Namma Lacchi: ಸಂಗಮ್‌ನನ್ನು ಕಿತ್ತುಕೊಂಡ ದೀಪಿಕಳೇ ಗಿರಿಜಾಳ ಪ್ರಾಣವನ್ನು ಕಳೆಯುತ್ತಿದ್ದಾಳೆ..!

By ಎಸ್ ಸುಮಂತ್

ಗಿರಿಜಾ ಮತ್ತು ಸಂಗಮ್ ಸಿಕ್ಕಾಪಟ್ಟೆ ಪ್ರೀತಿ ಮಾಡುತ್ತಿದ್ದವರು. ಆದರೆ, ಅದ್ಯಾವ ದೃಷ್ಟಿ ಬಿತ್ತೋ ಏನೋ ಇಬ್ಬರು ದೂರ ದೂರ ಆಗಿಬಿಟ್ರು. ಸಂಗಮ್ ಬೇರೆ ಮದುವೆಯಾಗಿ ಮಗುವು ಆಯ್ತು. ಗಿರಿಜಾ ಅವನ ಮಗುವಿಗೆ ಜನ್ಮ ನೀಡಿ, ಶಬರಿಯಂತೆ ಕಾದು ಕೂತಳು. ಸಂಗಮ್ ಮೇಲ್ನೋಟಕ್ಕೆ ಸುಖ ಸಂಸಾರ ನಡೆಸಿದರು, ಮನಸ್ಸಿನಲ್ಲಿ ಗಿರಿಜಾಳನ್ನೇ ಜಪಿಸುತ್ತಾ ಕೂತಿದ್ದಾನೆ.

ಹಳ್ಳಿಯಲ್ಲಿ ಇಬ್ಬರ ಮನಸ್ಸು ಕಲೆತಿತ್ತು. ಇಬ್ಬರು ಬಿಟ್ಟಿಲಾರದಷ್ಟು ಪ್ರೀತಿ ಮಾಡಿದ್ದರು. ನಂಬಿಕೆಯಿಂದ ಗಿರಿಜಾ ಒಂದಷ್ಟು ದಿನ ಸಂಸಾರ ಮಾಡಿದ್ದಳು. ಆದರೆ, ಊರು ಬಿಟ್ಟು ಹೋದ ಸಂಗಮ್ ಮತ್ತೆ ಹಿಂತಿರುಗಲೇ ಇಲ್ಲ. ಈಗ ಬಂದಿದ್ದಾನೆ‌. ಆದ್ರೆ ಗಿರಿಜಾಳಿಗೆ ಬದುಕುವ ಅದೃಷ್ಟವೇ ಇಲ್ಲ.

ದೀಪಿಕಾಳಿಂದ ದೂರಾದ ಜೋಡಿ

ದೀಪಿಕಾಳಿಂದ ದೂರಾದ ಜೋಡಿ

ತಾನೂ ಸಂಗೀತದಲ್ಲಿ ಸಾಧನೆ ಮಾಡಿ ವಾಪಾಸ್ಸು ಬರ್ತೀನಿ ಅಂತ ಹೋಗಿದ್ದವನು ಮತ್ತೆ ಬರಲೇ ಇಲ್ಲ. ಗಿರಿಜಾ ತನ್ನ ಪ್ರಿಯತಮನಿಗಾಗಿ ಕಾದು ಕಾದು ಸುಸ್ತಾಗಿದ್ದಾಳೆ. ಆ ಕಡೆ ಸಂಗಮ್ ಸಂಗೀತದ ಸಾಧನೆ ಮಾಡಲು ಹೋಗಿ ದೀಪಿಕಾಳ ತಂದೆಯ ಬಳಿ ಸಹಾಯ ತೆಗೆದುಕೊಂಡಿದ್ದು, ಗಿರಿಜಾಳನ್ನು ಬಿಡುವಂತೆ ಆಗಿತ್ತು. ಗುರುವಿನ ಋಣ ತೀರಿಸಲು ದೀಪಿಕಾಳನ್ನು ಮದುವೆಯಾಗಬೇಕಾಯ್ತು. ಈ ಕಡೆ ಗಿರಿಜಾ ಶಬರಿಯಂತೆ ಕಾಯುತ್ತಾ ಕೂತಳು. ಕಡೆಗೆ ಎಷ್ಟೋ ವರ್ಷವಾದರೂ ಬಾರದೆ ಇದ್ದಾಗ ಗಿರಿಜಾ ಕೂಡ ಬಂದಂತೆ ಜೀವನ ಸಾಗಿಸಿದಳು. ಆದರೆ, ದೀಪಿಕಾಳಿಗೋಸ್ಕರ ಗಿರಿಜಾಳನ್ನು ಬಿಟ್ಟಿದ್ದ.

ಗಿರಿಜಾಗೆ ಆಕ್ಸಿಡೆಂಟ್ ಮಾಡಿದ ದೀಪಿಕಾ..!

ಗಿರಿಜಾಗೆ ಆಕ್ಸಿಡೆಂಟ್ ಮಾಡಿದ ದೀಪಿಕಾ..!

ಗುರುವಿನ ಕಾಣಿಕೆ ಅಂತ ದೀಪಿಕಾ, ಸಂಗಮ್‌ನನ್ನು ಮದುವೆಯಾದಳು. ಗುರು ಭಕ್ತಿಗೆ ಕಟ್ಟುಬಿದ್ದು, ಜೀವನ ಕಟ್ಟಿಕೊಟ್ಟವರಿಗೆ ವಿಧೇಯನಾಗಿರಬೇಕೆಂದುಕೊಂಡು ಸಂಗಮ್ ಕೂಡ ಮದುವೆಯಾಗಿ ಬಿಟ್ಟ. ಆ ಕಡೆ ಗಿರಿಜಾಳಿಂದ ದೂರ ಮಾಡಿದ ದೀಪಿಕಾ, ಈಗ ಅವಳಿಂದಾನೇ ಪ್ರಾಣ ಕೂಡ ಹೋಗುವ ಹಂತಕ್ಕೆ ಬಂದಿದೆ. ಸಂಗಮ್‌ನನ್ನು ಹುಡುಕಿಕೊಂಡು ದೀಪಿಕಾ‌ ಮೇಲುಕೋಟೆಗೆ ಬಂದಿದ್ದಾಳೆ. ಈ ವೇಳೆ ಗಿರಿಜಾ ರಸ್ತೆಯ ಮಧ್ಯೆ ಬಂದಿದ್ದಾಳೆ. ದೀಪಿಕಾ ಇದ್ದ ಕಾರು, ಗಿರಿಜಾಳಿಗೆ ಗುದ್ದಿದೆ. ಪ್ರಾಣಾಪಾಯದಲ್ಲಿ ಗಿರಿಜಾ ಬಿದ್ದಿದ್ದಾಳೆ. ಮೊದಲೇ ಕಾಯಿಲೆಯಿಂದ ನರಳುತ್ತಿದ್ದ ಗಿರಿಜಾಗೆ ಇದು ಮತ್ತೊಂದು ಆಘಾತವಾಗಿದೆ..

ಅವ್ವನ ಉಳಿವಿಗಾಗಿ ಕಷ್ಟಪಟ್ಟ ಲಚ್ಚಿ

ಅವ್ವನ ಉಳಿವಿಗಾಗಿ ಕಷ್ಟಪಟ್ಟ ಲಚ್ಚಿ

ಅವ್ವ ಕಾಯಿಲೆ ಬಿದ್ದಿದ್ದಾಳೆ. ಅವಳನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ ಅಂತ ಲಚ್ಚಿಗೆ ಗೊತ್ತಾಯ್ತು. ಅದಕ್ಕೆಂದು ಸಾಕಷ್ಟು ಹಣ ಬೇಕು ಅಂತಾನು ನರ್ಸಮ್ಮ ಹೇಳಿದ್ದಾಳೆ. ಅದಕ್ಕೆಂದೇ ತನ್ನ ಧ್ವನಿಯನ್ನು ಬಳಸಿಕೊಂಡು, ಹಾಡು ಹೇಳಿ ಹಣ ಸಂಪಾದಿಸುತ್ತಿದ್ದಾಳೆ ಲಚ್ಚಿ. ಹಾಗೇ ದೇವಸ್ಥಾನವೊಂದರಲ್ಲಿ ಹಾಡಿ ಹಣ ಸಂಪಾದನೆ ಮಾಡಿಕೊಂಡು, ತಾಯಿಯ ಚಿಕಿತ್ಸೆಗೆಂದು ಬರುತ್ತಿದ್ದಾಳೆ. ಆದರೆ, ಅಲ್ಲಿ ಗಿರಿಜಾನೇ ಇನ್ನಷ್ಟು ಆಪತ್ತಲ್ಲಿ ಸಿಕ್ಕಿಬಿದ್ದಿದ್ದಾಳೆ.

ಸಂಗಮ್ ಈಗಲಾದರೂ ರಕ್ಷಿಸುತ್ತಾನಾ..?

ಸಂಗಮ್ ಈಗಲಾದರೂ ರಕ್ಷಿಸುತ್ತಾನಾ..?

ಆಸ್ಪತ್ರೆಯಲ್ಲಿ ಮಲಗಿದ್ದ ಗಿರಿಜಾಗೆ ಸಂಗಮ್ ದರ್ಶನವಾಗಿತ್ತು. ಎಚ್ಚರವಾದ ಮೇಲೆ ಸಂಗಮ್‌ನನ್ನು ನೋಡಲೇಬೇಕೆಂದು ಡ್ರಿಪ್ಸ್ ಎಲ್ಲಾ ತೆಗೆದು ಹಾಕಿ, ರಸ್ತೆಯಲ್ಲಿ ಓಡಿ ಬಂದಿದ್ದಾಳೆ. ತಲೆ ಸುತ್ತುತ್ತಾ ಇದ್ದರು ಕೂಡ ಕಷ್ಟಪಟ್ಟು ರಸ್ತೆ ದಾಟಿದ್ದಾಳೆ. ಆದ್ರೆ ಇದೆ ಸಮಯದಲ್ಲಿ ದೀಪಿಕಾ ಕಾರು ಗಿರಿಜಾಳಿಗೆ ಗುದ್ದಿದೆ. ಬಿದ್ದ ಗಿರಿಜಾಳನ್ನು ನೋಡದೆ ಹಾಗೇ ಹೊರಡಲು ಟ್ರೈ ಮಾಡಿದಾಗ, ಸಂಗಮ್‌ಗೆ ಮನಸ್ಸಿನ ಮೂಲೆಯಲ್ಲಿ ಯಾರಿಗೋ ಆಕ್ಸಿಡೆಂಟ್ ಮಾಡಿದೆವು ಅನ್ನಿಸ್ತು ಎಂದು ಕಾರಿನಿಂದ ಇಳಿದಿದ್ದಾನೆ. ಈಗಲಾದರೂ ಗಿರಿಜಾಳನ್ನು ನೋಡಿದರೆ ಅವಳ ಕೊನೆಯ ಬದುಕಿಗೊಂದು ಅರ್ಥ ಸಿಗುತ್ತೆ.

More from Filmibeat

English summary
Star Suvarna serial Namma Lacchi Written Update on March 8th Episode. Here is the details about Deepika caused an accident to Girija.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X