12 ದಿನಗಳ ಬಳಿಕ ದಿವ್ಯಾ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ರಾ ಅರವಿಂದ್ ಕೆಪಿ?

By ಎಸ್ ಸುಮಂತ್

ಎಕ್ಸ್‌ಪ್ರೆಷನ್ಸ್‌ನಲ್ಲಿಯೇ ಹೃದಯ ಕದಿಯೋ ಚೋರಿ.. ಸದಾ ನಗುತ್ತಾ, ನಗಿಸುತ್ತಾ, ತುಂಟಾಟದಿಂದ ಇರುವ ದಿವ್ಯಾ ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು, ಅವರ ಫಾಲೋವರ್ಸ್, ಅವರ ಹಿತೈಷಿಗಳು, ಅವರ ಬಂಧು ಬಾಂಧವರೆಲ್ಲಾ ಸೇರಿ ಬದುಕು ಬಂಗಾರವಾಗಲೆಂದು ಹಾರೈಸಿದ್ದಾರೆ.

ದಿವ್ಯಾ ಉರುಡುಗ ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ನಿನಗಾಗಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸೂಪರ್ ಸ್ಟಾರ್ ರಚನಾ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಥೆ ಮಾಮೂಲಿಯ ಕಥೆಯಲ್ಲ. ವಿಭಿನ್ನವಾದಂತ ಕಥೆ. ನಟಿಗೆ ಸಾಕಷ್ಟು ತೂಕ ಇರುವ ಕಥೆ. ತಾಯಿ - ಮಗುವಿ‌ನ ಸಂಬಂಧದ ಕಥೆ. ದಿವ್ಯಾ ಉರುಡುಗ ಕೂಡ ರಚನಾ ಆಗಿ ಆ ಪಾತ್ರವನ್ನ ತುಂಬಾನೇ ಜೀವಿಸ್ತಾ ಇರುವುದು ತೆರೆ ಮೇಲೆ ಎದ್ದು ಕಾಣಿಸುತ್ತಿದೆ. ಇದರ ನಡುವೆ ಹೊಸದೊಂದಿಷ್ಟು ಫೋಟೋ, ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ.

Nanagagi fame Divya uruduga shares a video as she celebrates with Aravind KP

ಫ್ಯಾಮಿಲಿ, ಫ್ರೆಂಡ್ಸ್ ಹಾಜರಿ

ದಿವ್ಯಾ ಹಾಗೂ ಅರವಿಂದ್ ಕೆಪಿ ಒಬ್ಬರಿಗೊಬ್ಬರು ಪ್ರೀತಿ ಮಾಡ್ತಾ ಇರುವ ವಿಚಾರ ಗುಟ್ಟಾಗಿ ಏನು ಉಳಿದಿಲ್ಲ. ಮದುವೆ ಯಾವಾಗ ಎಂಬ ವಿಚಾರವಷ್ಟೇ ಗೊತ್ತಾಗಬೇಕಿರುವುದು. ಇಬ್ಬರು ಮನಸ್ಸಾರೆ ಪ್ರೀತಿಸ್ತಾ ಇರುವ ಕಾರಣ ಇಬ್ಬರಿಗೂ ಹುಟ್ಟುಹಬ್ಬ ಅಂದ್ರೆ ಸ್ಪೆಷಲ್ ಇದ್ದ ಹಾಗೆ. ಕಳೆದ ಕೆಲವು ದಿನಗಳ ಹಿಂದಷ್ಟೇ ದಿವ್ಯಾ, ಅರವಿಂದ್ ಅವರ ಹುಟ್ಟು ಹಬ್ಬವನ್ನು ಆಚರಿಸಿದ್ದರು. ಇದೀಗ ದಿವ್ಯಾ ಹುಟ್ಟುಹಬ್ಬದ ಸರದಿ. ಅರವಿಂದ್ ಕೆಪಿ ಕೂಡ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಅಲ್ಲಿ ಫ್ರೆಂಡ್ಸ್, ಫ್ಗಾಮಿಲಿಯೂ ಸೇರಿದ್ದಾರೆ.

ಇಬ್ಬರೂ ಕೆಪಿ ಬ್ಯುಸಿನಾ?

ಜನವರಿ 16 ರಂದು ದಿವ್ಯಾ ಉರುಡುಗ ಹುಟ್ಟುಹಬ್ಬ . ಅಂದು ಅವರ ಆಪ್ತ ಬಳಗ, ಮಾಧ್ಯಮದವರೆಲ್ಲಾ ವಿಶ್ ಮಾಡಿದ್ದರು. ಇಂದಿಗೆ 12 ದಿನ ಅವರ ಹುಟ್ಟು ಹಬ್ಬ ಕಳೆದು. ಆದರೆ ಅರವಿಂದ್ ಕೆಪಿ ಮಾತ್ರ ಈಗ ಸೆಲೆಬ್ರೇಟ್ ಮಾಡಿದ್ದಾರೆ. ಆ ವಿಡಿಯೋ, ಫೋಟೋಗಳನ್ನು ದಿವ್ಯಾ ಹಂಚಿಕೊಂಡಿದ್ದಾರೆ. ದಿವ್ಯಾ ಅವರ 'ನಿನಗಾಗಿ' ಸೀರಿಯಲ್‌ನಲ್ಲಿ ಹೆಚ್ಚು ಬ್ಯುಸಿ ಇರುವ ಕಾರಣ ಸೆಲೆಬ್ರೇಷನ್ ಲೇಟ್ ಕೂಡ ಆಗಿರಬಹುದು. ಆದರೂ ಇಬ್ಬರ ನಡುವೆ ಇಷ್ಟೊಂದು ಪ್ರಾಮುಖ್ಯತೆ ಕೊಡುವುದು ಬಹಳ ಮುಖ್ಯ.

ದಿವ್ಯಾ ಮುಂದೆ ಕೇಕ್ ಸುರಿಮಳೆ

ಅರವಿಂದ್ ಕೆಪಿ, ಬಂದ ಕೂಡಲೇ ದೊಡ್ಡ ಗುಲಾಬಿ ಹೂಗುಚ್ಛ ನೀಡಿ ಸ್ವಾಗತ ಮಾಡಿದರು. ಬಳಿಕ ಸುಂದರವಾದ ಕೇಕ್ ಕಟ್ ಮಾಡಿಸಿದರು. ಜೊತೆಗೆ ದಿವ್ಯಾ ಹುಟ್ಟುಹಬ್ಬಕ್ಕೆಂದು ಸಾಕಷ್ಟು ಕೇಕ್ ಗಳನ್ನ ತರಲಾಗಿತ್ತು. ಜೊತೆಗೆ ಡಿಯು ಎಂದು ಬರೆದಿರುವ ಕೇಕ್ ಕೂಡ ಕಟ್ ಮಾಡಲಾಗಿದೆ. ದಿವ್ಯಾಗೆ ಫುಲ್ ಕೇಕ್, ಶುಭಾಶಯಗಳ ಸುರಿಮಳೆ ಬಂದಿದೆ.

ಅಭಿಮಾನಿ ಮಾತಿಗೆ ದಿವ್ಯಾ ಹ್ಯಾಪಿ

ಇನ್ನು ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಅವರು ಬಿಗ್ ಬಾಸ್ ಮನೆಯಿಂದ ಪರಿಚಯವಾಗಿದ್ದು. ಅಲ್ಲಿಂದಾನೇ ಇಬ್ಬರು ಲವ್ ಮಾಡಿದ್ದು. ಇಲ್ಲಿಯವೆರಗೂ ಆ ಪ್ರೀತಿಯನ್ನ ಕಾಪಾಡಿಕೊಂಡು ಬಂದಿದ್ದಾರೆ. ಇದು ಅವರ ಅಭಿಮಾನಿಗಳು ಖುಷಿಯಾದಂತ ವಿಚಾರ. ಇದೇ ವಿಚಾರವನ್ನ ಕಮೆಂಟ್ ಬಾಕ್ಸ್ ನಲ್ಲಿ ಲೇಡಿ ಫ್ಯಾನ್ ಒಬ್ಬರು ಹಾಕಿದ್ದಾರೆ. ಅದು ದಿವ್ಯಾ ಅವರನ್ನ ಇಂಪ್ರೆಸ್ ಮಾಡಿದ್ದು, ಹಾರ್ಟ್ ಸಿಂಬಲ್ ಹಾಕಿದ್ದಾರೆ.

More from Filmibeat

English summary
Here is the details about Arvind KP celebrates Divya's birthday late;
Read more about: tv sandalwood serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X