Namma Lacchi: ಸಂಗಮಪ್ಪನ ಕಣ್ಣೀರಿಗೆ ಕರಗುತ್ತಾ ಲಚ್ಚಿ ಮನಸ್ಸು .. ಸತ್ಯ ಹೇಳ್ತಾಳಾ..?
ಲಚ್ಚಿಯ ಧ್ವನಿಯಿಂದಾನೇ ರಿಯಾ ಫೇಮಸ್ ಆಗಿದ್ದು.ರಿಯಾ ಸ್ಟಾರ್ ಸಿಂಗರ್ ಎನಿಸಿಕೊಂಡಿದ್ದೆ ಲಚ್ಚಿಯ ಹಾಡಿನಿಂದಾಗಿ. ಆದರೆ, ಇದು ಯಾರಿಗೂ ಗೊತ್ತಾಗದಂತೆ ಮೆಂಟೈನ್ ಮಾಡಿದ್ದು ಮಾತ್ರ ದೀಪಿಕಾ.
ಮಗಳನ್ನು ಸ್ಟಾರ್ ಸಿಂಗರ್ ಮಾಡು ಅಂತ ಸಂಗಮ್ ಹತ್ತಿರ ಕೇಳಿದಾಗ, ಮೊದಲು ಸಂಗೀತ ಕಲಿಯುವುದಕ್ಕೆ ಹೇಳು ಅಂದಿದ್ದ. ಆದರೆ ಅದು ಸಾಧ್ಯವೇ ಇಲ್ಲ ಎಂದಾಗ ಬೇರೆ ದಾರಿ ಹಿಡಿದಳು.

ಈಗ ರಿಯಾ ದೊಡ್ಡ ಮ್ಯೂಸಿಕ್ ಸಂಸ್ಥೆಗೆ ಆಯ್ಕೆಯಾಗಿದ್ದಾಳೆ. ಅದು ಕೂಡ ಲಚ್ಚಿಯ ಹಾಡಿನಿಂದಾಗಿಯೇ. ಮ್ಯೂಸಿಕ್ ಡೈರೆಕ್ಟರ್ ಏನೋ ಒಪ್ಪಿಗೆ ಸೂಚಿಸಿದ್ದಾಯ್ತು. ಆದರೆ ಸಂಗಮ್‌ಗೆ ತನ್ನ ಮಗಳ ಕಂಠ ಎಂಥದ್ದು, ಎಷ್ಟರಮಟ್ಟಿಗೆ ಸಂಗೀತ ಹಾಡಬಲ್ಲಳು ಎಂಬುದು ಗೊತ್ತಿದೆ. ಅದಕ್ಕೆ ಸತ್ಯಕ್ಕಾಗಿ ಕಿರುಚಿದ್ದಾನೆ.
ಸತ್ಯ ತಿಳಿದು ಕಣ್ಣೀರು ಹಾಕುತ್ತಿರುವ ಸಂಗಮ್
ಸಂಗಮ್ ಸಾಕಷ್ಟು ಬಾರಿ ತನ್ನ ಮಗಳು ರಿಯಾಗೆ ಸಂಗೀತ ಕಲಿಸಿಕೊಡುವ ಪ್ರಯತ್ನ ಮಾಡಿದ್ದಾನೆ. ಸಂಗಮ್ ಅಣ್ಣ ಕೂಡ ಸಂಗೀತ ಕಲಿಸಿಕೊಡಲು ಪ್ರಯತ್ನ ಮಾಡಿದ್ದಾರೆ. ಆಗಲೂ ರಿಯಾಳ ನಾಲಿಗೆ ತಿರುಗದೆ ಇದ್ದಿದ್ದನ್ನು ಕಂಡಿದ್ದಾರೆ. ಇದೀಗ ರಿಯಾ ಹಾಡು ಹಾಡಿದ್ದನ್ನು ಸಂಗಮ್ ಕೈನಲ್ಲಿ ನಂಬುವುದಕ್ಕೆ ಆಗಲಿಲ್ಲ. ಮಗಳ ಬಳಿಯೇ ಹಾಡಿಸಿದಾಗ ಸತ್ಯಾಂಶ ಹೊರ ಬಿದ್ದಿದೆ. ಇದಕ್ಕೆ ಸಂಗಮ್ ಕಣ್ಣೀರು ಹಾಕಿಕೊಂಡು ಕೂತಿದ್ದಾನೆ.

ಬೇಜಾರಾದಾಗ ಸಂಗಮ್ ಮಾಡುವುದೇನು..?
ಸಂಗಮ್‌ಗೆ ಬೇಸರ ಆದಾಗೆಲ್ಲಾ ಕುಡಿತಕ್ಕೆ ದಾಸನಾಗಿ ಬಿಡುತ್ತಾನೆ. ಒಬ್ಬನೇ ಕೂತು ಕುಡಿಯುತ್ತಾನೆ. ಈ ಹಿಂದೆ ಹೀಗೆ ಬೇಸರ ಆದಾಗಲೂ ಲಚ್ಚಿಯೇ ಬಂದು ಕುಡಿಬೇಡಿ ಸಂಗಮಪ್ಪ ಎಂದಿದ್ದಳು. ಈಗ ಮಗಳ ಫೋಟೋವನ್ನು ಮುಂದೆ ಇಟ್ಟುಕೊಂಡು ಕುಡಿಯುತ್ತಾ ಕೂತಿದ್ದಾನೆ. ಮನೆಯವರೇ ನನಗೆ ಮೋಸ ಮಾಡಿಬಿಟ್ಟರು ಎಂದು ಕಣ್ಣೀರು ಹಾಕುತ್ತಿದ್ದಾನೆ. ಲಚ್ಚಿಗೆ ಇದನ್ನೆಲ್ಲಾ ನೋಡಿ ಸಂಕಟವಾಗಿದೆ. ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಮತ್ತೆ ಅದೇ ಬುದ್ದಿ ಮಾತು ಹೇಳಿದ್ದಾಳೆ. ಕುಡಿಬೇಡಿ ಸಂಗಮಪ್ಪ ಎಂದಿದ್ದಾಳೆ.
ಲಚ್ಚಿಯ ತೊಡೆ ಮೇಲೆ ಮಲಗಿದ ಸಂಗಮ್
ಸಂಗಮ್ ತುಂಬಾ ನೋವಲ್ಲಿದ್ದಾನೆ. ಲಚ್ಚಿ ಆದಷ್ಟು ಹೇಳುವುದಕ್ಕೆ ನೋಡಿದಳು. ಕುಡಿದರೆ ಆರೋಗ್ಯ ಹಾಳಾಗುತ್ತೆ ಎಂದಾಗಲೂ ಲಚ್ಚಿಗೆ ಬುದ್ದಿ ಹೇಳಿ. ನಿಂಗೆ ಇದೆಲ್ಲಾ ಗೊತ್ತಾಗಲ್ಲ ಸುಮ್ಮನೆ ಇರು ಲಚ್ಚಿ ಅಂತ ಮತ್ತೆ ಮನೆಯವರು ಮಾಡಿದ ಮೋಸವನ್ನೇ ನೆನೆದು ಕಣ್ಣೀರು ಹಾಕಿದ. ಸಂಗಮ್‌ಗೆ ದೀಪಿಕಾಳ ಮೇಲೆ ಹೆಚ್ಚು ಕೋಪ ಬಂದಿದೆ. ಅದಕ್ಕೆ ಅವಳನ್ನು ಮನೆಯಿಂದ ಹೊರಗೆ ದಬ್ಬಿದ್ದ. ಮೋಸದ ದಾರಿಯಲ್ಲಿ ಮಗಳನ್ನು ಸಿಂಗರ್ ಮಾಡುವುದಕ್ಕೆ ಹೊರಟಿರುವುದು ಸಂಗಮ್‌ಗೆ ಸ್ವಲ್ಪವೂ ಇಷ್ಟವಾಗಿಲ್ಲ. ಹೀಗಾಗಿಯೇ ಸಂಗಮ್ ಕುಡಿಯುತ್ತಾ ಕುಡಿಯುತ್ತಾ ಹಾಗೇ ಲಚ್ಚಿಯ ತೊಡೆ ಮೇಲೆ ಮಲಗಿದ್ದಾನೆ.
ಸಂಗಮಪ್ಪನಿಗೆ ಸತ್ಯ ಹೇಳ್ತಾಳಾ ಲಚ್ಚಿ..?
ಸಂಗಮಪ್ಪ ಎಂದರೆ ಪ್ರಾಣವನ್ನೇ ಬಿಡುವ ಲಚ್ಚಿಗೆ ತೊಡೆಯ ಮೇಲೆ ಮಲಗಿದರೆ ಇನ್ನೆಷ್ಟು ಖುಷಿಯಾಗಬೇಡ. ಮನೆಯವರೇ ಮೋಸ ಮಾಡಿಬಿಟ್ಟರು ಅಂತ ಸಂಗಮ್ ಕಣ್ಣೀರು ಹಾಕುವಾಗ, ಲಚ್ಚಿಗೆ ಅದೊಂದು ಬೇಸರ ಕಾಡುತ್ತಿತ್ತು. ನನ್ನಿಂದಾನೆ ನೀವೂ ನೋವು ಪಡ್ತಾ ಇರೋದು. ನಾನು ಹಾಡದೆ ಹೋಗಿದ್ದರೆ ನೀವೂ ದುಃಖವನ್ನೇ ಪಡುತ್ತಾ ಇರಲಿಲ್ಲ. ನಾನೇ ಹಾಡಿದ್ದು ಅಂತ ಗೊತ್ತಾದರೇ ಇನ್ನು ನೋವು ಮಾಡಿಕೊಳ್ತೀರಾ. ಸತ್ಯ ಹೇಳಿ ಬಿಡ್ಲಾ ಅಂತ ಯೋಚನೆ ಮಾಡುತ್ತಿದ್ದಾಳೆ. ಸತ್ಯ ಹೇಳಿದರೆ ಸಂಗಮ್ ಖಂಡಿತ ಲಚ್ಚಿಗೆ ನ್ಯಾಯ ಕೊಡಿಸ್ತಾನಾ?


Click it and Unblock the Notifications











