Namma Lacchi: ಫ್ರೆಂಡ್ಸ್ ಅಂತ ನಂಬಿಸಿ ಲಚ್ಚಿಗೆ ತೊಂದರೆ ಕೊಟ್ಟ ರಿಯಾ.. ಭವಿಷ್ಯಕ್ಕೆ ಮುಳುವಾಗುತ್ತಾ?
ರಿಯಾಗೆ ಅದ್ಯಾವಾಗ ಬುದ್ದಿ ಬರುತ್ತೋ ಏನೋ. ಲಚ್ಚಿಯನ್ನು ಕಂಡಾಗೆಲ್ಲಾ ಬರೀ ಹೊಟ್ಟೆಕಿಚ್ಚು ಪಟ್ಟಿಕೊಳ್ಳುತ್ತಾಳೆ. ಲಚ್ಚಿಗೆ ಕೆಟ್ಟದು ಮಾಡುವುದಕ್ಕೇ ಕಾಯುತ್ತಿರುತ್ತಾಳೆ. ಮನೆಯವರೆಲ್ಲಾ ಲಚ್ಚಿಯ ಮೇಲೆ ಇಟ್ಟಿರುವ ಪ್ರೀತಿಯನ್ನು ತಡೆದುಕೊಳ್ಳುವುದಕ್ಕೆ ರಿಯಾಳಿಂದ ಸಾಧ್ಯವಾಗುತ್ತಿಲ್ಲ.
ಅದಕ್ಕೆಂದೇ ಅವರ ಅಪ್ಪನ ಭಾವನೆಗಳ ಜೊತೆಗೆ ಆಟವಾಡಿದ್ದಾಳೆ. ಸಂಗಮ್‌ಗೆ ಆ ಡೈರಿ ಎಷ್ಟು ಮುಖ್ಯ ಅನ್ನೋದು ಗೊತ್ತಿದ್ದರೂ, ಓದುವುದಕ್ಕೆ ಬರೆಯುವುದಕ್ಕೆ ಬಾರದ ಲಚ್ಚಿಯ ಬಳಿ ತಂದು ಕೊಟ್ಟಿದ್ದಾಳೆ. ರಿಯಾ ಅಂದುಕೊಂಡಷ್ಟು ಸಮಸ್ಯೆಯಾಗದೆ ಇದ್ದಾಗ ಈಗ ಹೊಸ ಸಮಸ್ಯೆ ಸೃಷ್ಟಿಸಿ, ತನ್ನ ಭವಿಷ್ಯಕ್ಕೆ ಕಂಠಕ ತಂದುಕೊಳ್ಳಲಿದ್ದಾಳೆ.

ರಿಯಾಳಿಗೆ ಬುದ್ದಿ ಹೇಳಿದ ಲಚ್ಚಿ
ಲಚ್ಚಿಗೆ ಅದೊಂದು ದೊಡ್ಡ ಬೇಸರವಿದೆ. ರಿಯಾ ಯಾಕೆ ತನ್ನ ಮೇಲೆ ಇಷ್ಟೊಂದು ಕೆಂಡಕಾರುತ್ತಾಳೆ ಎಂಬುದು. ಸಂಗಮಪ್ಪನ ಡೈರಿ ತಂದುಕೊಟ್ಟಿದ್ದು ರಿಯಾಗೆ ಗೊತ್ತಿದ್ದೇ ಮಾಡಿದ್ದಾಳೆ ಎಂಬ ಸತ್ಯ ಅರ್ಥವಾಗಿದೆ. ರಿಯಾಳ ಬಳಿಯೇ ಅದರ ವಿವರಣೆ ಕೇಳಿದ್ದಾಳೆ ಲಚ್ಚಿ. "ನಿಂಗೆ ಎಲ್ಲವೂ ಗೊತ್ತಿತ್ತು. ಆದರೂ ನೀನು ಬೇಕು ಅಂತಾನೇ ಮಾಡಿದ್ದೀಯಾ. ನಿನ್ನಿಂದ ನಂಗೆ ಬೇಜಾರು ಆಗಿದೆ" ಎಂದಿದ್ದಾಳೆ. ರಿಯಾಳ ಕೆಲಸಕ್ಕೆ ಲಚ್ಚಿ ಕಣ್ಣೀರು ಹಾಕಿದ್ದಾಳೆ.
ಲಚ್ಚಿ ನಿರ್ಧಾರ ಕೇಳಿ ರಿಯಾ ಶಾಕ್
ಆದರೆ, ರಿಯಾ ಹೊಸ ನಾಟಕ ಶುರು ಮಾಡಿಕೊಂಡಿದ್ದಾಳೆ. "ಖಂಡಿತ ನನಗೆ ಈ ಬಗ್ಗೆ ಗೊತ್ತಿರಲಿಲ್ಲ. ಡ್ಯಾಡೂಗೆ ಅದು ಇಷ್ಟ ಅ.ಮತ ನಿಂಗೆ ಮಾಡೋದಕ್ಕೆ ಹೇಳಿದೆ ಅಷ್ಟೆ" ಎಂದು ಸಮರ್ಥನೆ ಕೊಡುವುದಕ್ಕೆ ಪ್ರಯತ್ನ ಪಟ್ಟಿದ್ದಾಳೆ. ಆದರೆ, ಲಚ್ಚಿಗೆ ಅದರ ಮೇಲೆ ನಂಬಿಕೆಯೇ ಬಂದಿಲ್ಲ. "ನಂಗಂತೂ ಓದುವುದಕ್ಕೆ ಬರೆಯುವುದಕ್ಕೆ ಬರಲ್ಲ. ನಿಂಗೆ ಗೊತ್ತಿದ್ದೇ ಈ ತಪ್ಪು ಮಾಡಿದ್ದೀಯಾ. ಅದು ಸಂಗೀತದ ಪುಸ್ತಕ. ನಿಂಗೆ ಸಂಗೀತದ ಬಗ್ಗೆ ಗೊತ್ತಾಗಲ್ಲ ಬಿಡು. ಸಂಗೀತದ ಬಗ್ಗೆ ಗೊತ್ತಿಲ್ಲದೆ ಇರುವ ನಿಂಗೆ ನಾನು ಹಾಡಲ್ಲ" ಎಂದಿದ್ದಾಳೆ. ಲಚ್ಚಿಯ ನಿರ್ಧಾರಕ್ಕೆ ರಿಯಾ ಶಾಕ್ ಆಗಿದ್ದಾಳೆ.
ಐಸ್ ಕ್ಯೂಬ್ ತಿನ್ಮಿಸಿದ ರಿಯಾ
ರಿಯಾ ಒಂದು ಅಥವಾ ಎರಡು ತಪ್ಪಿನಿಂದ ತಿದ್ದಿಕೊಳ್ಳುತ್ತಾಳೆ ಎಂಬ ನಂಬಿಕೆ ಇಲ್ಲ. ಲಚ್ಚಿ ಹಾಡಲ್ಲ ಎಂದಿದ್ದೇ ತಡ, ಮತ್ತೆ ಅದೇ ದ್ಚೇಣದ ಮನಸ್ಥಿತಿ ಬೆಳೆಸಿಕೊಂಡಿದ್ದಾಳೆ. ವಾಯ್ಸ್ ಚೆನ್ನಾಗಿದೆ ಅಂತ ಈ ರೀತಿ ಆಡ್ತೀಯ ಅಲ್ವಾ ಅಂತ ಹೇಳಿ ಮತ್ತೊಂದು ಸ್ಕೆಚ್ ಹಾಕಿದ್ದಾಳೆ. "ಇಷ್ಡು ದಿನ ಮಾಡಿದ್ದಕ್ಕೆ ನನ್ನ ಕ್ಷಮಿಸು. ಇನ್ಮೇಲೆ ನಾವಿಬ್ಬರು ಫ್ರೆಂಡ್ಸ್ ಆಗಿರೋಣಾ. ನಮ್ಮ ಡ್ಯಾಡೂ ವಾಯ್ಸ್ ಅಷ್ಟು ಚೆನ್ನಾಗಿ ಆಗುವುದಕ್ಕೆ ಕಾರಣ ಒಂದಿದೆ. ರಾತ್ರಿ ಮಲಗುವಾಗ ಒಂದು ಐಟಂ ತಿಂದು ಮಲಗುತ್ತಾರೆ. ಅದಕ್ಕೆ ಅಷ್ಟು ಚೆನ್ನಾಗಿ ಬರುವುದು. ನಿನಗೂ ಕೊಡ್ತೀನಿ ಬಾ" ಅಂತ ಕರೆದುಕೊಂಡು ಹೋಗಿ, ಲಚ್ಚಿಗೆ ಐಸ್ ಕ್ಯೂಬ್ ತಿನ್ನಿಸಿದ್ದಾಳೆ.

ಆಡಿಷನ್‌ನಲ್ಲಿ ಸತ್ಯ ಹೊರಬೀಳುತ್ತಾ..?
ರಿಯಾಗೆ ಪಾಪ ನಾಳೆ ತನ್ನದೂ ಆಡಿಷನ್ ಇದೆ ಅನ್ನೋದು ನೆನಪಿಲ್ಲ ಎನಿಸುತ್ತದೆ. ನಾಳೆ ಮ್ಯೂಸಿಕ್ ಕಂಪನಿಯವರು ಮನೆಗೆ ಬರುತ್ತಿದ್ದಾರೆ ರಿಯಾಳ ಹಾಡು ಕೇಳುವುದಕ್ಕೆ. ಆ ಕಡೆ ಸಂಗಮ್ ಬೇರೆ ಹಠ ಮಾಡಿದ್ದಾನೆ. ಮಗಳು ನನ್ನ ಮುಂದೆ ಹಾಡದೇ ಹೋದಲ್ಲಿ ಯಾರ ಮುಂದೆಯೂ ಹಾಡುವುದಕ್ಕೆ ಬಿಡುವುದಿಲ್ಲ ಅಂತ. ಈಗ ರಿಯಾ ಬೇರೆ ತನಗೆ ವಾಯ್ಸ್ ಕೊಡಬೇಕಾದ ಲಚ್ಚಿಯ ಧ್ವನಿಯನ್ನೇ ತೆಗೆದಿದ್ದಾಳೆ. ನಾಳೆ ಆಡಿಷನ್‌ನಲ್ಲಿ ಅವರ ತಂದೆಯಿಂದಾನೇ ಬಚಾವ್ ಆಗ್ತಾಳೆ ಅನ್ಸುತ್ತೆ.


Click it and Unblock the Notifications











