ಕನ್ನಡದ ನಟ ರಘು ತೆಲುಗು ಕಿರುತೆರೆಯಲ್ಲಿ ಮಿಂಚಿದ್ದು ಹೇಗೆ ಗೊತ್ತಾ?

By ಪೂರ್ವ

'ನಮ್ಮನೆ ಯುವರಾಣಿ' ಧಾರಾವಾಹಿಯ ಮೂಲಕ ಅಣ್ಣನಾಗಿ ಸದ್ದು ಮಾಡಿದ ಸಾಕೇತ್ ಬೇರೆ ಯಾರು ಅಲ್ಲ ಅವರೇ ರಘು. ಕಿರುತೆರೆ ನಟ ರಘುಗೆ ಈ ಧಾರಾವಾಹಿ ದೊಡ್ಡ ಹೆಸರನ್ನೇ ತಂದು ಕೊಟ್ಟಿತ್ತು. ಅಂದ್ಹಾಗೆ, ನಟನಾಗುವುದಕ್ಕೂ ಮುನ್ನ ರಘು ತಮ್ಮ ವೃತ್ತಿಜೀವನವನ್ನು ಸಹಾಯಕ ನಿರ್ದೇಶಕರಾಗಿ ಪ್ರಾರಂಭಿಸಿದರು.

ಕ್ರಮೇಣ ಕನ್ನಡದ ಜನಪ್ರಿಯ ನಟರ ಪೈಕಿ ಇವರು ಒಬ್ಬರಾಗಿದ್ದಾರೆ. 'ಮಿಸ್ಟರ್ ಅಂಡ್ ಮಿಸೆಸ್ ರಂಗೇಗೌಡ' ಧಾರಾವಾಹಿಯಲ್ಲಿ ಕೂಡ ಮಿಂಚಿದ್ದ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆ ಬಳಿಕ 'ನಮ್ಮನೆ ಯುವರಾಣಿ'ಯಲ್ಲಿ ಸಾಕೇತ್ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ.

Nammane Yuvarani fame Kannada serial actor Raghu acting journey

ಸಾಕೇತ್ ಪಾತ್ರದಲ್ಲಿ ಮಿಂಚಿದ ರಘು

ಸಾಕೇತ್ ಪಾತ್ರಕ್ಕೆ ಯಾವ ರೀತಿ ನ್ಯಾಯ ಒದಗಿಸಿ ಕೊಡಬೇಕೋ ಆ ಕೆಲಸವನ್ನು ಮಾಡಿದ್ದಾರೆ. ಈ ಧಾರಾವಾಹಿ ನೋಡಿದ ಜನರಿಗೆ ಸಾಕೇತ್ ಪಾತ್ರಧಾರಿ ಬಹಳ ಇಷ್ಟ ಆಗಿತ್ತು. ಇಲ್ಲಿ ತಪ್ಪನ್ನು ತಿದ್ದುವ ಅಣ್ಣನಾಗಿ ನಟಿಸಿದ್ದರು. ಆ ಪಾತ್ರವನ್ನು ಜನ ಬಹಳ ಮೆಚ್ಚಿಕೊಂಡು ಇದ್ದರು. ಆ ಬಳಿಕ ತೆಲುಗು ಧಾರಾವಾಹಿಯತ್ತ ಮುಖ ಮಾಡಿದ್ದರು.

ತೆಲುಗು ಧಾರಾವಾಹಿಯಲ್ಲಿ ಸಂಚಲನ

ಕನ್ನಡದ ಧಾರಾವಾಹಿಯಲ್ಲಿ ನಟಿಸಿದ ಬಳಿಕ ರಘು ತೆಲುಗು ಕಿರುತೆರೆಗೆ ಹಾರಿದ್ದರು. ಆ ಧಾರಾವಾಹಿ ಬೇರೆ ಯಾವುದೂ ಅಲ್ಲ 'ಚಿರಂಜೀವಿ ಲಕ್ಷ್ಮೀ ಸೌಭಾಗ್ಯವತಿ'. ಈ ಧಾರಾವಾಹಿಯಲ್ಲಿ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಕಿರುತೆರೆ ವೀಕ್ಷಕರಿಗೆ ಸಿಹಿ ಸುದ್ದಿ ಏನೆಂದರೆ, ಈ ಧಾರಾವಾಹಿ ಇದೀಗ ಕನ್ನಡದಲ್ಲೂ ಡಬ್ ಆಗಿ ಪ್ರಸಾರ ಆಗುತ್ತಿದೆ. ಧಾರಾವಾಹಿ ನೋಡಿದ ವೀಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ರಘುಗೆ ನಟಿ ಗೌತಮಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಘು ಕನ್ನಡ ಕಿರುತೆರೆಯ ಜನಪ್ರಿಯ ನಟರಲ್ಲಿ ಒಬ್ಬರು. ಕನ್ನಡದಲ್ಲಿ 'ಮಿಸ್ಟರ್ ಅಂಡ್ ಮಿಸೆಸ್ ರಂಗೇಗೌಡ', 'ರಾಧಾ ಕಲ್ಯಾಣ' ಧಾರಾವಾಹಿ ಪರಿಚಿತರಾಗಿದ್ದಾರೆ.

ವಿಲನ್ ಆಗಿದ್ದವ ಇದೀಗ ಹೀರೊ

ರಘು ಕಿರುತೆರೆಗೆ ಎಂಟ್ರಿ ಕೊಟ್ಟು ಎಲ್ಲರ ಮೆಚ್ಚುಗೆ ಗಳಿಸಿದ್ದೇನೋ ಸರಿ. 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ರಘು ವಿಲನ್ ಪಾತ್ರದಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲೇ ನಟ ಚಂದನ್ ಕುಮಾರ್ ಮತ್ತು ಕೃತಿಕಾ ರವೀಂದ್ರ ಪ್ರಮುಖ ಪಾತ್ರಗಳನ್ನು ನಟಿಸಿದ್ದರು. ಬಳಿಕ ರಘುಗೆ ಅದೃಷ್ಟ ಲಕ್ಷ್ಮೀ ಒಳಿದು ಬಂದಿತ್ತು.

Nammane Yuvarani fame Kannada serial actor Raghu acting journey

ಇನ್ನೊಂದು ವಿಶೇಷ ಅಂದರೆ, ಇವರ ಹೆಂಡತಿ ಕೂಡ ಕಿರುತೆರೆಯ ಫೇಮಸ್ ನಟಿ. ಅವರೇ ಅಮೃತಾ ರಾಮಮೂರ್ತಿ. ಮಿಸ್ಟರ್ ಅಂಡ್ ಮಿಸೆಸ್ ರಂಗೇಗೌಡ ' ಧಾರಾವಾಹಿಯಲ್ಲಿ ಅಮೃತ ರಾಮಮೂರ್ತಿ ಇವರಿಗೆ ಜೋಡಿಯಾಗಿದ್ದರು. ಅವರು ಈಗ ನಿಜ ಜೀವನದಲ್ಲೂ ಜೊತೆಯಾಗಿದ್ದಾರೆ. ಈ ಜೋಡಿಗೆ ಈಗ ಮುದ್ದಾದ ಹೆಣ್ಣು ಮಗಳು ಇದ್ದಾಳೆ.

ತೆಲುಗು ಜನರ ಮನ ಗೆದ್ದ ರಘು

'ಚಿರಂಜೀವಿ ಲಕ್ಷ್ಮೀ ಸೌಭಾಗ್ಯವತಿ' ತೆಲುಗು ಮನರಂಜನಾ ಲೋಕದಲ್ಲಿ ರಘು ಅವರ ಚೊಚ್ಚಲ ಚಿತ್ರವಾಗಿದೆ. ಈ ಧಾರಾವಾಹಿ ಇದೀಗ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿ ನೋಡಲು ಜನರು ಕಾತರದಿಂದ ಕಾಯುತ್ತಾ ಇರುತ್ತಾರೆ.

.

More from Filmibeat

English summary
Nammane Yuvarani fame Kannada serial actor Raghu acting journey, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X