Namma Lacchi: ರಿಯಾಳ ಹೊಟ್ಟೆಕಿಚ್ಚು ಮಿತಿಮೀರಿದೆ.. ಅಪಾಯದಲ್ಲಿರುವ ಲಚ್ಚಿಯನ್ನು ರಕ್ಷಿಸುತ್ತಾನಾ ಸಂಗಮ್ ?

By ಎಸ್ ಸುಮಂತ್

ರಿಯಾಗೆ ಮೊದಲಿನಿಂದಾನೂ ಲಚ್ಚಿ ಕಂಡ್ರೆ ಆಗ್ತಾ ಇಲ್ಲ. ಮನೆಯವರೆಲ್ಲಾ ಲಚ್ಚಿಗೆ ಪ್ರೀತಿ ತೋರುತ್ತಾರೆಂಬ ದ್ವೇಷ ಅವಳಲ್ಲಿದೆ. ಇದು ದಿನೇ ದಿನೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಲಚ್ಚಿ ಏನೇ ಮಾಡಿದರೂ ರಿಯಾಳಿಗೆ ಅವಳ ಮೇಲೆ ಪ್ರೀತಿಯೇ ಬರುತ್ತಿಲ್ಲ. ರಿಯಾ, ಲಚ್ಚಿಯನ್ನು ಕೊಂದೇ ಬಿಡುವಷ್ಟು ದ್ವೇಷ ಮಾಡ್ತಾಳೆ .

ರಿಯಾ ಬದಲಾಗುತ್ತಾಳೆ ಎಂದುಕೊಂಡರೆ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಲಚ್ಚಿ ಇಲ್ಲದೆ ಹೋಗಿದ್ದಲ್ಲಿ ತಾನು ಫೇಮಸ್ ಆಗಲ್ಲ ಎಂಬ ಸತ್ಯ ಗೊತ್ತಾದ ಮೇಲೂ ಅವಳು ಬದಲಾಗುವುದಿಲ್ಲ. ಸದ್ಯ ದೀಪಿಕಾಳ ತಪ್ಪನ್ನು ಕ್ಷಮಿಸಿದ ಸಂಗಮ್ ಮಕ್ಕಳಿಬ್ಬರನ್ನು ಕರೆದುಕೊಂಡು ಹೊರಗೆ ಬಂದಿದ್ದಾನೆ. ಲಚ್ಚಿ ಹೊಸ ಜಗತ್ತು ಕಂಡ ಖುಷಿಯಲ್ಲಿರುವಾಗಲೇ ಪ್ರಾಣಾಪಾಯದ ಸೂಚನೆಯೂ ಸಿಕ್ಕಿದೆ.

Namma Lacchi Serial Written Update on May 22nd episode

ಲಚ್ಚಿಗೆ ಹೊಸ ಜಗತ್ತು ತೋರಿಸಿದ ಸಂಗಮ್

ಲಚ್ಚಿ ಊರನ್ನು ಬಿಟ್ಟು ಸಂಗಮ್ ಮನೆಗೆ ಬಂದ‌ ಮೇಲೆ ಹೊಸ ಬದುಕನ್ನೇ ನೋಡುತ್ತಿದ್ದಾಳೆ. ಅಪ್ಪ, ಅವ್ವ, ದೊಡ್ಡವ್ವ, ದೊಡ್ಡಪ್ಪ, ಅಜ್ಜಿ ಅಂತೆಲ್ಲಾ ಸಂಬಂಧಗಳು ಸೃಷ್ಟಿಯಾಗಿದೆ. ತರಹೇವಾರಿ ತಿಂಡಿಗಳನ್ನು ತಿಂತಿದ್ದಾಳೆ. ಈಗ ಸಂಗಮ್, ರಿಯಾಳ ಜೊತೆಗೆ ಲಚ್ಚಿಯನ್ನು ಹೊರಗೆ ಕರೆದುಕೊಂಡು ಹೊರಟಿದ್ದಾನೆ. ರಿಯಾಳ ಆಜ್ಞೆಗೆ ಬರಲ್ಲ ಎಂದಿದ್ದ ಲಚ್ಚಿಯನ್ನು ಪ್ಲ್ಯಾನ್ ಮಾಡಿ ಕರೆದುಕೊಂಡು ಹೊರಟಿದ್ದಾನೆ.

ಪ್ರಕೃತಿಯ ನಡುವೆ ಅವ್ವನ ನೆನಪು

ಸಂಗಮ್‌ಗೆ ಸಂಗೀತ, ಪ್ರಕೃತಿ ಎಂದರೆ ಬಲು ಪ್ರೀತಿ. ಸಂಗಮ್ ಮಾಡುವ ಪರೀಕ್ಷೆಯಲ್ಲಿ ಲಚ್ಚಿಗೆ ಯಾವಾಗಲೂ ಗೆಲುವು. ರಿಯಾಗೆ ಸೋಲಾಗುತ್ತಲೇ ಇರುತ್ತದೆ. ಇದೀಗ ಪ್ರಕೃತಿಯ ನಡುವೆ ಮಕ್ಕಳಿಬ್ಬರನ್ನು ನಿಲ್ಲಿಸಿ, ಭಾವನೆಯ ಬಗ್ಗೆ ಕೇಳುತ್ತಿದ್ದಾನೆ. ಲಚ್ಚಿಗೆ ನಿಜವಾದ ಅನುಭವವಾಗಿದೆ. ಪ್ರಕೃತಿಯನ್ನು ಫೀಲ್ ಮಾಡಿದ್ದಾಳೆ. ಅದಕ್ಕಾಗಿಯೇ ಅವ್ವನ ನೆನಪಾಗಿದೆ. ಆದ್ರೆ, ರಿಯಾಗೆ ಅಕ್ಕ ಪಕ್ಕದ ಸದ್ದು ಜೋರಾಗಿ ಕೇಳಿಸಿದೆ. ಅದನ್ನೇ ಸಂಗಮ್‌ಗೆ ಹೇಳಿದ್ದಾಳೆ. ಲಚ್ಚಿಯನ್ನು ಕೇಳಿದಾಗ ಅವಳಿಂದ ಏನು ಉತ್ತರ ಬಂದಿಲ್ಲ. ನೋಡಿದರೆ ಕಣ್ಣಲ್ಲಿ ನೀರು. ಯಾಕೆ ಎಂದು ಕೇಳಿದಾಗ ಅವ್ವನ ನೆನಪಾಗುತ್ತಿದೆ ಎಂದು ಹೇಳಿದ್ದಾಳೆ. ಅದು ಸಂಗಮ್‌ಗೆ ಖುಷಿ ತಂದಿದ್ದು, ಲಚ್ಚಿಯನ್ನು ಮೆಚ್ಚಿಕೊಂಡಿದ್ದಾನೆ.

Namma Lacchi Serial Written Update on May 22nd episode

ರಿಯಾಳಿಂದ ಲಚ್ಚಿಗೆ ಸಂಕಟ

ರಿಯಾಗೆ ತಂದೆ ಲಚ್ಚಿಯನ್ನು ಹೊಗಿಳಿದ್ದು ಇಷ್ಟವಾಗಲಿಲ್ಲ. ಐಸ್ ಕ್ರೀಮ್ ತನ್ನಿ ಅಂತ ಹೇಳಿ ಕಳುಹಿಸಿದಳು. ಎಲ್ಲಿಯೂ ಹೋಗಬಾರದು ಅಂತ ಸಂಗಮ್ ಹೇಳಿ ಹೋದರೆ, ರಿಯಾ ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಳು. ಕಣ್ಣಾಮುಚ್ಚಾಲೇ ಆಡುವ ನೆಪದಲ್ಲಿ ಲಚ್ಚಿಯ ಪ್ರಾಣವನ್ನೇ ತೆಗೆಯಲು ಹೊರಟಿದ್ದಾಳೆ. ಬಂಡೆ ಕಲ್ಲಿನಿಂದ ಲಚ್ಚಿ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ‌. ರಿಯಾಗೆ ಸ್ವಲ್ಪವೂ ಭಯವೇ ಕಾಡದೆ ಸುಮ್ಮನೆ ನಿಂತಿದ್ದಾಳೆ.

ಲಚ್ಚಿಯನ್ನು ಕಾಪಾಡುತ್ತಾನಾ ಸಂಗಮ್?

ಸಂಗಮ್ ಐಸ್ ಕ್ರೀಂ ತರಲು ಹೋದವ ಹುಡುಕಿ ಬಂದಾಗ ಲಚ್ಚಿ ಇರಲೇ ಇಲ್ಲ. ಅದೃಷ್ಟಕ್ಕೆ ಲಚ್ಚಿ ಬಂಡೆಯಿಂದ ಕೆಳಗೆ ಬಿದ್ದವಳು, ಯಾವುದೋ ಕೊಂಬೆಯನ್ನು ಹಿಡಿದು ಒದ್ದಾಡುತ್ತಿದ್ದಳು. ತಕ್ಷಣ ಜೋರಾಗಿ ಕಿರುಚಿದಳು. ಸಂಗಮಪ್ಪ ಇಲ್ಲಿದ್ದೀನಿ ಅಂತ. ಅದನ್ನು ಕಂಡ ಸಂಗಮ್ ಒಂದು ಕ್ಷಣ ಶಾಕ್ ಆಗಿದ್ದಾನೆ. ಲಚ್ಚಿಯನ್ನು ಕಾಪಾಡುವುದು ಹೇಗೆ ಎಂದು ಗಾಬರಿಯಾಗಿದ್ದಾನೆ. ಲಚ್ಚಿಯ ಮೇಲಿನ ದ್ವೇಷಕ್ಕೆ ರಿಯಾ ಮನುಷ್ಯತ್ವವನ್ನೇ ಕಳೆದುಕೊಂಡಿದ್ದಾಳೆ. ಆ ರೀತಿಯಾಗಿ ವರ್ತಿಸುತ್ತಿದ್ದಾಳೆ. ಇದು ಸಂಗಮ್‌ಗೆ ಗೊತ್ತಾದರೆ ಏನ್ ಕಥೆ?

More from Filmibeat

English summary
Star Suvarna Serial Namma Lacchi Written Update on May 22nd episode. Here is the details about Lacchi in danger zone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X