Namratha Gowda: "ಸ್ಪೀಡ್ ಅಂದ್ರೆ ಭಯ.. ಡಿಫೆಂಡರ್ ಕಾರ್ ತಗೋತ್ತಿನಿ.. ಫಿಟ್ ಆಗಿರ್ಬೇಕು": ನಮ್ರತಾ ಗೌಡ

By ಪ್ರಿಯಾ ದೊರೆ

ಕಿರುತೆರೆ ನಟಿ ನಮ್ರತಾ ಗೌಡ ಸದ್ಯ ನಾಗಿಣಿ-2 ಧಾರಾವಾಹಿಯಲ್ಲಿ ಶಿವಾನಿಯಾಗಿ ನಟಿಸುತ್ತಿದ್ದಾರೆ. ಆದಿಶೇಷನನ್ನು ಕಳೆದುಕೊಂಡು, ಅವನಿಗಾಗಿ ತಪಸ್ಸು ಮಾಡಿ ಭೂಮಿಗೆ ಬಂದಿದ್ದಾಳೆ.

ಆದಿಶೇಷ ತ್ರಿಶೂಲ್ ರೂಪದಲ್ಲಿ ಸಿಕ್ಕ ಮೇಲೆ ಮದುವೆ ಆಗಿದ್ದಾಳೆ. ಇನ್ನೇನು ನಾಗಮಣಿಯೂ ಕೈ ಸೇರಿತು ಎನ್ನುವಷ್ಟರಲ್ಲಿ ಶಿವಾನಿ ಬದುಕಲ್ಲಿ ಬಿರುಗಾಳಿಯೇ ಎದ್ದಿದೆ. ಆದಿಶೇಷ ಈಗ ಮತ್ತೆ ದೂರಾಗಿದ್ದಾನೆ. ತ್ರಿಶೂಲ್ ಎಲ್ಲಿ ಕಣ್ಮರೆಯಾಗಿದ್ದಾನೋ ತಿಳಿಯದೇ ಒದ್ದಾಡುತ್ತಿದ್ದಾಳೆ.

ಇದೆಲ್ಲಾ ಧಾರಾವಾಹಿ ಕಥೆಯಾದರೆ, ರಿಯಲ್ ಲೈಫ್‌ನಲ್ಲಿ ನಮ್ರತಾ ಗೌಡ ಅವರು ಆಗಾಗ ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಇನ್ನು ಸಾಕಷ್ಟು ವೈಯಕ್ತಿಕ ವಿಚಾರದ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಆಕೆಯ ವಿಡಿಯೋಗಳನ್ನು ನೋಡಿ ಖುಷಿಪಡುತ್ತಾರೆ.

ನಮ್ರತಾ ಗೌಡ ಅವರಿಗೆ ಪ್ರವಾಸ ಹೋಗುವುದು, ಹೊಸ ಹೊಸ ಜಾಗವನ್ನು ನೋಡುವುದು ಎಂದರೆ ಬಹಳ ಇಷ್ಟವಂತೆ. ಹಾಗಾಗಿ ಅವರು ಆಗಾಗ ಟ್ರಿಪ್‌ಗಳಿಗೆ ಹೋಗುತ್ತಿರುತ್ತಾರೆ. ಎಲ್ಲಿಗೆ ಹೋಗಿದ್ದೆ ಎನ್ನುವ ಬಗ್ಗೆ ವೀಡಿಯೋ ಕೂಡ ಮಾಡಿ ಯೂಟ್ಯೂಬ್‌ನಲ್ಲಿ ಶೇರ್ ಮಾಡುತ್ತಾರೆ. ಅಲ್ಲದೇ, ನಮ್ರತಾ ಅವರು ಶಾಪಿಂಗ್ ಮಾಡಿದರೆ ಆ ವೀಡಿಯೋವನ್ನು ಶೇರ್ ಮಾಡುತ್ತಾರೆ. ಮೇಕಪ್ ಮಾಡಿಕೊಳ್ಳುವುದು ಹೇಗೆ ಎಂದೂ ಕೂಡ ಹೇಳುತ್ತಾರೆ. ಇದೀಗ ನಮ್ರತಾ ಗೌಡ ಅವರು ಕಳೆದ ವರ್ಷ ಹೇಗಿದ್ದರು.? ಈಗ ಅವರಲ್ಲಿ ಏನೆಲ್ಲಾ ಬದಲಾವಣೆಯಾಗಿದೆ ಎಂಬ ಬಗ್ಗೆ ರ್ಯಾಪಿಡ್ ಫೈರ್ ರೌಂಡ್ ಎಂದು ವೀಡಿಯೋ ಮಾಡಿದ್ದಾರೆ.

ಫಿಟ್ ಆಗಿರುವ ಪ್ಲ್ಯಾನ್

ಫಿಟ್ ಆಗಿರುವ ಪ್ಲ್ಯಾನ್

ಕಳೆದ ವರ್ಷ ನಮ್ರತಾ ಗೌಡ ಅವರು ತುಂಬಾನೇ ಎಮೋಷನಲ್ ಆಗಿದ್ದರಂತೆ. ಈ ಕಾರಣಕ್ಕೆ ಸಿಕ್ಕಾಪಟ್ಟೆ ಗೊಂದಲಕ್ಕೆ ಒಳಗಾಗುತ್ತಿದ್ದರಂತೆ. ಆದರೆ, ಈ ವರ್ಷ ಆ ತಪ್ಪನ್ನು ಮಾಡದಿರಲು ನಿರ್ಧರಿಸಿದ್ದಾರೆ. ಇನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಚಾಲೆಂಜ್ ಅನ್ನು ಹಾಕಿಕೊಂಡಿದ್ದಾರೆ. ಮಾನಸಿಕವಾಗಿ ಸ್ಟ್ರಾಂಗ್ ಆಗಿ ಇರಬೇಕು. ದೈಹಿಕವಾಗಿಯೂ ಫಿಟ್ ಆಗಿರಬೇಕು ಎಂದು ತೀರ್ಮಾನ ಮಾಡಿದ್ದಾರೆ. ಇನ್ನು ಈ ವರ್ಷ ಖುಷಿಯಾಗಿರುವ ನಮ್ರತಾ ಗೌಡ ಅವರು, ಕಳೆದ ವರ್ಷ ಗೊಂದಲದಲ್ಲಿ ಉತ್ತರ ನೀಡುತ್ತಿದ್ದರಂತೆ.

ಡಿಫೆಂಡರ್ ಖರೀದಿಸಲು ಚಿಂತನೆ

ಡಿಫೆಂಡರ್ ಖರೀದಿಸಲು ಚಿಂತನೆ

ಇನ್ನು ಕಳೆದ ವರ್ಷ ನಮ್ರತಾ ಗೌಡ ಅವರು ತಮ್ಮ ಫೇವರಿಟ್ ಆಕ್ಟರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ದುಃಖದಲ್ಲಿದ್ದರಂತೆ. ಇನ್ನು ಇತ್ತೀಚೆಗೆ ನಮ್ರತಾ ಗೌಡ ಅವರು M1 mac book pro ಅನ್ನು ಖರೀದಿಸಿದ್ದು, ಈ ಬಗ್ಗೆ ಹೇಳಿಕೊಂಡಿದ್ದಾರೆ. ಇದರಿಂದ ತಮ್ಮ ಬಜೆಟ್ ಮಿತಿ ಮೀರಿದ್ದು, ಇದೀಗ ಏರ್ಪಾಡ್ ಪ್ರೋ ಖರೀದಿಸುವ ಆಸೆಯೂ ಇದೆಯಂತೆ. ಇದರೊಂದಿಗೆ ನಮ್ರತಾ ಗೌಡ ಅವರಿಗೆ ಇಷ್ಟು ವರ್ಷ ಹ್ಯಾರಿಯರ್ ಕಾರು ಡ್ರೀಮ್ ಆಗಿತ್ತಂತೆ. ಆದರೆ ಈಗ ಡಿಫೆಂಡರ್ ಖರೀದಿಸುವ ಆಸೆ ಇದ್ದು, ಇನ್ನಷ್ಟು ಸಂಪಾದನೆ ಮಾಡಿದ ಮೇಲೆ ಖರೀದಿಸುವುದಾಗಿ ಹೇಳಿದ್ದಾರೆ.

ಸ್ಪೀಡ್, ಆಕ್ಸಿಡೆಂಟ್ ಅಂದ್ರೆ ಭಯ

ಸ್ಪೀಡ್, ಆಕ್ಸಿಡೆಂಟ್ ಅಂದ್ರೆ ಭಯ

ಇನ್ನು ನಮ್ರತಾ ಗೌಡ ಅವರಿಗೆ ಹೊಸಬರನ್ನು ಮಾತನಾಡಿಸುವುದು ಎಂದರೆ ತುಂಬಾ ಭಯವಾಗುತ್ತಂತೆ. ಕ್ಯಾಮರಾ ಎದುರಿಗೆ ಕಂಡಷ್ಟು ಸುಲಭವಾಗಿ ಇನ್ನೊಬ್ಬರೊಂದಿಗೆ ವ್ಯವಹರಿಸುವುದಿಲ್ಲವಂತೆ. ನಾನು ತುಂಬಾ ಇಂಟ್ರೋವರ್ಟ್ ಎಂದು ಹೇಳಿದ್ದಾರೆ. ಇನ್ನು ನಮ್ರತಾ ಅವರಿಗೆ ಸ್ಪೀಡ್ ಆಗಿ ಹೋಗುವುದು ಎಂದರೆ ಭಯವಂತೆ. ಯಾಕೆಂದರೆ ಆಕ್ಸಿಡೆಂಟ್ ಅಂದರೆ ತುಂಬಾ ಭಯ ಪಡುವ ನಮ್ರತಾ ಗೌಡ ಅವರು ಸ್ಪೀಡ್ ಕೂಡ ಇಷ್ಟಪಡುವುದಿಲ್ಲವಂತೆ. ಯಾರಾದರೂ ತುಂಬಾ ಬೇಕಾದವರು ಟ್ರಾವೆಲ್ ಮಾಡುತ್ತಿದ್ದರೂ ನಮ್ರತಾ ಅವರಿಗೆ ಭಯವಾಗುತ್ತಂತೆ. ಆದರೆ, ಇದನ್ನೆಲ್ಲಾ ಎಷ್ಟೇ ಪಾಸಿಟಿವ್ ಆಗಿ ಯೋಚಿಸಿದರೂ ಭಯ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.

More from Filmibeat

English summary
Namratha Gowda's 2022 Cool Rapid Fire Round Goes Viral. actress shared Her Personal Issue and problems in special video. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X