Namma Lacchi: ಕಡೆಗೂ ಮಗಳನ್ನು ಕಾಪಾಡಿದ್ನಾ ಸಂಗಮ್? ಏನಾಯ್ತು ಲಚ್ಚಿ ಕಥೆ?

By ಎಸ್ ಸುಮಂತ್

ಕೆಡುಕು ಮಾಡುವವರು ಇದ್ದರು ಒಳಿತನ್ನು ಮಾಡಲು ದೇವರು ಸದಾ ಇರ್ತಾನೆ ಅನ್ನೋ ಮಾತಿದೆ. ಅದರಲ್ಲೂ ಲಚ್ಚಿಯ ಪಾಲಿಗೆ ದೇವರು ಸದಾ ಇರುತ್ತಾನೆ. ಯಾಕಂದ್ರೆ, ಲಚ್ಚಿಗೆ ಸಮಸ್ಯೆ ನೀಡಲು ಬಂದವರು ಒಬ್ಬರ ಇಬ್ಬರಾ..? ಊರಲ್ಲಿ ಸ್ವಂತ ಅತ್ತೆಯಿಂದಾನೇ ಲಚ್ಚಿ ಸಂಕಷ್ಟಕ್ಕೆ ಒಳಗಾಗಿದ್ದಳು. ಆದರೆ ದೇವರು ಲಚ್ವಿಯನ್ನು ಎಲ್ಲಿ ಸೇರಿಸಬೇಕೋ ಅಲ್ಲಿಗೆ ಸೇರಿಸಿದ.

ಸಂಗಮ್‌ನನ್ನು ಕಂಡು ಅಪ್ಪ ಎಂದೇ ಭಾವಿಸುತ್ತಿದ್ದಳು. ಸಂಗಮ್‌ನನ್ನು ಪೋಸ್ಟರ್‌ನಲ್ಲಿ ನೋಡಿದರೇನೆ ದೇವರ ರೀತಿ ಫೀಲ್ ಮಾಡುತ್ತಿದ್ದ ಲಚ್ಚಿಗೆ ಪ್ರತಿ ದಿನ ಸಂಗಮ್‌ ನೋಡುವ ಭಾಗ್ಯ ಸಿಕ್ಕಿದೆ. ಆ ಪ್ರತಿ ಘಳಿಗೆಯನ್ನು ಸವಿಯುತ್ತಿದ್ದಾಳೆ. ಈಗ ರಿಯಾ, ಲಚ್ಚಿಯನ್ನು ದೂರ ಮಾಡಬೇಕೆಂದು ನೋಡಿದಳು. ಆದರೆ ಆಗಿದ್ದು ಮಾತ್ರ ಬೇರೆ.

Namma Lacchi serial Written Update on May 23rd episode


ಮರದ ಕೊಂಬೆಯಲ್ಲಿ ನೇತಾಡುತ್ತಿದ್ದ ಲಚ್ಚಿ

ರಿಯಾ ಮಾಡಿದ ಕೆಲಸಕ್ಕೆ ಲಚ್ಚಿ ಪ್ರಾಣಾಪಾಯದಲ್ಲಿ ತಗಲಾಕಿಕೊಂಡಿದ್ದಾಳೆ. ಅದೃಷ್ಟಕ್ಕೆ ಯಾವುದೋ ಕೊಂಬೆ ಸಿಕ್ಕಿದೆ. ಅದನ್ನೇ ಹಿಡಿದುಕೊಂಡು ಬಚಾವ್ ಆಗಿದ್ದಳು. ಆದರೆ, ಎಷ್ಟೊತ್ತು ಅಂತ ಅದೇ ಕೊಂಬೆಯನ್ನು ಹಿಡಿದುಕೊಂಡು ಇರುವುದು. ಲಚ್ಚಿಗೆ ಅದು ಬಹಳಷ್ಟು ಕಷ್ಟ ಸಾಧ್ಯವಾಗುತ್ತಾ ಇತ್ತು. ಬಳಿಕ ಎಲ್ಲರನ್ನು ಸಹಾಯಕ್ಕೆ ಕರೆಯುತ್ತಿದ್ದಳು. ಲಚ್ಚಿ ಎಲ್ಲಿಗೆ ಹೋಗಿ ಬಿಟ್ಟಳು ಅಂತ ಹುಡುಕಿಕೊಂಡು ಬಂದ ಸಂಗಮ್‌ಗೆ ಲಚ್ಚಿ ನೇತಾಡುತ್ತಿದ್ದನ್ನು ಕಂಡು ಶಾಕ್ ಆಗಿದೆ.

ಲಚ್ಚಿಯನ್ನು ಕಂಡು ಗಾಬರಿಯಾದ ಸಂಗಮ್

ಲಚ್ಚಿಯ ಆ ಸ್ಥಿತಿಯನ್ನು ಕಂಡು ಸಂಗಮ್ ನಿಜಕ್ಕೂ ಗಾಬರಿಯಾಗಿದ್ದಾನೆ. ಆ ಕಡೆ ಲಚ್ಚಿ ಕೂಡ ಸಂಗಮ್‌ನನ್ನು ಕಂಡು "ಸಂಗಮಪ್ಪ ನನ್ನ ಕಾಪಾಡು. ಇಲ್ಲಿ ಹಿಡಿದುಕೊಳ್ಳುವುದಕ್ಕೆ ಆಗುತ್ತಿಲ್ಲ. ಕೈ ಜಾರ್ತಾ ಇದೆ" ಎಂದು ಹೇಳಿದ್ದಾಳೆ. ಇದನ್ನು ಕಂಡ ಸಂಗಮ್ ಲಚ್ಚಿ ಇರುವ ಅಪಾಯ ಅರಿತಿದ್ದಾನೆ. ಕೆಳಗೆ ಆಳ ಇದೆ. ಬಿದ್ದರೆ ಲಚ್ಚಿಯ ಪ್ರಾಣಕ್ಕೇನೆ ಅಪಾಯವಿದೆ. ಹೀಗಿರುವಾಗ ಲಚ್ಚಿಯನ್ನು ಕಾಪಾಡುವುದು ಹೇಗೆ ಎಂಬ ಆತಂಕ ಮನೆ ಮಾಡಿದೆ. ಅಲ್ಲಿಯೇ ಇದ್ದವರ ಸಹಾಯ ಪಡೆದು, ಹಗ್ಗದ ಸಹಾಯದಿಂದ ಸಂಗಮ್, ಲಚ್ಚಿಯನ್ನು ಕಾಪಾಡಿದ್ದಾನೆ.

Namma Lacchi serial Written Update on May 23rd episode

ಸಂಗಮ್‌ನನ್ನು ಅಪ್ಪಿದ ಲಚ್ಚಿ

ಲಚ್ಚಿ ಆ ಅಪಾಯದಿಂದ ಬದುಕಿ ಬಂದಿದ್ದೇ ಹೆಚ್ಚು. ಸಂಗಮ್ ಕಾಪಡಿದ ತಕ್ಷಣ ಲಚ್ಚಿಗೆ ಮನಸ್ಸಿನ ಭಾರ ಇಳಿದಿದೆ. ಸಂಗಮ್‌ಗೆ ಕೂಡ ಯಾವುದೋ ದೊಡ್ಡ ಭಾರ ಇಳಿದಂತೆ ಆಗಿ, ತಕ್ಷಣ ಲಚ್ಚಿಯನ್ನು ತಬ್ಬಿಕೊಂಡಿದ್ದಾನೆ. ಲಚ್ಚಿ ಕೂಡ ಸಂಗಮ್‌ನನ್ನು ತಬ್ಬಿಕೊಂಡು ಕಣ್ಣಲ್ಲಿ ನೀರು ಹಾಕಿದ್ದಾಳೆ‌‌. ಸಂಗಮ್‌ಗಂತೂ ಉಸಿರೇ ನಿಂತ ಭಾವನೆ ಉಂಟಾಗಿತ್ತು.

ಸತ್ಯ ಹೇಳದೆ ಸುಮ್ಮನಾಗುತ್ತಾಳಾ ಲಚ್ಚಿ?

ಲಚ್ಚಿಯ ಆ ಪರಿಸ್ಥಿತಿಗೆ ರಿಯಾಳೇ ಕಾರಣ. ಅವಳನ್ನು ಕೊಲ್ಲುವುದಕ್ಕೂ ಹಿಂದೆ ಮುಂದೆ ನೋಡದ ರಿಯಾ, ಕಣ್ಣಾಮುಚ್ಚಾಲೇ ನೆಪದಲ್ಲಿ ಬಂಡೆಯಿಂದ ಕೆಳಗೆ ಬೀಳುವಂತೆ ಮಾಡಿದ್ದಳು. ಬದುಕಿ ಬಂದಾಕ್ಷಣಾ ರಿಯಾಳಿಗೆ ಇನ್ನಷ್ಟು ಕೋಪ ಹೆಚ್ಚಾಗಿದೆ. ಮತ್ತೆ ಬದುಕಿ ಬಂದು ಬಿಟ್ಟಳಲ್ಲಾ ಎಂದು ಫೀಲ್ ಮಾಡುತ್ತಿದ್ದಾಳೆ‌. ಆ ಕಡೆ ಸಂಗಮ್, ಲಚ್ಚಿಯನ್ನು ಪ್ರಶ್ನೆ ಮಾಡಿದ್ದಾ‌ನೆ. "ಏನು ಲಚ್ಚಿ ನಿನ್ನ ಹುಡುಗಾಟ. ಅಲ್ಲಿಗೆ ಯಾಕೋ ಹೋದೆ. ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ ಏನೋ ಗತಿ" ಎಂದು ಪ್ರಶ್ನಿಸಿದ್ದಾನೆ. ಆ ಕಡೆ ರಿಯಾ ಕೈಮುಗಿದು ಬೇಡುತ್ತಿದ್ದಾಳೆ. ನನ್ನ ಹೆಸರನ್ನು ಹೇಳಬೇಡ ಅಂತ. ಲಚ್ಚಿ ಯಾರಿಗೂ ಕೆಟ್ಟದ್ದನ್ನು ಬಯಸದ ಮಗು. ರಿಯಾಳನ್ನೇ ಕಾಪಾಡಿದ್ದಾಳೆ‌.

More from Filmibeat

English summary
Star Suvarna serial Namma Lacchi Written Update on May 23rd episode. Here is the details about Lacchi and Sangam emotional scene.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X