Namma Lacchi: ಸಂಗಮ್‌ನನ್ನು ಹುಡುಕಿ ಬಂದ ಗಿರಿಜಾಗೆ ಏನಾಯ್ತು? 'ನಮ್ಮ ಲಚ್ಚಿ' ಕಥೆಯೇನು?

By ಎಸ್ ಸುಮಂತ್

ಇಂಥದ್ದೊಂದು ಮಾತು ಕೇಳಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತೆ. ತಂದೆ ಇಲ್ಲದೆ ಹೋದರು ತಾಯಿ ಇದ್ದರೆ ಯಾವ ಕೊರತೆಯೂ ಬರದಂತೆ, ಎಲ್ಲಾ ಪ್ರೀತಿಯನ್ನು ಒಬ್ಬಳೆ ಕೊಟ್ಟು ಕಾಪಾಡುತ್ತಾಳೆ. ಆದ್ರೆ ಅವಳು ಇಲ್ಲವಾದರೇ ಅಕ್ಷರಶಃ ಪ್ರಪಂಚದಲ್ಲಿ ಅನಾಥ ಭಾವ ಬಿಟ್ಟರೆ ಬೇರೆನು ಕಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಈಗ ಲಚ್ಚಿಯ ಪರಿಸ್ಥಿತಿಯೂ ಅದೇ ಆಗಿದೆ.

ಕಾಯಿಲೆಯನ್ನು ಲೆಕ್ಕಿಸದೆ, ಪ್ರೀತಿಸಿದವನನ್ನು ನೋಡುವುದಕ್ಕೆ ಓಡೋಡಿ ಬಂದಿದ್ದಾಳೆ. ಶಬರಿಯಂತೆ ಕಾದ ಗಿರಿಜಾಳ ವಿಚಾರ ಸಂಗಮ್‌ಗೆ ಗೊತ್ತೆ ಇಲ್ಲ. ಗಿರಿಜಾ ಕೂಡ ತನ್ನಂತೆ, ಇನ್ನೊಂದು ಮದುವೆಯಾಗಿ ಸುಖವಾಗಿ ಇರುತ್ತಾಳೆ ಎಂಬ ಭ್ರಮೆಯಲ್ಲಿಯೇ ಮೇಲುಕೋಟೆಯನ್ನು ದಾಟುತ್ತಿದ್ದಾನೆ. ಆದರೆ, ವಾಸ್ತವವೇ ಬೇರೆಯಾಗಿತ್ತು. ಈಗ ಗಿರಿಜಾಳ ಕೊನೆ ಕ್ಷಣವನ್ನು ನೋಡದೆ ಹೋಗಿ ಬಿಟ್ಟಿದ್ದಾನೆ.

ಗಿರಿಜಾಳನ್ನು ಬಲಿ ಪಡೆದೆ ಬಿಟ್ಟಳಾ ದೀಪಿಕಾ?

ಗಿರಿಜಾಳನ್ನು ಬಲಿ ಪಡೆದೆ ಬಿಟ್ಟಳಾ ದೀಪಿಕಾ?

ಗಿರಿಜಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದಳು. ಕೊನೆಯ ಹಂತದಲ್ಲಿ ಕಾಯಿಲೆ ಉಲ್ಭಣಗೊಂಡಿತ್ತು. ಆಸ್ಪತ್ರೆಯಲ್ಲಿ ಮಲಗಿದ್ದಾಗ ಎಷ್ಟೋ ವರ್ಷದ ಪ್ರೇಮಿ ಸಂಗಮ್ ಕಣ್ಣೆದುರಿಗೆ ಬಂದ. ಅವನನ್ನು ನೋಡಿ ಮಗಳ ವಿಚಾರ ಹೇಳಬೇಕೆಂದು ಓಡೋಡಿ ಬರುವಾಗ, ದೀಪಿಕಾಳ ಹುಮ್ಮಸ್ಸಿಗೆ ಬಲಿಯಾಗಿದ್ದಾಳೆ. ಡ್ರೈವರ್‌ನಿಂದ ಕಾರು ಕಿತ್ತುಕೊಂಡು ತಾನೇ ಓಡಿಸುವುದಕ್ಕೆ ಹೋಗಿ, ಗಿರಿಜಾಳಿಗೆ ಗುದ್ದಿದ್ದಾಳೆ. ಗಿರಿಜಾ ಮೊದಲೇ ಬ್ಲೆಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಾರಣ, ಅಪಘಾತವಾದ ರಭಸಕ್ಕೆ ನಡು ರಸ್ತೆಯಲ್ಲಿಯೇ ಒದ್ದಾಡಿದ್ದಾಳೆ. ಎದ್ದೇಳುವುದಕ್ಕೂ ಆಗದೆ ಕುಸಿದು ಬಿದ್ದಿದ್ದಾಳೆ.

ಗಿರಿಜಾಳ ಮನಸ್ಸಿನ ಭಾವನೆ ಕೇಳಿಸಲೇ ಇಲ್ವಾ..?

ಗಿರಿಜಾಳ ಮನಸ್ಸಿನ ಭಾವನೆ ಕೇಳಿಸಲೇ ಇಲ್ವಾ..?

ಸಂಗಮ್‌ಗೆ ಕೂಡ ಆಕ್ಸಿಡೆಂಟ್ ಆಗಿತ್ತು. ಸರಿಯಾದ ಚಿಕಿತ್ಸೆ ಪಡೆದಿರಲಿಲ್ಲ. ಹಾಡು, ಆ ಅಪಘಾತ ಎಲ್ಲವೂ ಸೇರಿ ಸಂಗಮ್‌ನನ್ನು ಮತ್ತಷ್ಟು ಸುಸ್ತು ಮಾಡಿಸಿತ್ತು. ಕಾರಿನಲ್ಲಿ ಹೋಗುವಾಗಲೂ ಮಂಪರಿನಲ್ಲಿಯೇ ಇದ್ದ. ದೀಪಿಕಾ ಮಾಡಿದ ಆಕ್ಸಿಡೆಂಟ್ ಒಂದು ಕ್ಷಣ ಅವನಿಗೆ ಏನೋ ಆಯಿತು ಎಂದೆನಿಸಿ, ಕೆಳಗೆ ಇಳಿಯುವುದಕ್ಕೆ ಯತ್ನಿಸಿದ್ದ. ಆದರೆ, ಕಾರಿನಲ್ಲಿದ್ದವರು ಅವನನ್ನು ಕರೆದುಕೊಂಡು ವಾಪಾಸ್ ಕೂರಿಸಿದ್ದರು. ಅಪಘಾತ ತಲೆ ಮೇಲೆ ಬಂದರೆ ಸುಮ್ಮನೆ ತಲೆ ನೋವಾಗುತ್ತೆ ಎಂದು ಗಿರಿಜಾಳನ್ನು ಬಿಟ್ಟು ಹೋಗಿಯೇ ಬಿಟ್ಟರು.

ಲಚ್ಚಿಗೆ ವಿಷಯ ತಿಳಿದರೆ..?

ಲಚ್ಚಿಗೆ ವಿಷಯ ತಿಳಿದರೆ..?

ಆ ಕಡೆ ಲಚ್ಚಿ ಬಹಳ ಖುಷಿಯಾಗಿದ್ದಾಳೆ. ಅವ್ವನನ್ನು ಉಳಿಸಿಕೊಳ್ಳುವುದಕ್ಕೆ ಹಣ ಸಿಕ್ಕಿದೆ ಅಂತ ಓಡೋಡಿ ಬರುತ್ತಾ ಇದ್ದಾಳೆ. ಅವ್ವ ನಿನ್ನನ್ನು ಕಾಪಾಡಿಕೊಳ್ತೀನಿ ಅನ್ನೋ ಭರವಸೆಯಲ್ಲಿ ಬರುತ್ತಿದ್ದಾಳೆ. ಈ ಕಡೆ ಗಿರಿಜಾಳನ್ನು ಊರಿನವರೆಲ್ಲಾ ಎತ್ತಿಕೊಂಡು ಬರುತ್ತಿದ್ದಾರೆ. ಗಿರಿಜಾಳ ಅಣ್ಣನಿಗೆ ಇಡೀ ಭೂಮಿಯೇ ಕುಸಿದಿದೆ. ಏನು ಮಾಡಬೇಕು ಎಂಬುದು ತಿಳಿಯದೆ ಕಣ್ಣೀರು ಹಾಕುತ್ತಾ, ಇಲ್ಲಿಯವರೆಗೂ ಮಗುವಿನಂತೆ ಕಾಪಾಡಿಕೊಂಡು ಬಂದ ಗಿರಿಜಾಳನ್ನು ಅದೇ ಕೈನಲ್ಲಿ ಎತ್ತಿಕೊಂಡು ಹೋಗುತ್ತಿದ್ದಾನೆ.

ಲಚ್ಚಿಯ ಸ್ಥಿತಿಗೆ ನೆಟ್ಟಿಗರ ಬೇಸರ..!

ಲಚ್ಚಿಯ ಸ್ಥಿತಿಗೆ ನೆಟ್ಟಿಗರ ಬೇಸರ..!

ಧಾರಾವಾಹಿಯಾಗಲಿ, ಸಿನಿಮಾವಾಗಲೀ ದೃಶ್ಯಗಳು ಮನುಷ್ಯರ ಮನಸ್ಸನ್ನು ಮುಟ್ಟಿದರೆ ಆ ಸಿನಿಮಾ ಸಕ್ಸಸ್ ಆದಂತೆ. ಈಗ ಲಚ್ಚಿ ಧಾರಾವಾಹಿಯಲ್ಲೂ ಇದೊಂದು ಕಾಲ್ಪನಿಕ, ರೀಲ್ ಎಂಬುದು ಗೊತ್ತು. ಆದರೆ, ಗಿರಿಜಾಳ ಸಾವು, ಗಿರಿಜಾಳ ಮೃತದೇಹವನ್ನು ನೋಡುವುದಕ್ಕೆ ನೋಡುಗರಿಂದಾನೇ ಆಗುತ್ತಿಲ್ಲ. ಎಲ್ಲರೂ ಸಮಾಧಾನದ ಮಾತುಗಳನ್ನು ಆಡುತ್ತಿದ್ದಾರೆ. ಲಚ್ಚಿ ಅನಾಥವಾಗಿಬಿಟ್ಟಳಾ ಎಂಬ ನೋವು ತೋಡಿಕೊಳ್ಳುತ್ತಿದ್ದಾರೆ. ಲಚ್ಚಿಗೆ ಸಮಾಧಾನ ಮಾಡಲು ಯತ್ನಿಸುತ್ತಿದ್ದಾರೆ. ಲಚ್ಚಿಗೆ ಇನ್ನು ಮುಂದೆ ಸಂಗಮ್ ಸಿಕ್ಕಿ, ಅವಳ ಬದುಕು ಹಸನಾಗಬಹುದಾ ಎಂಬ ನಿರೀಕ್ಷೆ ನೋಡುಗರದ್ದು.

More from Filmibeat

English summary
Star Suvarna Serial Namma Lacchi Written Update on March 9th Episode. Here is the details about Girija's Death Scene In the Serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X