Namma Lacchi: ಮಗಳ ವಿಚಾರ ತಿಳಿಯಲು ಜಾಜಿಯೇ ಗಿರಿಜಾ ಆಗ್ತಾಳಾ..?

By ಎಸ್ ಸುಮಂತ್

ಗಿರಿಜಾಳಿಗೆ ಮಗುವೊಂದು ಇದ್ದದ್ದು ಸಂಗಮ್‌ಗೆ ತಿಳಿದಿರಲಿಲ್ಲ. ಗಿರಿಜಾಳ ಸಾವಾಗಿರುವುದೇ ಇತ್ತಿಚೆಗಷ್ಟೇ ತಿಳಿದಿದೆ. ಗಿರಿಜಾ ಹಾಗೂ ಸಂಗಮ್ ದೂರ ಆಗುವುದಕ್ಕೆ ಸಾಗರ್ ಕಾರಣ. ತಮ್ಮನ ಮ್ಯೂಸಿಕ್ ಭವಿಷ್ಯಕ್ಕಾಗಿ ಅವರಿಬ್ಬರ ಪ್ರೀತಿಯನ್ನು ದೂರ ಮಾಡಿದ್ದ. ಸಂಗಮ್ ಜೀವನದಿಂದ ದೂರ ಹೋಗುವಂತೆ ಸೂಚಿಸಿದ್ದ.

ಗಿರಿಜಾ ಯಾವುದೇ ರೀತಿಯ ಸ್ವಾರ್ಥ ಇಲ್ಲದೇ ಇದ್ದ ಕಾರಣ ಸಂಗಮ್‌ನಿಂದ ದೂರಾಗಿದ್ದಳು. ಇತ್ತ ಸಂಗಮ್, ಗಿರಿಜಾಳನ್ನು ಮರೆತು ಮತ್ತೊಂದು ಮದುವೆಯಾಗಿದ್ದ. ಆದರೆ ಮನಸ್ಸಿನಲ್ಲಿ ಮಾತ್ರ ಗಿರಿಜಾಳ ನೆನಪು ಅಚ್ಚಾಗಿ ಉಳಿದಿತ್ತು. ಈಗ ಜಾಜಿಯನ್ನೇ ಗಿರಿಜಾಳೆಂದು ಮನೆಯವರ ಮುಂದೆ ಹೇಳಲು ಹೊರಟಿದ್ದಾನೆ. ಅದರ ಹಿಂದಿನ ಉದ್ದೇಶ, ಮನೆಯವರ ನಡವಳಿಕೆ ಅರಿಯುವುದೇ ಆಗಿದೆ.

Namma lachi kannad serial Written Update on February 13th episode

ಕೋಪದಲ್ಲಿದ್ದ ಸಂಗಮ್

ಸಂಗಮ್ ಹಾಗೂ ಗಿರಿಜಾಳಿಗೆ ಮಗುವೊಂದು ಇದೆ. ಆ ಮಗುವಿನ ವಿಚಾರವನ್ನು ಮನೆಯವರು ಮುಚ್ಚಿಟ್ಟಿದ್ದಾರೆ ಎಂಬುದನ್ನು ತಿಳಿಯುತ್ತಿದ್ದಂತೆ ಸಂಗಮ್ ಕೆಂಡಾಮಂಡಲನಾಗಿದ್ದಾನೆ. ಮನೆಯವರ ಈ ರೀತಿಯ ಅನ್ಯಾಯ ಮಾಡಿದ್ದು ಯಾಕೆ, ಕೇಳ್ತೀನಿ ಅಂತ ಕೋಪ ಮಾಡಿಕೊಂಡು, ಮನೆಯವರಿಗೆಲ್ಲಾ ಕ್ಲಾಸ್ ತೆಗೆದುಕೊಳ್ಳಲು ಸಿದ್ಧನಾಗಿದ್ದಾನೆ. ಆದರೆ ಈ ರೀತಿ ಕೋಪದ ಕೈಗೆ ಬುದ್ದಿ ಕೊಟ್ಟರೆ ಅಂದುಕೊಂಡಿದ್ದು ಯಾವುದು ಸಕ್ಸಸ್ ಆಗಲ್ಲ ಎಂಬುದು ಸಂಗಮ್‌ಗೆ ತಿಳಿದಿಲ್ಲ. ಕೋಪದಲ್ಲು ಏನೇನೋ ನಿರ್ಧಾರ ತೆಗೆದುಕೊಂಡು ಕುಣಿಯುತ್ತಿದ್ದ.

ತಾಳ್ಮೆಯಿಂದ ಇರಲು ಸೂಚಿಸಿದ ಜಾಜಿ

ಸಂಗಮ್ ಅತಿಯಾಗಿ ಕೋಪ ಮಾಡಿಕೊಂಡು ಏನೋ ಒಂದು ಯಡವಟ್ಟು ಮಾಡುತ್ತಾನೆ ಎಂಬುದು ಜಾಜಿಗೆ ಗೊತ್ತಾಗಿತ್ತು. ಕೈಹಿಡಿದು ಸಮಾಧಾನ ಮಾಡಲು ಪ್ರಯತ್ನ ಪಟ್ಟಳು. ಆದರೆ ಸಂಗಮ್ ಕೈ ಬಿಟ್ಟು, 'ಸರಿ ಹೋಗಿ ನಂಗೆ ಎಲ್ಲಾ ವಿಚಾರ ತಿಳಿಯಿತು ಅಂತ ಹೇಳಿ. ಮಗಳಿರುವ ವಿಚಾರದ ಬಗ್ಗೆಯೂ ಹೇಳಿ. ಆಮೇಲೆ ಯಾರೂ ಹೇಳಿದ್ದು ಅಂತ ಕೇಳ್ತಾರೆ, ಜಾಜಿ ಹೇಳಿದಳು ಎಂದರೆ, ಗೊತ್ತಾಗಬೇಕಾದ ಸತ್ಯವೂ ಗೊತ್ತಾಗುವುದಿಲ್ಲ. ಆಗ ನಾವೂ ಮಾಡಿದ ನಾಟಕವೆಲ್ಲಾ ಬಟಾಬಯಲಾಗುತ್ತದೆ' ಎಂದಿದ್ದಾಳೆ. ಜಾಜಿಯ ಮಾತನ್ನು ಸಂಗಮ್ ನಿಧಾನವಾಗಿ ಆಲಿಸಿದ್ದಾನೆ.

ಮಗಳನ್ನು ಹುಡುಕಲು ಹೊಸ ಪ್ಲ್ಯಾನ್

ಜಾಜಿ ಹೇಳಿದ್ದೇನೋ ಸರಿ ಎನಿಸಿದೆ. ಆದರೆ ಈಗ ಮಗಳನ್ನು ಹುಡುಕುವುದು ಹೇಗೆ ಎಂಬ ಪ್ರಶ್ನೆ ಇದೆ. ಅದಕ್ಕೆ ಜಾಜಿಯೇ ಮತ್ತೆ ಪ್ಲ್ಯಾನ್ ರೆಡಿ ಮಾಡಿ ಕೊಟ್ಟಿದ್ದಾಳೆ. ಅವರ ಬಳಿಯೇ ಉತ್ತರ ಹುಡುಕಬೇಕು. ಮತ್ತಷ್ಟು ನಾಟಕ ಮಾಡಿ, ಮನೆಯವರು ಇನ್ನು ಏನೆಲ್ಲಾ ವಿಚಾರಗಳನ್ನು ಮುಚ್ಚಿಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣಾ ಎಂದಿದ್ದಾಳೆ. ಮನೆಯವರ ಬಳಿ ನಾವೂ ನಾಟಕವಾಡುತ್ತಿರುವುದು ಗೊತ್ತಾದರೆ ಯಾವ ಸತ್ಯವೂ ಹೊರಗೆ ಬರುವುದಿಲ್ಲ ಎಂದಿದ್ದಾಳೆ. ಜಾಜಿ ಹೇಳಿದ ಮಾತು ಸಂಗಮ್ ಗೆ ಕೂಡ ಸರಿ ಎನಿಸಿದೆ. ಆದರೆ ಸಂಗಮ್ ಬೇರೆಯದ್ದೇ ನಿರ್ಧಾರ ತೆಗೆದುಕೊಂಡಿದ್ದಾನೆ.

Namma lachi kannad serial Written Update on February 13th episode

ಜಾಜಿಯನ್ನೇ ಗಿರಿಜಾ ಎನ್ನುತ್ತಿರುವ ಸಂಗಮ್

ಹೊಸದಾಗಿ ಏನಾದರೂ ಐಡಿಯಾ ಹುಡುಕೋಣ ಎಂದೇ ಜಾಜಿ ಹೇಳಿದ್ದಾಳೆ. ಅಷ್ಟರಲ್ಲಾಗಲೇ ಸಂಗಮ್ ಗಟ್ಟಿ ನಿರ್ಧಾರವನ್ನೇ ಮಾಡಿದ್ದ. ಮನೆಯವರೆಲ್ಲರ ಮುಂದೆ ಹೋಗಿ ನೀನೆ ಗಿರಿಜಾ ಅಂತ ಹೇಳಿ ಬಿಡುತ್ತೀನಿ ಎಂದಿದ್ದಾನೆ. ಇದು ಗಿರಿಜಾಳಿಗೆ ಗಾಬರಿ ಹುಟ್ಟಿಸಿದೆ. ಸಂಗಮ್ ಐಡಿಯಾ, ಈ ಸತ್ಯ ಗೊತ್ತಾದರೆ ಮುಚ್ಚಿಟ್ಟ ಸತ್ಯಗಳು ಹೊರಗೆ ಬರಬಹುದು ಎಂದು. ಅದರಲ್ಲೂ ಲಚ್ಚಿ ಬೇರೆ ದೇವರ ಬಳಿ, ಇವಳೇ ನಮ್ಮವ್ವ ಆಗಿರಬಾರದಾ ಎಂದು ಬೇಡಿಕೊಳ್ಳುತ್ತಿದ್ದಳು. ಹೀಗಿರುವಾಗ ಸಂಗಮ್ ಏನಾದರೂ ಇವಳೇ ಗಿರಿಜಾ ಎಂದರೆ ಲಚ್ಚಿ ಬೇಗ ಸಿಗಲು ಬಹುದು.

More from Filmibeat

English summary
Namma Lachi serila today episode; Here is the details about Will Sangam tell the truth about Girija in front of the family;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X