For Quick Alerts
  ALLOW NOTIFICATIONS  
  For Daily Alerts

  'ಪುಟ್ಟಗೌರಿ ಮದುವೆ'ಯ ಹಿಮಾ ಇನ್ಮೇಲೆ 'ನಾಗಿಣಿ'ಯಾಗಿ ಬುಸುಗುಡಲಿದ್ದಾರೆ.!

  |
  Puttagowri maduve fame Namratha Gowda comeback with Nagini 2 serial |filimibeat Kannada

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಟ್ಟಗೌರಿ ಮದುವೆ' ಸೀರಿಯಲ್ ನ ನೀವು ನೋಡಿದ್ದೀರಾ.? ವರ್ಷಗಳ ಕಾಲ ಪ್ರಸಾರವಾದ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ 'ಹಿಮಾ' ಪಾತ್ರದಲ್ಲಿ ನಟಿಸುತ್ತಿದ್ದವರು ನಮ್ರತಾ ಗೌಡ.

  ಉತ್ತಮ ಟಿ.ಆರ್.ಪಿ ರೇಟಿಂಗ್ ಹೊಂದಿದ್ದ 'ಪುಟ್ಟಗೌರಿ ಮದುವೆ' ಈಗ ಮುಗಿದ್ದಿದ್ದು, 'ಮಂಗಳ ಗೌರಿ ಮದುವೆ'ಯ ಅಧ್ಯಾಯ ಆರಂಭವಾಗಿದೆ. 'ಪುಟ್ಟಗೌರಿ ಮದುವೆ' ಕಂಪ್ಲೀಟ್ ಆದ್ಮೇಲೆ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಹಿಮಾ ಅಲಿಯಾಸ್ ನಮ್ರತಾ ಗೌಡ ಇದೀಗ ಹೊಸ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ನಾಗಿಣಿ'ಯಾಗಿ ನಮ್ರತಾ ಗೌಡ ಬುಸುಗುಡಲಿದ್ದಾರೆ.

  ಹೌದು, ಹೆಣ್ಣು ಸರ್ಪದ ಸೇಡಿನ ಕಥೆ ಹೊಂದಿರುವ 'ನಾಗಿಣಿ' ಧಾರಾವಾಹಿ ಇನ್ನೇನು ಮುಗಿಯುವ ಹಂತ ತಲುಪಿದೆ. ಇಲ್ಲಿಯವರೆಗೂ 'ನಾಗಿಣಿ' ಆಗಿದ್ದ ದೀಪಿಕಾ ದಾಸ್ ಇದೀಗ 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದಾರೆ.

  'ಪುಟ್ಟಗೌರಿ ಮದುವೆ' ಶೂಟಿಂಗ್ ನಲ್ಲಿ ಅವಘಡ: ಕೂದಲೆಳೆ ಅಂತರದಿಂದ ಮಹೇಶ ಪಾರು.!'ಪುಟ್ಟಗೌರಿ ಮದುವೆ' ಶೂಟಿಂಗ್ ನಲ್ಲಿ ಅವಘಡ: ಕೂದಲೆಳೆ ಅಂತರದಿಂದ ಮಹೇಶ ಪಾರು.!

  'ನಾಗಿಣಿ' ಸೀರಿಯಲ್ ಮುಗಿದ್ಮೇಲೆ ಜೀ ಕನ್ನಡ ವಾಹಿನಿಯಲ್ಲಿ 'ನಾಗಿಣಿ-2' ಧಾರಾವಾಹಿ ಪ್ರಾರಂಭವಾಗಲಿದೆ. 'ನಾಗಿಣಿ-2' ಧಾರಾವಾಹಿಯಲ್ಲಿ ಹೆಣ್ಣು ಸರ್ಪವಾಗಿ ನಮ್ರತಾ ಗೌಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಕಿರುತೆರೆ ದುನಿಯಾದಿಂದ ಲಭಿಸಿದೆ.

  ನೀವು 'ಪುಟ್ಟಗೌರಿ ಮದುವೆ' ಸೀರಿಯಲ್ ಭಕ್ತರಾ? ಇದನ್ನೊಮ್ಮೆ ತಪ್ಪದೆ ಓದಿ..ನೀವು 'ಪುಟ್ಟಗೌರಿ ಮದುವೆ' ಸೀರಿಯಲ್ ಭಕ್ತರಾ? ಇದನ್ನೊಮ್ಮೆ ತಪ್ಪದೆ ಓದಿ..

  ಅಂದ್ಹಾಗೆ, ನಮ್ರತಾ ಗೌಡ ಪದವೀಧರೆ. ಚಿಕ್ಕವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ನಮ್ರತಾ ಗೌಡ 'ಮಿಲನ', 'ಗೇಮ್', 'ತುತ್ತೂರಿ' ಸಿನಿಮಾಗಳಲ್ಲಿ ನಟಿಸಿದ್ದರು. ಕ್ಲಾಸಿಕಲ್ ಡ್ಯಾನ್ಸರ್ ಕೂಡ ಆಗಿರುವ ನಮ್ರತಾ ಗೌಡ 'ತಕಧಿಮಿತ' ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದರು.

  English summary
  TV Actress Namratha Gowda of Puttagowri maduve fame to act in Nagini 2 serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X