Namma Lacchi: ದೀಪಿಕಾ ಪಿತೂರಿ ಬಯಲಾಗುತ್ತಾ? ಈಗಾಗಲಾದರೂ ಲಚ್ಚಿ ಧ್ವನಿಗೆ ಬೆಲೆ ಸಿಗುತ್ತಾ?

By ಎಸ್ ಸುಮಂತ್

ಲಚ್ಚಿಯನ್ನು ದೀಪಿಕಾ ಮನೆಯಲ್ಲಿ ಇಟ್ಟುಕೊಂಡಿರುವುದೇ ತನ್ನ ಮಗಳು ರಿಯಾಳಿಗೋಸ್ಕರ. ರಿಯಾಳನ್ನು ದೊಡ್ಡ ಸಿಂಗರ್ ಮಾಡು ಅಂದ್ರೆ, ಅದಕ್ಕೆ ಸಂಗಮ್ ಒಪ್ಪಿಗೆ ಇಲ್ಲ. ಮೊದಲು ಸಂಗೀತ ಕಲಿಯಲಿ ಅಂತಿದ್ದಾನೆ. ಇದನ್ನೆಲ್ಲಾ ನೋಡುತ್ತಾ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ ಅಂತ ದೊಡ್ಡ ಪ್ಲ್ಯಾನ್ ಮಾಡಿ, ರಿಯಾಳನ್ನು ಸಿಂಗರ್ ಮಾಡುವುದಕ್ಕೆ ಲಚ್ಚಿಯನ್ನು ಬಳಸಿಕೊಳ್ಳುತ್ತಿದ್ದಾಳೆ.

ಈಗಾಗಲೇ ಒಂದು ಮ್ಯೂಸಿಕ್ ಕಂಪನಿ ಜೊತೆಗೆ ರಿಯಾಳನ್ನು ಸ್ಟಾರ್ ಸಿಂಗರ್ ಮಾಡ್ತೀನಿ ಅಂತ ಕಮಿಟ್ ಆಗುತ್ತಿರುವ ದೀಪಿಕಾಳ ನಡೆಗೆ ಮನೆಯಲ್ಲಿ ಎಲ್ಲರೂ ಕೋಪಗೊಂಡಿದ್ದಾರೆ. ಆದರೆ ರಿಯಾಳಿಗೆ ಕೊಡುತ್ತಿರುವ ಹಿಂದಿನ ವಾಯ್ಸ್ ಯಾರದ್ದು ಎಂಬುದನ್ನು ಹೇಳುತ್ತಿಲ್ಲ. ತಂದೆಯನ್ನು ಕರೆಸಿ ಬುದ್ದಿ ಹೇಳಿದರೂ ದೀಪಿಕಾ ಸತ್ಯ ಒಪ್ಪಿಕೊಳ್ಳುತ್ತಿಲ್ಲ. ಆದರೆ ಈಗ ದೀಪಿಕಾ ತಾನಾಗಿಯೇ ಸಿಕ್ಕಿಬೀಳುವ ಸಮಯ ಬಂದೇ ಬಿಟ್ಟಿದೆ.

Namma Lacchi Written Update on May 26th episode

ಮನೆಯಿಂದ ಹೊರಡುವಾಗ ಸುಳ್ಳು

ಈಗ ಒಂದು ದೊಡ್ಡ ಮ್ಯೂಸಿಕ್ ಕಂಪನಿಗೆ ಬೇರೆ ರಿಯಾಳನ್ನು ಹಾಡಿಸುವುದಾಗಿ ದೀಪಿಕಾ ಕಮಿಟ್ ಆಗಿದ್ದಾಳೆ. ಆದರೆ ಮನೆಯಲ್ಲಿ ಅದು ಸಾಧ್ಯವಿಲ್ಲ. ಈಗ ಹಾಡನ್ನು ಲಚ್ಚಿಯಿಂದ ಹಾಡಿಸಿ, ಅದಕ್ಕೆ ರಿಯಾ ಲಿಪ್ ಸಿಂಕ್ ಮಾಡಬೇಕು. ಅದು ಮನೆಯಲ್ಲಿ ಸಾಧ್ಯವಿಲ್ಲ. ಒಂದು ರೆಕಾರ್ಡಿಂಗ್ ಸ್ಟುಡಿಯೋವನ್ನು ಬುಕ್ ಮಾಡಿಕೊಳ್ಳಲಾಗಿದೆ. ಆದರೆ, ಮನೆಯಿಂದ ಹೊರ ನಡೆಯುವಾಗ, ಸಂಗಮ್ ಎದುರಾಗಿದ್ದಾನೆ. ಸಹಜವಾಗಿಯೇ ಸಂಗಮ್ ಪ್ರಶ್ನೆ ಮಾಡಿದ್ದಾನೆ. ಆದರೆ ದೀಪಿಕಾಳ ಬಳಿ ಅದಕ್ಕೆ ಉತ್ತರವಿರಲಿಲ್ಲ. ಪ್ರಶ್ನೆಗಳು ಹೆಚ್ಚಾದ ಮೇಲೆ, ಆಸ್ಪತ್ರೆಗೆ ಎಂದು ಸುಳ್ಳು ಹೇಳಿ ಹೋಗಿದ್ದಾಳೆ.

ರಿಯಾಗಾಗಿ ಹಾಡಿದ ಲಚ್ಚಿ

ಲಚ್ಚಿ ಹೊಸ ಹಾಡೊಂದನ್ನು ಹಾಡಬೇಕಾಗಿದೆ. ಹೀಗಾಗಿ ಮನೆಯಲ್ಲಿ ಸುಳ್ಳು ಹೇಳಿ ರಿಯಾ ಮತ್ತು ಲಚ್ಚಿ ಇಬ್ಬರನ್ನು ಕರೆದುಕೊಂಡು ಸ್ಟುಡಿಯೋಗೆ ಬಂದಿದ್ದಾಳೆ. ಲಚ್ಚಿ ಹಾಡು ಹಾಡುವುದಕ್ಕೆ ಸ್ಟುಡಿಯೋಗೆ ಹೋಗಿದ್ದಾಳೆ. ಆ ಹಾಡು ಹೇಗೆ ಹಾಡುತ್ತಿದ್ದಾಳೆ ಎಂಬುದನ್ನು ನೋಡುವಷ್ಟು ಶ್ರದ್ಧೆಯೂ ಅವಳಲ್ಲಿ ಇಲ್ಲ. ದೀಪಿಕಾ ಮೊಬೈಲ್ ನೋಡುತ್ತಾ ಕುಳಿತರೆ, ರಿಯಾ ಕೂಡ ಅದನ್ನೇ ಮಾಡುತ್ತಿದ್ದಾಳೆ. ಲಚ್ಚಿ ಮಾತ್ರ ರಿಯಾಳಿಗೋಸ್ಕರ ಅದ್ಭುತ ಕಂಠದಲ್ಲಿ ಹಾಡು ಶುರು ಮಾಡಿದ್ದಾಳೆ.

Namma Lacchi Written Update on May 26th episode

ದೀಪಿಕಾ ಬಳಿ ಲಚ್ಚಿ ಬಗ್ಗೆ ಉತ್ತರವಿಲ್ಲ

ಸಂಗಮ್ ಮೊದಲೇ ಫೇಮಸ್ ಹಾಡುಗಾರ. ಎಲ್ಲಾ ರೆಕಾರ್ಡಿಂಗ್ ಸ್ಟುಡಿಯೋಗಳು ಕೂಡ ಸಾಮಾನ್ಯವಾಗಿ ಪರಿಚಯ ಇದ್ದೆ ಇರುತ್ತೆ. ಈಗ ಲಚ್ಚಿಯನ್ನು ಕರೆದುಕೊಂಡು ಬಂದು ಹಾಡಿಸುತ್ತಿರುವ ಸ್ಟುಡಿಯೋ ಕೂಡ ಸಂಗಮ್‌ಗೆ ಪರಿಚಯವಿರುವಂತದ್ದೆ. ಆದರೆ, ಅದು ದೀಪಿಕಾ ಮರೆತು ಬಿಟ್ಟಳಾ? ಗೊತ್ತಿಲ್ಲ. ಲಚ್ಚಿ ಕೈನಲ್ಲಿ ಹಾಡು ಹಾಡಿಸಿದ್ದಾಳೆ. ಲಚ್ಚಿಯ ವಾಯ್ಸ್‌ಗೆ ಮನಸೋತ ರೆಕಾರ್ಡ್ ಮಾಡುವವರು ಅದನ್ನು ರೆಕಾರ್ಡ್ ಮಾಡಿಟ್ಟುಕೊಂಡಿದ್ದಾರೆ. ಅದನ್ನು ಕೂಡ ದೀಪಿಕಾ ಗಮನಿಸಲೇ ಇಲ್ಲ.

ಸ್ಟುಡಿಯೋ ವ್ಯಕ್ತಿಗೆ ಕರೆ ಮಾಡಿದ ಸಂಗಮ್

ಎಲ್ಲಾ ಮುಗಿದ ಮೇಲೆ ದೀಪಿಕಾಳನ್ನು ಆ ವ್ಯಕ್ತಿ ಕೇಳಿದ್ದಾರೆ. ಸಂಗಮ್ ಸರ್ ಮಗಳಿಂದ ಹಾಡು ಹಾಡಿಸುತ್ತೀನಿ ಎಂದಿದ್ರಿ. ಈಗ ಯಾರೋ ಬೇರೆಯವರಿಂದ ಹಾಡಿಸಿದ್ದೀರಲ್ಲ ಎಂದಿದ್ದಕ್ಕೆ ದೀಪಿಕಾ ಗಾಬರಿಯಾಗಿದ್ದಾಳೆ. ಉತ್ತರ ಕೊಡಲು ಆಗದೆ ತಟಸ್ಥವಾಗಿ ನಿಂತಿದ್ದಾಳೆ. ಸಂಗಮ್ ಬಗ್ಗೆ ಮಾತನಾಡುವಾಗಲೇ ಸಂಗಮ್ ಕರೆಯೂ ಬಂದಿದೆ. ರೆಕಾರ್ಡ್ ಮಾಡಿದಾತ, ನೋಡಿ ನೆನೆಸಿಕೊಂಡ ಕೂಡಲೇ ಸಂಗಮ್ ಸರ್ ಕಾಲ್ ಮಾಡ್ತಿದ್ದಾರೆ ಎಂದಾಗ ದೀಪಿಕಾಳಿಗೆ ಆತಂಕ ಶುರುವಾಗಿದೆ. ಯಾಕಂದ್ರೆ ಮುಚ್ಚಿಟ್ಟ ಸತ್ಯವನ್ನು ಯಾರ ಬಳಿಯೂ ಹೇಳಲು ಸಾಧ್ಯವಿಲ್ಲದ ಕಥೆಯದು.

More from Filmibeat

English summary
Star suvarna serial Namma Lacchi Written Update on May 26th episode. Here is the details about Deepika shock.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X