅಂತ ಇರುವ ಗಿರಿಜಾಳಿಗೆ ಬದುಕುವ ಅದೃಷ್ಟವೇ ಇಲ್ಲ.
ಲಚ್ಚಿಗೋ ಒಪ್ಪತ್ತಲ್ಲ ಮೂರೊತ್ತು ಊಟ ಹಾಕದೆ ಹೋದರೂ ಬೇಸರ ಮಾಡಿಕೊಳ್ಳಲ್ಲ. ಅವರ ವಿರುದ್ಧ ಕೆಂಡಕಾರುವುದಿಲ್ಲ. ಕೇಳ್ತಾಳೆ ಯಾಕೆ ಅಂತ, ಅಳುತ್ತಾಳೆ ಹಸಿವಾದಾಗ. ಹಾಗೆಲ್ಲ ಬಂದು ಸಂತೈಸುವುದು ಆಕೆಯ ಅವ್ವ ಗಿರಿಜಾ. ಈಗ ಆಕೆಯೂ ಲಚ್ಚಿಯನ್ನು ಬಿಟ್ಟು ಹೋಗಿಬಿಟ್ಟರೆ..?

ಹಣಕ್ಕಾಗಿ ಲಚ್ಚಿಯ ಕಷ್ಟ..!
ವೈದ್ಯರು ಹಣ ತಂದ್ರೆ ಮಾತ್ರ ನಿಮ್ಮ ಅಮ್ಮನನ್ನು ಬದುಕಿಸುವುದಕ್ಕೆ ಸಾಧ್ಯ ಅಂತ ಹೇಳಿ ಆಗಿದೆ. ಆದ್ರೆ, ಹಣವನ್ನು ಹೇಗೆ ಹೊಂದಿಸಬೇಕು ಎಂಬುದೇ ಪುಟ್ಟ ಹುಡುಗಿ ಲಚ್ಚಿಯ ತಲೆ ನೋವಾಗಿದೆ. ಹಾಗಂತ ಸುಮ್ಮನೆ ಕೂರದೆ ತನ್ನಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಹಣ ದುಡಿಯುವುದಕ್ಜೆ ಹೊರಟಿದ್ದಾಳೆ. ಭಿಕ್ಷೆ ಬೇಡದೆ, ತನ್ನಿಂದ ಆದ ಕೆಲಸ ಮಾಡಿ ಹಣ ಹೊಂದಿಸುವ ಪ್ರಯತ್ನದಲ್ಲಿದ್ದಾಳೆ. ಹೀಗಾಗಿ ಹಾಡುವುದನ್ನು ಒಪ್ಪಿಕೊಂಡಿದ್ದಾಳೆ. ದೇವಸ್ಥಾನ, ಜನರು ಇರುವೆಡೆಯೆಲ್ಲಾ ಹೋಗಿ ಹಾಡುವುದಕ್ಕೆ ಆರಂಭಿಸಿದ್ದಾಳೆ.

ಮಗುವಿನ ಪ್ರಾಣ ಕಾಪಾಡಿದ ಲಚ್ಚಿ
ಜನ ದೇವರ ಮುಂದೆ ಕಷ್ಟ ಬಂದಾಗ ಬೇಡಿಕೆ ಇಡುವುದು ಸಹಜ. ಅಲ್ಲಿನ ಜನರನ್ನು ಕೇಳಿದರೆ ಸಹಾಯವಾಗಬಹುದೇನೋ ಎಂಬ ಆಸೆಯಿಂದ ಲಚ್ಚಿ ಅಲ್ಲಿಗೆ ಹೋಗಿದ್ದಾಳೆ. ಆದ್ರೆ ಅಲ್ಲಿಂದ ಭಕ್ತೆಯೊಬ್ಬಳು, ಲಚ್ಚಿಗೆ ಅವಮಾನ ಮಾಡುವುದಲ್ಲದೆ, ಆಕೆಯ ತಾಯಿ ಗಿರಿಜಾಳ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾಳೆ. ಲಚ್ಚಿಗೆ ಅವಮಾನ ಎಂಬುದು ಹೊಸದೇನು ಅಲ್ಲ. ಆದ್ರೆ ಅದಕ್ಕೆ ಕ್ಲಾರಿಫಿಕೇಷನ್ ಕೂಡ ಲಚ್ಚಿ ಕೊಡುತ್ತಾಳೆ. ಈಗಲೂ ಅದನ್ನೇ ಮಾಡಿದಾಳೆ. ನಾನಿಲ್ಲಿ ಭಿಕ್ಷೆ ಬೇಡುವುದಕ್ಕೆ ಬಂದಿಲ್ಲ. ನಿಮಗೆ ನಾನು ಸಹಾಯ ಮಾಡುತ್ತೇನೆ, ನೀವೂ ನನಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾಳೆ.

ಹಣ ಕಂಡು ಖುಷಿಪಟ್ಟ ಲಚ್ಚಿ
ದೇವಸ್ಥಾನಕ್ಕೆ ಸರಗ ಎಂಬ ಹೆಣ್ಣು ಮಗಳು ತನ್ನ ಮಗುವನ್ನು ಬದುಕಿಸು ತಾಯಿ ಎಂದು ಎತ್ತಿಕೊಂಡು ಬಂದಿದ್ದಳು. ಲಚ್ಚಿ ಬಳಿ ಆ ಕಷ್ಟವನ್ನು ಹೇಳಿದಾಗ, "ನಾನು ದೇವಿಗೋಸ್ಕರ ಹಾಡು ಹಾಡುತ್ತೀನಿ. ನೀವೆಲ್ಲಾ ಎಚ್ಚರದಿಂದ ಇರುವಂತೆ ನೋಡಿಕೊಳ್ಳುತ್ತೇನೆ. ಆಗ ನೀವೂ ಹಣ ಕೊಡಬೇಕು" ಎಂಬ ಡೀಲ್‌ನೊಂದಿಗೆ ಹಾಡು ಹಾಡಲು ಶುರು ಮಾಡಿದಳು. ದೇವಿಯ ಆಶೀರ್ವಾದ, ಕೃಪೆ ಲಚ್ಚಿ ಮೇಲೆ ಸದಾ ಇರುವ ಕಾರಣ, ಮಗು ಕಣ್ಣು ಬಿಟ್ಟಿತು, ಅಳುವು ಕೇಳಿಸಿತು. ಲಚ್ಚಿಯ ಒಳ್ಳೆಯ ಮನಸ್ಸಿಗೆ ಎಲ್ಲರೂ ಮನಸೋತರು, ಮನಸಾರೆ ಸಹಾಯವನ್ನು ಮಾಡಿದರು.

ದೇವಿ ಮುಂದೆ ಹಚ್ಚಿದ ದೀಪ ನಿಂತೆ ಬಿಡ್ತು..!
ದೇವಿಯ ಅರ್ಚಕರು ಕೂಡ ಲಚ್ಚಿಯ ಭಕ್ತಿಗೆ ಮೆಚ್ಚಿದರು. ಲಚ್ಚಿ ಬಟ್ಟೆ ಕೊಳೆ ಆಗಿದೆ. ಸ್ನಾನ ಮಾಡಿಲ್ಲ ಎಂದರು. ಭಕ್ತಿಯಿಂದ ಮಾಡಿದರೆ ಅದೇ ಸ್ವಚ್ಛತೆ ಎಂದು ಅರ್ಚಕರು, ತಾಯಿಗೆ ಲಚ್ಚಿ ಕೈನಿಂದಾನೇ ಪುಷ್ಪಾರ್ಚನೆ ಮಾಡಿಸಿದರು. ಲಚ್ಚಿಗೆ ಬಹಳ ಮುಖ್ಯವಾದದ್ದು ತನ್ನ ತಾಯಿ ಬದುಕುಳಿಯಬೇಕು ಎಂಬುದು. ತಾಯಿಯನ್ನು ನೆನೆದು ಆರತಿ ಮಾಡುವಾಗಲೇ ದೀಪ ನಿಂತು ಹೋಗಿದೆ. ಇದು ಲಚ್ಚಿಯ ಆತಂಕಕ್ಕೆ ಕಾರಣವಾದರೆ, ಅರ್ಚಕರಿಗೆ ಪ್ರಶ್ನೆ ಹುಟ್ಟು ಹಾಕಿದೆ.


Click it and Unblock the Notifications











