ನಮೃತಾ-ದರ್ಶಿನಿ ಡ್ಯಾನ್ಸ್: "ನಮ್ಮು ಮೇಡಮ್ ನಿಮ್ಮ ಡ್ಯಾನ್ಸ್‌ಗೆ ಶಿಲೆಗಳೇ ನಾಚಿವೆ" ಎಂದ ನೆಟ್ಟಿಗರು

By ಅನಿತಾ ಬನಾರಿ

ನಮ್ರತಾ ಗೌಡ ಬಿಗ್ ಬಾಸ್ ನಂತರ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಬಹಳ ಚೆನ್ನಾಗಿಯೇ ಪರಿಚಯವಿದ್ದಾರೆ. ದರ್ಶಿನಿ ಡೆಲ್ಟಾ ಅವರು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತಮ್ಮ ಖಳನಾಯಕಿ ಪಾತ್ರದಿಂದಲೇ ಜನಮನ ಗೆದ್ದಿದ್ದಾರೆ. ಇದೀಗ ಈ ಜೋಡಿ ನಧೀಂ ಧೀಂ ತನ ಎಂದು ಕುಣಿದಿದ್ದಕ್ಕೆ ನೆಟ್ಟಿಗರೆಲ್ಲ ಚಪ್ಪಾಳೆ ತಟ್ಟುವಂತಾಗಿದೆ.

ಸಾಮಾನ್ಯವಾಗಿ ನಟಿ ನಮ್ರತಾ ಗೌಡ ಅವರು ಡ್ಯಾನ್ಸರ್ ಕಿಶನ್ ಬೆಳಗಲಿ ಅವರೊಂದಿಗೆ ಡಾನ್ಸ್ ಶೂಟ್‌ಗಳನ್ನು ಮಾಡಿಸುತ್ತಿರುತ್ತಾರೆ. ಈ ರೀತಿಯ ಡಾನ್ಸ್ ಶೂಟ್‌ಗಳನ್ನು ಹಾಕಿಯೇ ಬಹುದೊಡ್ಡ ಫಾಲೋವರ್ಸ್ ಅನ್ನು ಇಟ್ಟುಕೊಂಡಿರುವ ನಟಿ ನಮ್ರತಾ ಗೌಡ ಅವರು ಈ ಬಾರಿ ಕೊರಿಯೋಗ್ರಾಫರನ್ನು ಬದಲಾಯಿಸಿದ್ದಾರೆ.

Namratha Gowda and Darshini Delta dance for Gaalipata movie song video went viral

ಹೌದು, ಕೊರಿಯೋಗ್ರಾಫರ್ ಆಗಿರುವ ದರ್ಶಿನಿ ಡೆಲ್ಟಾ ಅವರೊಂದಿಗೆ ಡಾನ್ಸ್ ಮಾಡಿರುವ ನಟಿ ನಮ್ರತಾ ಗೌಡ ನೆಟ್ಟಿಗರಿಂದ ಭೇಷ್ ಎನಿಸಿಕೊಂಡಿದ್ದಾರೆ. ದರ್ಶಿನಿ ಹಾಗೂ ನಮ್ರತಾ ಈ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಬಹಳ ಚೆನ್ನಾಗಿ ಈ ನೃತ್ಯ ಮೂಡಿ ಬಂದಿದೆ. 'ಗಾಳಿಪಟ' ಸಿನಿಮಾದ ಬಹಳ ಪಾಪ್ಯುಲರ್ ಹಾಡು ಆಗಿರುವ "ನಧೀಂ ಧೀಂ ತನ" ಹಾಡಿಗೆ ನಟ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಭಾವನಾ ರಾವ್ ಅವರ ಜೋಡಿ ಮೋಡಿ ಮಾಡಿತ್ತು.

ಅದಾದ ಮೇಲೆ ಹಲವಾರು ರಿಯಾಲಿಟಿ ಶೋಗಳಿಂದ ಹಿಡಿದು ಎಲ್ಲೇ ನೋಡಿದರೂ ನದೀಂ ಧೀಮ್ ತನ ಹಾಡು ಅದರದ್ದೇ ಆದ ಪಾಪುಲಾರಿಟಿಯೊಂದಿಗೆ ಇಂದಿಗೂ ಪ್ರಚಲಿತದಲ್ಲಿ ಇದೆ. ಹೀಗಿರುವಾಗ ಇಬ್ಬರೂ ನಟಿಯರು ಈ ಹಾಡಿಗೆ ಡ್ಯಾನ್ಸ್ ಮಾಡಿರುವುದು ಇದೀಗ ಬಹಳ ವೈರಲ್ ಆಗಿದೆ. ಬಹಳ ಐತಿಹಾಸಿಕ ಹಿನ್ನೆಲೆ ಇರುವ ಒಂದು ಜಾಗದಲ್ಲಿ ಡ್ಯಾನ್ಸ್ ಮಾಡಿರುವ ನಟಿ ನಮ್ರತಾ ಗೌಡ ಹಾಗೂ ದರ್ಶಿನಿ ಡೆಲ್ಟಾ ಅವರು "ಶಿಲಾ ಬಾಲಿಕೆಯರನ್ನೇ ನಾಚಿಸುವಂತೆ ಕುಣಿದಿದ್ದಾರೆ" ಎಂದು ನೆಟ್ಟಿಗರು ಕಮೆಂಟ್ ಹಾಕಿದ್ದಾರೆ.

ನಟಿ ನಮ್ರತಾ ಗೌಡ ಅವರು ಡ್ಯಾನ್ಸರ್ ಕಿಶನ್ ಬಿಳಗಲಿ ಅವರೊಂದಿಗೆ ಆಗಾಗ ಕನ್ನಡದ ಕ್ಲಾಸಿಕ್ ಹಾಡುಗಳಿಗೆ ಡ್ಯಾನ್ಸ್ ಮಾಡಿ ಪೋಸ್ಟ್ ಮಾಡುವುದು ನಮಗೆಲ್ಲ ಗೊತ್ತೇ ಇದೆ. ಅದೇ ರೀತಿ ನಟಿ ದರ್ಶಿನಿ ಡೆಲ್ಟಾ ಅವರು ಅನೇಕ ಕನ್ನಡ ಸಿನಿಮಾಗಳಿಗೆ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ.

ಇದೀಗ ಈ ಜೋಡಿ ಸೇರಿ ಕೆಂಪು ಬಣ್ಣದ ಉಡುಗೆ ತೊಟ್ಟು ಹಾಕಿರುವ ಹೆಜ್ಜೆಗೆ ಬಹಳಷ್ಟು ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಪೋಸ್ಟ್ ಹಾಕಿದ 24 ಗಂಟೆಗಳ ಒಳಗೆ 21 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ಇನ್ನು ಈ ಹಾಡು ಕೇಳಿದಾಗ ನಟ ರಾಜೇಶ್ ಕೃಷ್ಣನ್ ಅಥವಾ ಭಾವನಾ ರಾವ್ ಅವರು ನೆನಪಿಗೆ ಬರುವ ಬದಲು ನಮೃತಾ ಗೌಡ ಹಾಗೂ ದರ್ಶಿನಿ ಡೆಲ್ಟಾ ಅವರು ನೆನಪಿಗೆ ಬಂದರೆ ಅಚ್ಚರಿ ಏನಿಲ್ಲ ಬಿಡಿ.

ನಮ್ರತಾ ಗೌಡ ಅವರು ಬಾಲ ನಟಿಯಾಗಿ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಲ್ಲದೆ, 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಕಿರುತೆರೆಗೆ ಕಾಲಿಟ್ಟರು. 'ನಾಗಿಣಿ' ಧಾರಾವಾಹಿ ಇವರಿಗೆ ಬಹಳಷ್ಟು ಖ್ಯಾತಿಯನ್ನು ತಂದುಕೊಟ್ಟಿತು. ಅಂತೆಯೇ ನಟಿ ದರ್ಶಿನಿ ಡೆಲ್ಟಾ ಅವರು ಹಲವಾರು ಸಿನಿಮಾಗಳಿಗೆ ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿರುವುದಲ್ಲದೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಖಳನಾಯಕಿಯಾಗಿ ತಮ್ಮ ಅಭಿನಯಕ್ಕೆ ಬಹಳಷ್ಟು ಪಾಪುಲಾರಿಟಿ ಪಡೆದಿದ್ದಾರೆ.

More from Filmibeat

English summary
Namratha Gowda and Darshini Delta dance new video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X