Mahanati: 'ನಮ್ಮೂರ ಮಂದಾರ ಹೂವೇ': ಆ ದೃಶ್ಯಕ್ಕೆ ಪ್ರೇಮಾ ಕಣ್ಣೀರು

By ಎಸ್ ಸುಮಂತ್

ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಮಹಾನಟಿಯರಿಗೇನು ಕಡಿಮೆ ಇಲ್ಲ. ದಶಕಗಳ ಕಾಲ ಜನರನ್ನು ರಂಜಿಸಿದ್ದಾರೆ. ಈಗಲೂ ಆ ನಟಿಯರನ್ನ ಜನ ಮಿಸ್ ಮಾಡಿಕೊಳ್ಳುತ್ತಾರೆ. ನಟನೆ ಎಂದರೆ ಆ ನಟಿಯರದ್ದು ಎನ್ನುತ್ತಾರೆ.

ಒಂದೊಂದು ದೃಶ್ಯಗಳಿಗೂ ಅವರಿಂದ ಸಿಗುತ್ತಿದ್ದ ನ್ಯಾಯ ಅಷ್ಟಿಷ್ಟಲ್ಲ. ಅದರಲ್ಲೂ ನೋವಿನ ಕಥೆ ಹೇಳಲು ಹೊರಟರೆ ಎಂಥ ಕಲ್ಲು ಹೃದಯದವರೇ ಆದರೂ ಅವರನ್ನು ಕರಗಿಸಿ ಬಿಡುವಂತ ನಟನೆ ಅವರದ್ದಾಗಿತ್ತು. ಅಂಥ ನಟಿಯರನ್ನು ಮಹಾನಟಿ ವೇದಿಕೆ ಮೂಲಕ ನೆನೆಯಲಾಗುತ್ತಿದೆ.

Nammoora Mandara Hoove movie scenes recreated at Mahanati show

ಮಹಾನಟಿಯರ ಸಾಲಿನಲ್ಲಿ ನಿಲ್ಲುವ ಪ್ರೇಮಾ ಕೂಡ ಜಡ್ಜ್ ಸ್ಥಾನದಲ್ಲಿ ಕೂತಿದ್ದಾರೆ. ಅವರ ಪಾತ್ರವನ್ನು ವೇದಿಕೆ ಮೇಲೆ ರೀ-ಕ್ರಿಯೇಟ್ ಮಾಡಲಾಗಿದೆ. 'ನಮ್ಮೂರ ಮಂದಾರ ಹೂವೆ ಸಿನಿಮಾ' ಈಗಲೂ ಎಲ್ಲರ ಇಷ್ಟದ ಸಿನಿಮಾ. ಆ ಸಿನಿಮಾಗೆ ಸೀಮಿತ ಅವಧಿ ಅಂತ ಏನಿಲ್ಲ. ಆ ಸಿನಿಮಾದ ಒಂದು ದೃಶ್ಯ ಕಂಡು ಪ್ರೇಮಾ ಕಣ್ಣೀರಾಗಿದ್ದಾರೆ.

ಮಹಾನಟಿಯರ ಅಭಿನಯ ಮಾಡಿದ ಸ್ಪರ್ಧಿಗಳು

ಮಹಾನಟಿಯರ ಅಭಿನಯವನ್ನು ವೇದಿಕೆ ಮೇಲೆ ಹೊಸ ನಟಿಯರು ಅನುಕತಣೆ ಮಾಡಿದ್ದಾರೆ. ಪ್ರೇಮಾ ಅವರನ್ನು ಸೋನಿ ಮುಲೇವ, ಕಲ್ಪನಾ-ಚಂದನಾ ಗೌಡ, ಉಮಾಶ್ರೀ-ಆರಾಧನಾ ಭಟ್, ಸೌಂದರ್ಯ - ಪ್ರಿಯಾಂಕ, ಸರಿತಾ - ಆಶಿಕಾ ಶರ್ಮಾ, ಲಕ್ಷ್ಮೀ-ಧನ್ಯಶ್ರೀ, ಸುಧಾರಾಣಿ - ಆಶಿಕಾ ಸೋಮಶೇಖರ್, ಜಯಂತಿ ಪಾತ್ರದಲ್ಲಿ ದೇವಸೇನಾ ಕಾಣಿಸಿಕೊಳ್ಳುವ ಮೂಲಕ ಹಿರಿಯ ನಟಿಯರನ್ನು ನೆನಪಿಸಿದ್ದಾರೆ.

ಸೋನಾಲಿಯಿಂದ ಪ್ರೇಮಾ ಅನುಕರಣೆ

ಸೋನಾಲಿ, ಪ್ರೇಮಾ ಅವರ ಸಿನಿಮಾದ ಒಂದು ಡೈಲಾಗ್ ಅನ್ನು ಅನುಕರಣೆ ಮಾಡಿದ್ದಾರೆ. ಅದುವೆ 'ನಮ್ಮೂರ ಮಂದಾರ ಹೂವೆ' ಸಿನಿಮಾ. ಈ ಸಿನಿಮಾದಲ್ಲು ಶಿವರಾಜ್ ಕುಮಾರ್ ಹಾಗೂ ರಮೇಶ್ ಅರವಿಂದ್ ಅಭಿನಯಿಸಿದ್ದಾರೆ. ಮೊದಲಿಗೆ 'ಹೇಳೆ ಕೋಗಿಲೆ' ಹಾಡಿಗೆ ಹೆಜ್ಜೆ ಹಾಕಿ, ಭಾವನಾತ್ಮಕವಾದಂತ ಡೈಲಾಗ್ ಆಕ್ಟ್ ಮಾಡಿದ್ದಾರೆ. 'ನಿನೀಗ್ ಬೇಡ ಅಂದ್ರೆ ಇವ್ನಿಗೆ ಕೊಡೋದು. ಇವ್ನಿಗೆ ಬೇಡ ಅಂದ್ರೆ ನಿನೀಗ್ ಕೊಡೋದು. ನನಗೂ ಒಂದು ಮನಸ್ಸಿಂದೆ ಎಂಬುದನ್ನ ಅರ್ಥ ಮಾಡಿಕೊಂಡ್ರಾ. ಹೆಣ್ಣಿನ ಮನಸ್ಸು ನಿಮ್ಮಂತ ಗಂಡಸರಿಗೆಲ್ಲಿ ಅರ್ಥವಾಗುತ್ತೆ' ಎಂಬ ಡೈಲಾಗ್‌ಗೆ ನಟಿಸಿದ್ದಾರೆ.

Nammoora Mandara Hoove movie scenes recreated at Mahanati show

ಆ ದೃಶ್ಯಕ್ಕೆ ಪ್ರೇಮಾ ಭಾವುಕ

ಸೋನಿ ಈ ಡೈಲಾಗ್ ಹೇಳುತ್ತಿದ್ದಂತೆ ಪ್ರೇಮಾ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು. ಇದೇ ಡೈಲಾಗ್‌ನಲ್ಲಿ ಪಾತ್ರಧಾರಿಯಾದ ರಮೇಶ್ ಅರವಿಂದ್ ಅವರು ಕೂಡ ಆ ಕ್ಷಣಗಳನ್ನು ನೆನೆದು ಮೌನಕ್ಕೆ ಜಾರಿದ್ದರು. 'ನಾನು ಯಾವತ್ತು, ಯಾವುದಕ್ಕೂ ಅತ್ತಿರೋಳಲ್ಲ. ಆದರೆ ಈ ಸೀನ್ ನೋಡಿದಾಗೆಲ್ಲಾ ಕಣ್ಣೀರು ಬರುತ್ತೆ' ಎಂದಿದ್ದಾರೆ. ಅಷ್ಟೊತ್ತಿಗೆ ರಮೇಶ್ ಅರವಿಂದ್ ಅವರು ಬಂದು ಪ್ರೇಮಾ ಅವರಿಗೆ ಸಮಾಧಾನ ಮಾಡಿದ್ದಾರೆ.

ಪ್ರೇಮಾ ಸಿನಿಜರ್ನಿಗೆ 30 ವರ್ಷ

ಪ್ರೇಮಾ ಇಂಡಸ್ಟ್ರಿಗೆ ಬಂದು 30 ವರ್ಷಗಳಾಗಿವೆ. ಇದು ಸಂತಸದ ವಿಚಾರವೇ ಸರಿ. ಎಷ್ಟೋ ಸಕ್ಸಸ್ ಫುಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಈ ಸಂತಸದ ಗಳಿಗೆಯನ್ನು ಮಹಾನಟಿ ವೇದಿಕೆಯಲ್ಲಿ ಸೆಲೆಬ್ರೇಟ್ ಮಾಡಲಾಗಿದೆ. ಕೇಕ್ ಕಟ್ ಮಾಡಿಸಿ, ಪ್ರೇಮಾ ಅವರಿಗೆ ವಿಶ್ ಮಾಡಲಾಗಿದೆ. ರಮೇಶ್ ಅರವಿಂದ್, ತರುಣ್ ಸುಧೀರ್, ನಿಶ್ವಿಕಾ, ಅನುಶ್ರೀ ಸೇರಿದಂತೆ ಎಲ್ಲರೂ ಪ್ರೇಮಾಗೆ ಕೇಕ್ ತಿನ್ನಿಸಿದ್ದಾರೆ. ಇನ್ನು ಸ್ಪರ್ಧಾಳುಗಳೆಲ್ಲಾ ಪ್ರೇಮಾ ಅವರಿಗೆ ವಿಶ್ ಮಾಡಿದ್ದಾರೆ. ಒಂದು ಕ್ಷಣಾ ಭಾವನಾತ್ಮಕವಾಗಿ ಎಲ್ಲರನ್ನು ಕಾಡಿದರೂ ಸಂತಸದ ಕ್ಷಣಕ್ಕೂ ವೇದಿಕೆ ಸಾಕ್ಷಿಯಾಗಿದೆ.

More from Filmibeat

English summary
zee kannada reality show mahanati Written Update on April 13th episode. Here is the details about Nammoora Mandara Hoove Movie Recreated;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X