ಸೀರೆಯಲ್ಲಿ ಮೋಹಕ ಲುಕ್ ಕೊಟ್ಟ ಮಯೂರಿ : ಕಲಿಯುಗದ ಅಪ್ಸರೆಯೆಂದು ಕಳೆದೋದ ಹುಡುಗ್ರು..!
'ನನ್ನ ದೇವ್ರು' ಧಾರಾವಾಹಿಯಲ್ಲಿ ಹಲವು ವರ್ಷಗಳ ಬಳಿಕ ಸೂಪರ್ ಆಗಿ ಮಯೂರಿ ಕಮ್ ಬ್ಯಾಕ್ ಮಾಡಿದ್ದರು. ಆ ಧಾರಾವಾಹಿ ಆರಂಭದಲ್ಲಿ ಎಷ್ಟು ಭರ್ಜರಿಯಾಗಿ ಓಪನಿಂಗ್ ಪಡೆದುಕೊಳ್ತೋ, ಅಷ್ಟೇ ಬೇಗ ಧಾರಾವಾಹಿ ನಿಂತು ಹೋಯ್ತು.
ಒಳ್ಳೆಯ ತಾರಾಬಳಗವಿದ್ದ ಧಾರಾವಾಹಿ ಅದು. ಆದರೆ ಕಥೆಯ ದಿಕ್ಕು ತಪ್ಪಿ ಕಡೆಗೆ ಕಡಿಮೆ ಅವಧಿಯಲ್ಲಿಯೇ ಮುಗಿದು ಹೋಯ್ತು. ಮಯೂರಿ ಅವರನ್ನು ಆ ಧಾರಾವಾಹಿಯಲ್ಲಿ ನೋಡುವುದಕ್ಕೇನೆ ಖುಷಿ ಇತ್ತು.

ತಂದೆ ತಾಯಿ ಇಲ್ಲದ ಮಗಳು, ಸಾಕಿದವರಿಗಾಗಿಯೇ ಜೀವ ತೇಯುತ್ತಿದ್ದ ಮಯೂರಿ ಪಾತ್ರವದು. ಏನೇ ಕಷ್ಟ ಬಂದರೂ ಅದನ್ನು ಹೆದರಿಸುತ್ತೇನೆ ಎಂಬ ಧೈರ್ಯವಿದ್ದ ಮಯೂರಿ ಹಿರಗೆ ನಿಂತು ನೋಡುವ ವೀಕ್ಷಕರಿಗೂ ಸ್ಫೂರ್ತಿಯಾಗುತ್ತಿದ್ದರು. ಧಾರಾವಾಹಿ ಮುಗಿದ ಮೇಲೆ ಅವರ ಅಭಿಮಾನಿಗಳು ತುಂಬಾನೇ ಮಿಸ್ ಮಾಡಿಕೊಂಡರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮೂಲಜ ಎಲ್ಲರ ಜೊತೆಗೂ ಸಂಪರ್ಕದಲ್ಲಿದ್ದಾರೆ.
ರಿಯಲ್ ಸಂತೂರ್ ಮಮ್ಮಿ!
ಮಯೂರಿ ಎಂದಾಕ್ಷಣ ಸಾಫ್ಟ್ ನೇಚರ್, ಮುದ್ದಾದ ಮುಖ, ನಿಶ್ಕಲ್ಮಶ ನಗು ಕಣ್ಣೆದುರು ಬರುತ್ತದೆ. ಈಗಲೂ ಮಯೂರಿ ಇರುವುದೇ ಹಾಗೆ. ಸಂತೂರ್ ಮಮ್ಮಿ ಎಂದರೆ ತಪ್ಪಾಗುವುದಿಲ್ಲ. ಮಗುವಿನ ತಾಯಿಯಾದರೂ ತಮ್ಮ ಫಿಟ್ನೆಸ್ ಅಂಡ್ ಬ್ಯೂಟಿಯನ್ನು ಅದ್ಭುತವಾಗಿ ಕಾಪಾಡಿಕೊಂಡಿದ್ದಾರೆ.
ಮಗನೇ ಮಯೂರಿ ಜೀವ
ಮಗ ಎಂದರೆ ತಾಯಂದಿರಿಗೆ ಮುದ್ದು ಜಾಸ್ತಿನೆ. ಹಾಗೇ ಮಯೂರಿ ಅವರಿಗೂ ಅಷ್ಟೇ ಮಗನೆಂದರೆ ಪ್ರಪಂಚ. ಒಮ್ಮೆ ಬಿಗ್ ಬಾಸ್‌ಗೂ ಪುಟ್ಟ ಮಗುವನ್ನು ಬಿಟ್ಟು ಹೋಗಿ ಕಣ್ಣೀರಿಟ್ಟಿದ್ದೆ ಜಾಸ್ತಿ. ಮಯೂರಿ ಅವರ ಸೋಷಿಯಲ್ ಮೀಡಿಯಾದ ನೋಡಿದರೇನೆ ಗೊತ್ತಾಗುತ್ತೆ. ಇತ್ತೀಚೆಗೆ ಮಯೂರಿ ತನ್ನ ಮಗನ ಜೊತೆಗೇನೆ ಹೆಚ್ಚು ಸಮಯ ಕಳೆಯುತ್ತಾರೆ. ಮಕ್ಕಳ ಬೆಳವಣಿಗೆಗೆ ಇದು ಪಾಸಿಟಿವ್ ಕೂಡ. ಒಬ್ಬ ತಾಯಿಯಾಗಿ ಮಯೂರಿ ಕೂಡ ಅದನ್ನೇ ಮಾಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿ
ಧಾರಾವಾಹಿ ಮುಗಿದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾ ದೊಡ್ಡ ಮಟ್ಟದಲ್ಲಿ ಇಂಪ್ರೂವ್ ಆಗಿ ಬಹಳ ವರ್ಷಗಳೇ ಆಯ್ತು. ತಾವೂ ಇಷ್ಟ ಪಡುವ ನಟ ನಟಿಯರನ್ನು ಅಭಿಮಾನಿಗಳು ಫಾಲೋ ಮಾಡ್ತಾರೆ. ಆ ಮೂಲಕವೇ ಸಂಪರ್ಕ ಸಾಧಿಸುವ ಪ್ರಯತ್ನ ಮಾಡ್ತಾರೆ. ಮಯೂರಿ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ತಾವೆಲ್ಲಿ ಹೋಗಿದ್ದೀವಿ, ಲೈಫ್ ಹೇಗೆ ಲೀಡ್ ಮಾಡ್ತಾ ಇದ್ದೀವಿ ಎಂಬೆಲ್ಲಾ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿಯೇ ಹಾಕುತ್ತಾ ಇರುತ್ತಾರೆ. ಅಭಿಮಾನಿಗಳ ಸಂಪರ್ಕದಲ್ಲಿಯೇ ಇರುತ್ತಾರೆ.
ಮೋಹಕ ಲುಕ್‌ನಲ್ಲಿ ಮಯೂರಿ
ಸದ್ಯ ಹೊಸದಾಗಿ ಸೀರೆಯುಟ್ಟ ನವಿಲಿನಂತೆ ಕಾಣುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಆ ಸೀರೆಯ ಫೋಟೋದಲ್ಲಿ ಮಯೂರಿ ಪಡ್ಡೆ ಹುಡುಗ್ರ ನಿದ್ದೆ ಕೆಡಿಸುವಂತ ಮಾದಕ ಲುಕ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ನೋಡಿದ ಹಲವರು ಹಾರ್ಟ್ ಇಮೋಜಿ ಹಾಕಿ, ಮಯೂರಿ ಅವರ ಬ್ಯೂಟಿಯನ್ನು ಹೊಗಳಿದ್ದಾರೆ. ಇನ್ನು ಹಲವರು ಬಾಯ್ತುಂಬ ಅಕ್ಕ ಎಂದು ಮೆನ್ಶನ್ ಮಾಡಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಒಟ್ನಲ್ಲಿ ಧಾರಾವಾಹಿಯಲ್ಲಿ ಮಯೂರಿ ಅವರನ್ನು ಮಿಸ್ ಮಾಡಿಕೊಂಡರು, ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಫಾಲೋ ಮಾಡುತ್ತಾ, ಅವರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.


Click it and Unblock the Notifications











