Namma Lacchi: ಇನ್ಮುಂದೆ ಶಾಲೆಗೆ ಹೋಗ್ತಾಳೆ ಲಚ್ಚಿ.. ಅಂತಹದ್ದು ಏನಾಯ್ತು?

By ಎಸ್ ಸುಮಂತ್

ರಿಯಾ ಅದೆಷ್ಟೇ ಕೆಟ್ಟದ್ದನ್ನು ಮಾಡಲು ಹೋದರು ಲಚ್ಚಿಗೆ ಅದು ಒಳ್ಳೆಯದೆ ಆಗ್ತಾ ಇದೆ. ತನಗೆ ವಾಯ್ಸ್ ಕೊಟ್ಟು ಸಹಾಯ ಮಾಡ್ತಾ ಇರೋದು ಇದೇ ಲಚ್ಚಿ ಎಂದು ಗೊತ್ತಾದರೂ ರಿಯಾಳಿಗೆ ಕೃತಜ್ಞತೆ ಇಲ್ಲ. ಬದಲಿಗೆ ಲಚ್ಚಿಯನ್ನು ಹೇಗಾದರೂ ಮಾಡಿ ಮನೆಯಿಂದ ಹೊರಗೆ ಹಾಕಬೇಕು ಎಂದೇ ಪ್ಯ್ಲಾನ್ ಮಾಡುತ್ತಿದ್ದಾಳೆ‌. ತಾನೂ ಫೇಮಸ್ ಆಗದೆ ಇದ್ದರೂ ಚಿಂತೆ ಇಲ್ಲ. ಮೊದಲು ಆ ಸ್ಲಂ ಬಾಯ್ ನಮ್ಮ ಮನೆಯಿಂದ ಹೊರಗೆ ಹೋಗುಬೇಕು ಅನ್ನೋದೆ ಅವಳ ಧ್ಯೇಯವಾಗಿದೆ.

ರಿಯಾ, ತನ್ನ ಕೋಪವನ್ನೆಲ್ಲಾ ಈಗಾಗಲೇ ಹೊರ ಹಾಕಿ ಆಗಿದೆ. ಮಮ್ಮ ಬಳಿ ಹೇಳಿದ್ದಳು ಆ ಸ್ಲಂ ಬಾಯ್‌ನನ್ನು ಹೊರಗೆ ಕಳುಹಿಸಿ ಅಂತ. ದೀಪಿಕಾ ಅದಕ್ಕೆ ಸುತರಾಮ್ ಒಪ್ಪಿರಲಿಲ್ಲ. ಈಗ ರಿಯಾಗೆ ಕೋಪ ಬರಿಸುವಷ್ಟು ಮನೆಯವರಿಗೆಲ್ಲಾ ಮತ್ತಷ್ಟು ಕ್ಲೋಸ್ ಆಗಿದ್ದಾಳೆ ಲಚ್ಚಿ. ಈಗ ಡ್ಯಾಡೂಗೆ ಕೋಪ ತರಿಸುವಂತಹ ಕೆಲಸವನ್ನು ರಿಯಾ ಮಾಡುವುದಕ್ಕೆ ಶುರು ಮಾಡಿದ್ದಾಳೆ‌.

Namma Lacchi Serial Written Update on May 8th episode

ರಿಯಾಳ ಕಿತಾಪತಿ ಎಲ್ಲೆ ಮೀರಿದೆ

ರಿಯಾಳಿಗೆ ಲಚ್ಚಿಯನ್ನು ಕಂಡರೆ ಕೆಂಡದಂತ ಕೋಪ ಬರುತ್ತಿದೆ. ಇತ್ತೀಚೆಗೆ ಲಚ್ಚಿಗೆ ಇಷ್ಟ ಅಂತ ಒಬ್ಬಟ್ಟು ಮಾಡಲಾಗಿತ್ತು. ಲಚ್ಚಿಗೆ ಮೊದಲ ತುತ್ತು ತಿನ್ನಿಸಿ ರಿಯಾಳ ಕೋಪಕ್ಕೆ ಮತ್ತಷ್ಟು ತುಪ್ಪ ಸುರಿದಾಗಿತ್ತು. ಹೀಗಾಗಿ ಹೇಗಾದರೂ ಮಾಡಿ ಲಚ್ಚಿಗೆ ಬೈಯ್ಯುವಂತೆ ಮಾಡಬೇಕೆಂದು ಹಠ ತೊಟ್ಟ ರಿಯಾ, ಸಂಗಮ್ ಹಾಗೂ ಸಾಗರ್‌ಗೆ ಭಾವನಾತ್ಮಕವಾಗಿರುವ ಡೈರಿಯನ್ನು ಕೊಟ್ಟು, ಆಟಿಕೆ ಮಾಡಲು ಹೇಳಿದ್ದಳು ರಿಯಾ.

ಲಚ್ಚಿಯ ಕಲೆಗೆ ಸಂಗಮ್ - ಸಾಗರ್ ಮೆಚ್ಚುಗೆ

ಸಂಗಮ್ ಮತ್ತು ಸಾಗರ್‌ಗೆ ತಮ್ಮ ಬಾಲ್ಯದ ನೆನಪುಗಳು ಎಂದರೆ ಪ್ರೀತಿ. ಸಮಯ ಸಿಕ್ಕಾಗೆಲ್ಲಾ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಿರುತ್ತಾ ಇರುತ್ತಾರೆ. ಅದರಲ್ಲೂ ಈಗ ಲಚ್ಚಿ ಬಂದ ಮೇಲೆ ಅದು ಸ್ವಲ್ಪ ಜಾಸ್ತಿಯೇ ಆಗಿದೆ. ಲಚ್ಚಿ, ಪೇಪರ್ ದೋಣಿ, ಫ್ಲೈಟ್ ಹೀಗೆ ಅನೇಕ ಆಟಿಕೆ ಸಾಮಾನುಗಳನ್ನು ಮಾಡಿಕೊಂಡು ಬಂದು ಸಂಗಮ್ ಮತ್ತು ಸಾಗರ್ ಗೆ ಖುಷಿ ಪಡಿಸಿದ್ದಾಳೆ.

ರಿಯಾಳಿಂದ ಲಚ್ಚಿಗೆ ಬೈಗುಳ

ಲಚ್ಚಿಯ ಟ್ಯಾಲೆಂಟ್ ನೋಡಿ ಸಂಗಮ್ ಮತ್ತು ಸಾಗರ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದರು. ಆದರೆ, ಅದು ಅರೆಕ್ಷಣ ಮಾತ್ರ. ಆ ಪೇಪರ್ ಬೋಟ್ ಎಲ್ಲಾ ಮಾಡಿರೋದು ತಾವೂ ಜೀವವನ್ನೇ ಇಟ್ಟುಕೊಂಡಿರುವ ಡೈರಿ ಪೇಪರ್‌ನಲ್ಲಿ ಅಂತ ಗೊತ್ತಾದ ಕೂಡಲೇ ಸಂಗಮ್ ಕೆಂಡಾಮಂಡಲನಾದ. ಸಾಗರ್ ಕಣ್ಣಲ್ಲಿ ನೀರಾಕಿದರು. ಆದರೆ ಆ ಡೈರಿಯನ್ನು ಕೊಟ್ಟಿದ್ದು ರಿಯಾನೇ ಅಂತ ಲಚ್ಚಿ ಸತ್ಯ ಹೇಳಿ ಬಚಾವ್ ಆಗಿದ್ದಾಳೆ.

Namma Lacchi Serial Written Update on May 8th episode

ರಿಯಾಳಿಂದ ಒಳಿತೇ ಆಯ್ತು

ರಿಯಾ ಬೇಕಂತಲೇ ಲಚ್ಚಿಗೆ ಕೆಟ್ಟದ್ದನ್ನು ಮಾಡಲು ಹೋದಾಗೆಲ್ಲಾ ಒಳೀತೇ ಆಗುತ್ತಿದೆ. ರಿಯಾಳೇ ಕೊಟ್ಟಿದ್ದು ಎಂದು ಹೇಳಿದಾಕ್ಷಣಾ ರಿಯಾ ಕೋಪ ಮಾಡಿಕೊಂಡು ಹೋದಳು. ಇದು ಸಂಗಮ್ ಹಾಗೂ ದೀಪಿಕಾಗೆ ಅವಳದ್ದೇ ಕೆಲಸ ಅಂತ ಗೊತ್ತಾಯ್ತು. ಸಂಗಮ್ ಮತ್ತೆ ಕೇಳಿದ, ಹೌದು ಎಂದು ಲಚ್ಚಿ‌ಒಪ್ಪಿಕೊಂಡಾಗ, ರಿಯಾ ಕೊಟ್ಟಳು ಸರಿ. ಅದರಲ್ಲಿ ಏನಿದೆ ಅಂತ ಓದಬೇಕು ಅಲ್ವಾ ಅಂತ ಪ್ರಶ್ನೆ ಮಾಡಿದ. ತಕ್ಷಣ ಲಚ್ಚಿ, "ಅದರಲ್ಲಿ ಏನಿದೆ ಅಂತ ನೋಡೋಕೆ ಓದೋಕೆ, ಬರೆಯೋಕೆ ಬಂದ್ರೆ ಅಲ್ವಾ ಸಂಗಮಪ್ಪ. ನನ್ನಿಂದ ತಪ್ಪಾಗಿದೆ. ಕ್ಷಮಿಸಿ ಬಿಡಿ" ಎಂದು ಕೈ ಮುಗಿದು ಕೇಳಿದಾಗ ಎಲ್ಲರ ಮನಸ್ಸು ಕರಗಿತ್ತು. ದೀಪಿಕಾಗೂ ಮಾತು ಬರಲಿಲ್ಲ. ಈಗ ರಿಯಾ ಮಾಡಿದ ಕಿತಾಪತಿಯಿಂದ ನಾಳೆಯಿಂದ ಲಚ್ಚಿ ಕೂಡ ಶಾಲೆಗೆ ಹೋಗಬಹುದೇನೋ.

More from Filmibeat

English summary
Star suvarna serial Namma Lacchi Written Update on May 8th episode. Here is the details about Riya kirik.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X