Namma Lacchi: ಸಂಗಮ್‌ಗೆ ಸಿಕ್ಕ ಚಿಕ್ಕಿ ಪಾಟ್ನರ್ ಕಂಡು ರಿಯಾಗೆ ಹೊಟ್ಟೆ ಉರಿ ಜಾಸ್ತಿಯಾಗಿದೆ.. ಮುಂದೇನು?

By ಎಸ್ ಸುಮಂತ್

ಲಚ್ಚಿಗೆ ಈಗ ಎಲ್ಲವೂ ಇದೆ. ಆದರೆ, ಯಾವುದೂ ತನ್ನದು ಎಂಬ ಅರಿವು ಮಾತ್ರ ಇಲ್ಲ. ಸಂಗಮ್ (Vijay Surya)ನನ್ನು ಆರಾಧಿಸುವ ಲಚ್ಚಿ, ಏಕಲವ್ಯಳಂತೆ ಸಂಗೀತ ಕಲಿತಿದ್ದಾಳೆ. ಅವಳ ಧ್ವನಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಈಗ ಅವಳ ಧ್ವನಿ ಸೋಷಿಯಲ್ ಮೀಡಿಯಾದಲ್ಲೆಲ್ಲಾ ವೈರಲ್ ಆಗ್ತಾ ಇದೆ. ಸಂಗಮ್‌ಗೆ ಸತ್ಯ ಗೊತ್ತಾದಾಗ ಲಚ್ಚಿ (Sanghavi), ಮಗಳಾಗಿ ಇರುತ್ತಾಳೆ.

ರಿಯಾಳಿಗೆ ಲಚ್ಚಿಯನ್ನು ಕಂಡರೆ ಆಗುತ್ತಿಲ್ಲ. ಯಾಕಂದ್ರೆ, ಲಚ್ಚಿ ಸ್ಲಂ ಬಾಯ್ ಎಂಬ ಭಾವನೆ ಅವಳದ್ದು. ಅವನೇ ನನಗೆ ಧ್ವನಿ ಕೊಡುತ್ತಿರೋದು ಎಂಬುದು ಗೊತ್ತಾದರೂ, ಅವನನ್ನೇ ದ್ವೇಷಿಸುತ್ತಾಳೆ. ನಾನು ಫೇಮಸ್ ಆಗದೆ ಇದ್ದರೂ ಚಿಂತೆ ಇಲ್ಲ. ಆ ಸ್ಲಂ ಬಾಯ್ ವಾಯ್ಸ್ ನಂಗೆ ಬೇಡ ಅಂತ ಹಠ ಮಾಡ್ತಿದ್ದಾಳೆ.

Namma Lacchi Serial Written Update on May 3rd episode

ಸಂಗಮ್‌ಗೆ ಲಚ್ಚಿ ಎಂದರೆ ಇಷ್ಟ

ಸಂಗಮ್‌ನ ಡೈ ಹಾರ್ಡ್ ಫ್ಯಾನ್ ಲಚ್ಚಿ. ಸಂಗಮ್‌ನ ನೋಡಿದಾಗೆಲ್ಲಾ ದೇವರ‌ನ್ನು ನೋಡಿದಷ್ಟೇ ಖುಷಿಯಾಗುತ್ತಾಳೆ‌. ಸಂಗಮ್ ಮುಟ್ಟಿದ ಕೈ ತೊಳೆದುಕೊಳ್ಳುವುದಕ್ಕೆ ಲಚ್ಚಿ ಹಿಂದೆ‌ ಮುಂದೆ‌ ನೋಡಿದಳು. ಇದನ್ನೆಲ್ಲಾ ಕಂಡ ಸಂಗಮ್‌ಗೆ ಅವಳ ಅಭಿಮಾನ ಮತ್ತಷ್ಟು ಇಷ್ಟವಾಯಿತು. ಅವಳನ್ನು ಕಂಡಾಗಲೆಲ್ಲಾ ಒಂಥರ ಪ್ರೀತಿ ತೋರುತ್ತಾನೆ. ಅವಳನ್ನು ಕಂಡಾಗ ಸಂಗಮ್‌ಗೆ ಒಂದು ಪಾಸಿಟಿವ್ ವೈಬ್ ಮೂಡುತ್ತೆ.

ಚಿಕ್ಕಿ ಎಂದರೆ ಸಂಗಮ್‌ಗೆ ಇನ್ನಿಲ್ಲದ ಆಸೆ

ಸಂಗಮ್‌ಗೆ ಹಾಡು ಎಂದರೆ ಎಷ್ಟು ಇಷ್ಟವೋ, ಚಿಕ್ಕಿ ಎಂದರೂ ಅಷ್ಟೇ ಇಷ್ಟ. ಆದರೆ ಮನೆಯಲ್ಲಿ ದೀಪಿಕಾಗೆ ರಿಯಾ, ಸಂಗಮ್ ಚಿಕ್ಕಿ ತಿನ್ನುವುದೆಂದರೆ ಇಷ್ಟವಿಲ್ಲ. ದೀಪಿಕಾ ಈಗಾಗಲೇ ಚಿಕ್ಕಿ ತಿನ್ನಬಾರದು ಎಂದು ಪ್ರಾಮೀಸ್ ಮಾಡಿಸಿಕೊಂಡಿದ್ದಾರೆ. ಆದರೂ ಸಂಗಮ್‌ಗೆ ಚಿಕ್ಕಿ ಕಂಡರೆ ಅದೇ ಆಸೆಯಾಗುತ್ತೆ. ಈಗ ಮನೆಯಲ್ಲಿಯೇ ಚಿಕ್ಕಿ ಪಾಟ್ನರ್ ಸಿಕ್ಕಿದ್ದಾರೆ. ಲಚ್ಚಿ ಎಷ್ಟೇ ಆಗಲಿ ಸಂಗಮ್ ಮಗಳು. ಹೀಗಾಗಿ ಸಂಗೀತ, ಚಿಕ್ಕಿ ತಿನ್ನುವ ಗುಣ ಎಲ್ಲವೂ ಆ ಗುಣ ಹೆಚ್ಚಾಗಿನೆ ಬಂದಿದೆ.

Namma Lacchi Serial Written Update on May 3rd episode

ಲಚ್ಚಿಯ ಪ್ರೀತಿಗೆ ಸಂಗಮ್ ಖುಷಿ

ಗಿರಿಜಾಗೆ ಇದೇ ಗುಣಗಳು ಕೋಪ ತರಿಸುತ್ತಾ ಇತ್ತು. ಒಂದು ಹಾಡು ಮತ್ತೊಂದು ಚಿಕ್ಕಿ ತಿನ್ನುವುದು. ಲಚ್ಚಿ ಏನಾದರೂ ಚಿಕ್ಕಿ ತಿನ್ನುವುದನ್ನು ಕಂಡರೆ ಗಿರಿಜಾ ಕೋಪಗೊಂಡು ಕಿತ್ತು ಬಿಸಾಡುತ್ತಿದ್ದಳು. ಈಗ ಲಚ್ಚಿಗೆ ಅದಕ್ಕೊಬ್ಬ ಫ್ರೆಂಡ್ ಸಿಕ್ಕಿದ್ದಾರೆ. ಸಂಗಮ್ ಚಿಕ್ಕಿ ಇಷ್ಟ ಎಂದು ಗೊತ್ತಾದ ಕೂಡಲೇ ಮಲಗಿದ್ದ ಸಂಗಮ್‌ಗೆ ಚಿಕ್ಕಿ ತಂದುಕೊಟ್ಟಿದ್ದಾಳೆ. ಅದನ್ನು ಕಂಡ ಸಂಗಮ್ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾನೆ. ಲಚ್ಚಿ ಹಾಗೂ ಇಬ್ಬರು ಹಂಚಿಕೊಂಡು ತಿಂದಿದ್ದಾರೆ.

ರಿಯಾಳ ಕೆಂಗಣ್ಣಿಗೆ ಗುರಿಯಾದ ಲಚ್ಚಿ

ರಿಯಾಗೆ ಮೊದಲಿನಿಂದಲೂ ಲಚ್ವಿ ಕಂಡರೆ ಆಗಲ್ಲ. ದೀಪಿಕಾ ಸಪೋರ್ಟ್ ಮಾಡುತ್ತಾ ಇರುವುದಕ್ಕೇನೆ ಉರಿದುಕೊಂಡಿದ್ದಾಳೆ‌. ಈಗ ಅಪ್ಪನ ಸಪೋರ್ಟ್ ಕೂಡ ಸಿಕ್ಕಿದ್ದನ್ನು ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಅದರಲ್ಲೂ ಲಚ್ಚಿ ಮತ್ತು ಸಂಗಮ್ ಇಬ್ಬರು ಹಂಚಿಕೊಂಡು ಚಿಕ್ಕಿ ತಿಂದಿದ್ದನ್ನು ಕಂಡ ರಿಯಾ ಮತ್ತಷ್ಟು ಕೋಪಗೊಂಡಿದ್ದಾಳೆ. ಲಚ್ಚಿಯನ್ನು ಕರೆದು‌ ಎಚ್ಚರಿಕೆ ನೀಡಿದ್ದಾಳೆ. ನಮ್ಮ ಅಪ್ಪನತ್ರ ಕ್ಲೋಸ್ ಆಗ್ತಾ ಇದ್ದೀಯಾ ಅಂತ ಗದರಿದ್ದಾಳೆ. ಆಗ ಲಚ್ಚಿ ಸಂಗಮಪ್ಪ ಎಂದ ಕೂಡಲೇ, ಮತ್ತೆ ಜೋರು ಗದರಿದ್ದಾಳೆ. ಸಂಗಮಪ್ಪ ಅಲ್ಲ ಸಂಗಮ್ ಸರ್ ಎನ್ನಬೇಕು ಎಂದಿದ್ದಾಳೆ.

More from Filmibeat

English summary
Star suvarna serial Namma Lacchi Written Update on May 3rd episode. Here is the details about lacchi and Sangam chikki partner matter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X