Namma Lacchi: ದೀಪಿಕಾ ಅವ್ವ ಬೆಗ್ಗರ್.. ಜಲಸಿ ಎಂದ ಲಚ್ಚಿ.. ಮುಂದೇನಾಗುತ್ತೆ?
ನಮ್ಮ ಲಚ್ಚಿ ಕಂಠವನ್ನು ಒಂದೊಮ್ಮೆ ಕೇಳಿದರೂ ಸಾಕು ಸೋತು ಹೋಗುವವರೇ ಹೆಚ್ಚು. ಅಷ್ಟು ಮುದ್ದಾಗಿದೆ. ಅದಕ್ಕೆ ಸಂಗಮ್ ಇತ್ತೀಚೆಗೆ ಲಚ್ಚಿಯಿಂದ ಹಾಡು ಹೇಳಿಸಿಕೊಂಡೆ ಮಲಗುತ್ತಾನೆ. ಲಚ್ಚಿಯ ಕಂಠದಿಂದ ರಿಯಾ ಬೆಳೆಯುತ್ತಿದ್ದಾಳೆ ಎಂದು ಗೊತ್ತಾದಾಗಿನಿಂದ ಸಂಗಮ್‌ಗೆ ನಿದ್ದೆಯಿಲ್ಲ. ಹೇಗಾದರೂ ಮಾಡಿ ಲಚ್ವಿಗೆ ನ್ಯಾಯ ಒದಗಿಸಬೇಕೆಂಬುದೇ ಅವನ ಆಸೆಯಾಗಿದೆ. ಅದಕ್ಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾಳೆ.
ಸಂಗಮ್ ಗೊತ್ತಿಲ್ಲದೆಯೇ ಲಚ್ಚುಗೆ ತಂದೆಯ ಪ್ರೀತಿ ಕೊಡ್ತಾ ಇದ್ದಾನೆ. ಲಚ್ಚಿಯಲ್ಲಿ ತನಗೆ ಹೋಲುವಂತ ಒಂದಷ್ಟು ಗುಣಗಳಿದೆ. ಆದರೆ ಅದು ಸಂಗಮ್‌ಗೆ ಕಾಣಿಸುತ್ತಾ ಇದೆ. ಯಾವಾಗಲೂ ಹೊಗಳುತ್ತಾನೆ. ಲಚ್ಚಿ ನನ್ನ ಮಗ. ನಂದು ಅವನದ್ದು ತಂದೆ ಮಗನ ಸಂಬಂಧ ಎಂದೇ ಹೇಳುತ್ತಾನೆ. ಆದ್ರೆ ಸಂಗಮ್‌ಗೆ ಲಚ್ಚಿ ನನ್ನ ಮಗಳೇ ಎಂದು ಗೊತ್ತಾದ ದಿನ ಕುಸಿದು ಬೀಳುತ್ತಾನೇನೋ..?

ರಿಯಾಳನ್ನು ಲಾಂಚ್ ಮಾಡಲು ಸಿದ್ಧತೆ
ರಿಯಾಳನ್ನು ದೊಡ್ಡ ಸಿಂಗರ್ ಮಾಡಬೇಕು ಎಂದುಕೊಂಡೇ ದೀಪಿಕಾ ಸಿದ್ಧತೆ ನಡೆಸಿದ್ದಾಳೆ. ಅದೇ ಕಾರಣಕ್ಕೇನೆ ಲಚ್ಚಿಯನ್ನು ಮನೆಯಲ್ಲಿಟ್ಟುಕೊಂಡಿದ್ದಾಳೆ. ಮ್ಯೂಸಿಕ್ ಕಂಪನಿಯವರಿಗೆ ಹಾಗೋ ಹೀಗೋ ಮಾಡಿ ರಿಯಾ ಒಬ್ಬ ದೊಡ್ಡ ಸಿಂಗರ್ ಎಂಬುದನ್ನು ಒಪ್ಪಿಸಿದ್ದಳು. ಈಗ ರಿಯಾಳನ್ನು ಎಲ್ಲರ ಮುಂದೆ ಲಾಂಚ್ ಮಾಡಲು ಒಂದು ದೊಡ್ಡ ಪ್ರೋಗ್ರಾಂ ಮಾಡಿದ್ದಾಳೆ. ಒಂದು ಕಡೆ ದೀಪಿಕಾಗೆ ಅದು ಸಂತೋಷ ನೀಡಿದರೆ, ಮತ್ತೊಂದು ಕಡೆ ಆತಂಕವನ್ನೇ ನೀಡಿದೆ.
ರಿಪೋರ್ಟರ್‌ಗೂ ಗೊತ್ತಾಗಿದೆ ಸತ್ಯ
ಸದ್ಯ ರಿಯಾಳನ್ನು ಲಾಂಚ್ ಮಾಡುವ ಕಾರ್ಯಕ್ರಮ ನಡೆಸಿಕೊಡಲು ಬಂದಿರುವುದು ಅವತ್ತಿನ ರಿಪೋರ್ಟರ್. ಅಂದ್ರೆ ರಿಯಾಳ ಇಂಟರ್‌ವ್ಯೂ ಮಾಡಲು ಬಂದಾಗ ದೀಪಿಕಾ ಸರಿಯಾಗಿ ರೆಸ್ಪಾನ್ಸ್ ಮಾಡಿರಲಿಲ್ಲ. ಜೊತೆಗೆ ಲಚ್ಚಿಯ ಹುಡುಗರೆಲ್ಲಾ ಸೇರಿ ಆಕೆಗೇನೆ ದೂರು ನೀಡಿದ್ದರು. ಲಚ್ಚಿ ಕಾಣಿಸುತ್ತಿಲ್ಲ ಅಂತ ಹೇಳಿ. ಜೊತೆಗೆ ಈ ವಾಯ್ಸ್ ನ ಸ್ಲಂನಲ್ಲಿ ಕೇಳಿದ ನೆನಪು ಆಗಿತ್ತು. ಹೀಗಾಗಿ ಎಲ್ಲವೂ ಮಿಕ್ಸ್ ಆಗಿ ರಿಪೋರ್ಟರ್‌ಗೂ ಸತ್ಯ ಗೊತ್ತಾಗಿದೆ.

ದೀಪಿಕಾಗೆ ಬೆಗ್ಗರ್, ಜಲಸ್ ಎಂದ ಲಚ್ಚಿ
ಲಚ್ಚಿಯನ್ನು ಹುಡುಕುತ್ತಾ ಬಂದ ರಿಪೋರ್ಟರ್ ಸಿಕ್ಕಾಪಟ್ಟೆ ಖುಷಿಪಟ್ಟು ಹೊಗಳಿದಳು. ಅಷ್ಟರಲ್ಲಿ ಅಲ್ಲಿಗೆ ದೀಪಿಕಾ ಬಂದು ಲಚ್ಚಿಯನ್ನು ಕರೆದುಕೊಂಡು ಹೋಗುವುದಕ್ಕೆ ಪ್ರಯತ್ನ ಪಟ್ಟಾಗ, ಆ ರಿಪೋರ್ಟರ್ ತಡೆದಿದ್ದಾಳೆ. ನೀವೂ ಲಚ್ಚಿ ಮುಂದೆ ಬೆಗ್ಗರ್ ಆಗ್ಬಿಟ್ರಿ, ನಿಮ್ಗೆ ಜಲಸ್ ಅಲ್ವಾ ಎಂದಾಗ ಲಚ್ಚಿ ಆ ಪದದ ಅರ್ಥ ಕೇಳಿದ್ದಾಳೆ. ಅದನ್ನ ಪಾಸಿಟಿವ್ ಮಾತುಗಳು ಎಂದಾಗ ಲಚ್ಚಿ ಕೂಡ ಅದೇ ಮಾತನ್ನ ಹೇಳಿದ್ದಾಳೆ. "ಹೌದು ಹೌದು ನಮ್ಮ ದೀಪಿಕಾ ಅವ್ವ ದೊಡ್ಡ ಬೆಗ್ಗರ್. ಸಿಕ್ಕಾಪಟ್ಟೆ ಜಲಸಿ. ನನ್ನ ಕಂಡರಂತು ಇನ್ನು ಜಲಸಿ" ಅಂತೆಲ್ಲಾ ಹೇಳಿದಾಗಲೂ ದೀಪಿಕಾ ಮೌನಿಯಾಗಿದ್ದಾಳೆ.
ಲಚ್ಚಿಯನ್ನು ಕಳುಹಿಸುತ್ತಿಲ್ಲ ಸಂಗಮ್
ಆ ಕಡೆ ಸ್ಟೇಜ್ ಮೇಲೆ ಕಾರ್ಯಕ್ರಮ ಶುರುವಾಗಿದೆ. ರಿಪೋರ್ಟರ್‌ಗೆ ಮೊದಲೇ ಕಣ್ಣಿದ್ದ ಕಾರಣಕ್ಕೆ ರಿಯಾಳ ಕೈಲಿ ಲೈವ್‌ನಲ್ಲಿ ಒಂದು ಹಾಡು ಹಾಡಿಸೋಣಾ ಎಂದು ಮೈಕ್ ನಲ್ಲಿಯೇ ಅನೌನ್ಸ್ ಮಾಡಿದ್ದಾಳೆ. ಇದು ರಿಯಾಳಿಗೂ ಗಾಬರಿಯಾಗಿದೆ. ದೀಪಿಕಾಳಿಗಂತು ಮತ್ತಷ್ಟು ಶಾಕ್ ಆಗಿದೆ. ಆ ಕಡೆ ಲಚ್ಚಿಯನ್ನು ಕರೆದು ಮತ್ತೆ ಹಾಡಿಸುವ ಪ್ಲ್ಯಾನ್ ಮಾಡಿದ್ದಳು. ಆದರೆ ಸಂಗಮ್, ಲಚ್ಚಿಯನ್ನು ಹೋಗದಂತೆ ತಡೆದಿದ್ದಾನೆ.


Click it and Unblock the Notifications











