Just In
Don't Miss!
- News
ಒಂದೇ ಒಂದು ಚಾಟ್, ಖೋತಾ ಆಯ್ತು ಲಕ್ಷಗಟ್ಟಲೆ ದುಡ್ಡು
- Technology
2020ಕ್ಕೆ ಚೀನಾದಲ್ಲಿ ಶುರುವಾಗಲಿದೆ ರಿಯಲ್ಮಿ ಯ 5G ದರ್ಬಾರ್!
- Sports
ಐಎಸ್ಎಲ್: ಒಂದೇ ಗೋಲು, ಒಂದು ಜಯ, ಒಂದನೇ ಸ್ಥಾನಕ್ಕೆ ಬೆಂಗಳೂರು
- Lifestyle
ಗುರುವಾರದ ದಿನ ಭವಿಷ್ಯ 5-12-2019
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜೀಪ್ ನಿರ್ಮಾಣದ ಹೊಸ 7 ಸೀಟರ್ ಎಸ್ಯುವಿ
- Finance
RBIನಿಂದ ಬಡ್ಡಿ ದರ ಮತ್ತಷ್ಟು ಇಳಿಕೆ ನಿರೀಕ್ಷೆ; ಡಿಸೆಂಬರ್ 5ರ ಸಭೆಯಲ್ಲಿ ನಿರ್ಧಾರ
- Education
IOCL Admit Card 2019: ಅಪ್ರೆಂಟಿಸ್ ಮತ್ತು ಡಿಇಓ ಹುದ್ದೆಗಳ ಲಿಖಿತ ಪರೀಕ್ಷಾ ಪ್ರವೇಶ ಪತ್ರ ರಿಲೀಸ್
- Travel
ಗುಜರಾತ್ ನಲ್ಲಿರುವ ಈ ಏಳು ಸ್ಥಳಗಳು - ಪ್ರತಿ ಛಾಯಾಗ್ರಾಹಕನ ಕನಸಿಗ ತಾಣಗಳು
'ಪುಟ್ಟಗೌರಿ ಮದುವೆ'ಯ ಹಿಮಾ ಇನ್ಮೇಲೆ 'ನಾಗಿಣಿ'ಯಾಗಿ ಬುಸುಗುಡಲಿದ್ದಾರೆ.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಟ್ಟಗೌರಿ ಮದುವೆ' ಸೀರಿಯಲ್ ನ ನೀವು ನೋಡಿದ್ದೀರಾ.? ವರ್ಷಗಳ ಕಾಲ ಪ್ರಸಾರವಾದ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ 'ಹಿಮಾ' ಪಾತ್ರದಲ್ಲಿ ನಟಿಸುತ್ತಿದ್ದವರು ನಮ್ರತಾ ಗೌಡ.
ಉತ್ತಮ ಟಿ.ಆರ್.ಪಿ ರೇಟಿಂಗ್ ಹೊಂದಿದ್ದ 'ಪುಟ್ಟಗೌರಿ ಮದುವೆ' ಈಗ ಮುಗಿದ್ದಿದ್ದು, 'ಮಂಗಳ ಗೌರಿ ಮದುವೆ'ಯ ಅಧ್ಯಾಯ ಆರಂಭವಾಗಿದೆ. 'ಪುಟ್ಟಗೌರಿ ಮದುವೆ' ಕಂಪ್ಲೀಟ್ ಆದ್ಮೇಲೆ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಹಿಮಾ ಅಲಿಯಾಸ್ ನಮ್ರತಾ ಗೌಡ ಇದೀಗ ಹೊಸ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ನಾಗಿಣಿ'ಯಾಗಿ ನಮ್ರತಾ ಗೌಡ ಬುಸುಗುಡಲಿದ್ದಾರೆ.
ಹೌದು, ಹೆಣ್ಣು ಸರ್ಪದ ಸೇಡಿನ ಕಥೆ ಹೊಂದಿರುವ 'ನಾಗಿಣಿ' ಧಾರಾವಾಹಿ ಇನ್ನೇನು ಮುಗಿಯುವ ಹಂತ ತಲುಪಿದೆ. ಇಲ್ಲಿಯವರೆಗೂ 'ನಾಗಿಣಿ' ಆಗಿದ್ದ ದೀಪಿಕಾ ದಾಸ್ ಇದೀಗ 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದಾರೆ.
'ಪುಟ್ಟಗೌರಿ ಮದುವೆ' ಶೂಟಿಂಗ್ ನಲ್ಲಿ ಅವಘಡ: ಕೂದಲೆಳೆ ಅಂತರದಿಂದ ಮಹೇಶ ಪಾರು.!
'ನಾಗಿಣಿ' ಸೀರಿಯಲ್ ಮುಗಿದ್ಮೇಲೆ ಜೀ ಕನ್ನಡ ವಾಹಿನಿಯಲ್ಲಿ 'ನಾಗಿಣಿ-2' ಧಾರಾವಾಹಿ ಪ್ರಾರಂಭವಾಗಲಿದೆ. 'ನಾಗಿಣಿ-2' ಧಾರಾವಾಹಿಯಲ್ಲಿ ಹೆಣ್ಣು ಸರ್ಪವಾಗಿ ನಮ್ರತಾ ಗೌಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಕಿರುತೆರೆ ದುನಿಯಾದಿಂದ ಲಭಿಸಿದೆ.
ನೀವು 'ಪುಟ್ಟಗೌರಿ ಮದುವೆ' ಸೀರಿಯಲ್ ಭಕ್ತರಾ? ಇದನ್ನೊಮ್ಮೆ ತಪ್ಪದೆ ಓದಿ..
ಅಂದ್ಹಾಗೆ, ನಮ್ರತಾ ಗೌಡ ಪದವೀಧರೆ. ಚಿಕ್ಕವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ನಮ್ರತಾ ಗೌಡ 'ಮಿಲನ', 'ಗೇಮ್', 'ತುತ್ತೂರಿ' ಸಿನಿಮಾಗಳಲ್ಲಿ ನಟಿಸಿದ್ದರು. ಕ್ಲಾಸಿಕಲ್ ಡ್ಯಾನ್ಸರ್ ಕೂಡ ಆಗಿರುವ ನಮ್ರತಾ ಗೌಡ 'ತಕಧಿಮಿತ' ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದರು.