Sarika-Mrudini: ನಿಮ್ಗೆ ಯಾರಿಷ್ಟ ಅಂತ ಸಾರಿಕಾ ಕೇಳಿದ್ರೆ ಜನ ಜೈ ಅಂದಿದ್ದು ಮೃದಿನಿಗೆ!
ನನ್ನಮ್ಮ ಸೂಪರ್ ಸೀಸನ್- 3- ವಿನ್ನರ್ ಮೃದಿನಿಯನ್ನು ಯಾರಾದರೂ ಮರೆಯುವುದಕ್ಕೆ ಸಾಧ್ಯವಾ? ಮುದ್ದು ಮುದ್ದು ಮಾತು, ತುಂಟನಗೆ, ನಿಶ್ಕಲ್ಮಶ ನಗು ಅಂದ್ರೆ ಹೇಗಿರುತ್ತೆ ಅಂತ ಮೃದಿನಿ ನೋಡಿದಾಗಲೇ ಅರ್ಥವಾಗುತ್ತಿತ್ತು. 'ನನ್ನಮ್ಮ ಸೂಪರ್ ಸ್ಟಾರ್' ವೇದಿಕೆಯಲ್ಲಿ ಅವಳ ನಡೆ ಯಾವತ್ತಿಗೂ ಸ್ಕ್ರಿಪ್ಟೆಡ್ ಅನ್ನಿಸುತ್ತಲೆ ಇರಲಿಲ್ಲ. ತನಗೇನು ಅನ್ನಿಸುತ್ತೋ ಅದನ್ನ ಮಾತನಾಡಿ, ಅರ್ಥವಾಗದೆ ಇದ್ದ ಮಾತುಗಳಿಗೆ ಸುಮ್ಮನೆ ನಿಂತು ಬಿಡುತ್ತಿದ್ದಳು.
'ನನ್ನಮ್ಮ ಸೂಪರ್ ಸ್ಟಾರ್' ಶೋ ಗೆದ್ದಮೇಲೆ ಮಾಮೂಲಿಯಂತೆಯೇ ಇದ್ದಾಳೆ. ತನ್ನಮ್ಮ, ಅಪ್ಪನ ಜೊತೆಗೆ ರೀಲ್ಸ್ ಮಾಡಿಕೊಂಡು, ಟಾಂಟ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾಳೆ. ಇದೀಗ ಸಾರಿಕಾ ಮಾಡಿದ ಪೋಲ್‌ಗೆ ಜನ ಮುಗಿಬಿದ್ದು, ಮೃದಿನಿಗೆ ವೋಟ್ ಮಾಡಿದ್ದಾರೆ.

ಅಮ್ಮ-ಮಗಳ ಕಂಟೆಂಟ್‌ಗೆ ಫಿದಾ
ಸಾರಿಕಾ ಒಳ್ಳೆ ಕಂಟೆಂಟ್ ಕ್ರಿಯೇಟರ್ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಸೋಷಿಯಲ್ ಮೀಡಿಯಾ ನೋಡಿದರೇನೆ ಅದು ಅರ್ಥವಾಗುತ್ತದೆ. ಗಂಡ-ಹೆಂಡತಿ-ಮಗಳು ಮಾಡುವ ಸಣ್ಣ ಸಣ್ಣ ತುಣುಕುಗಳು ಹಾಸ್ಯ ಪ್ರಧಾನವಾಗಿಯೇ ಇರುತ್ತವೆ. ಮೃದಿನಿ ಅದರಲ್ಲೂ ತನ್ನ ಫೇಸ್ ಎಕ್ಸ್‌ಪ್ರೆಷನ್, ಸೀರಿಯಸ್ ಲುಕ್ ಎಲ್ಲವನ್ನು ಜನರಿಗೆ ವಾವ್ ಎನಿಸುವಂತೆ ಕೊಡುತ್ತಾಳೆ.
ವೈಟ್ ಕಲರ್ ಡ್ರೆಸ್‌ನಲ್ಲಿ ಮಿಂಚಿಂಗ್
ಸಾರಿಕಾ ಹೆಚ್ಚು ರೀಲ್ಸ್ ಮಾಡೋದು ಮಗಳ ಜೊತೆಗೇನೆ. ಆಗಾಗ ಗಂಡನು ಅಮ್ಮ ಮಗಳ ರೀಲ್ಸ್ ನಲ್ಲಿ ಇರುತ್ತಾರೆ. ಇಬ್ಬರು ವೈಟ್ ಕಲರ್ ಗೌನ್ ಹಾಕಿ ಮಿಂಚಿದ್ದಾರೆ. ಮೃದಿನಿ ಮೊದಲೇ ಗೊಂಬೆಯಂತೆ ಇದ್ದಾಳೆ. ಇನ್ನು ಮೇಕಪ್ ಮಾಡಿದರೆ ಕೇಳಬೇಕಾ..? ಇನ್ನಷ್ಟು ಮುದ್ದಾಗಿ ಕಾಣಿಸುತ್ತಾಳೆ. ಈಗ ವೈಟ್ ಕಲರ್ ಗೌನ್ ನಲ್ಲೂ ಅಷ್ಟೇ ಮುದ್ದಾಗಿ ಕಾಣಿಸುತ್ತಿದ್ದಾಳೆ. ಈ ವಿಡಿಯೋಗೆ ಲೈಕ್ಸ್, ಕಮೆಂಟ್‌ಗಳ ಸುರಿ ಮಳೆಯೇ ಸುರಿಯುತ್ತಿದೆ.
ಮೃದಿನಿಗೆ ಹೆಚ್ಚು ಮಾರ್ಕ್ಸ್
ಟ್ರೆಂಡಿಂಗ್ ಹಾಡಿಗೆ ಹೆಜ್ಜೆ ಹಾಕಿರುವ ಸಾರಿಕಾ ಹಾಗೂ ಮೃದಿನಿ, ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಸಾರಿಕ ಶೇರ್ ಮಾಡಿರುವ ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಇಬ್ಬರಲ್ಲಿ ಯಾರೂ ಚೆನ್ನಾಗಿ ಕಾಣಿಸುತ್ತಾರೆ ಹೇಳಿ ಅಂತ ಸಾರಿಕಾ ಹಾಗೂ ಮೃದಿನಿ ಹೆಸರನ್ನ ಹಾಕಿದ್ದಾರೆ. ಅದಕ್ಕೆ ಐದುವರೆ ಸಾವಿರಕ್ಕೂ ಹೆಚ್ಚು ವೋಟ್ ಗಳು ಮೃದಿನಿಗೆ ಬಂದಿದೆ. ಸಾರಿಕಾಗೂ ವೋಟ್ ಬಂದಿದೆ. ಆದರೆ ಮಗಳಷ್ಟು ಅಲ್ಲ. ಅಮ್ಮನ ಮುಂದೆ ಮಗಳೇ ಅಭಿಮಾನಿ ಬಳಗವನ್ನು ಹೆಚ್ಚು ಸಂಪಾದಿಸಿರುವುದು. ಹೀಗಾಗಿ ಈಗ ಮೃದಿನಿ ಎಲ್ಲರ ಅಚ್ಚುಮೆಚ್ಚಿನ ಕಂದಮ್ಮ.
ಅಮ್ಮನ ಪೇಜ್‌ನಲ್ಲೇ ಮಗಳ ರೀಲ್ಸ್
ಸಾರಿಕಾ ಮೊದಲಿನಿಂದಾನೂ ಒಂದೇ ಪೇಜ್ ಮೆಂಟೈನ್ ಮಾಡುತ್ತಿದ್ದಾರೆ. ಅವರದ್ದೇ ಪೇಜ್ ನಲ್ಲಿ ಮಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಅಮ್ಮನ ಕಂಟೆಂಟ್‌ಗೆ ಮಗಳು ಸೂಪರ್ ಟ್ಯಾಲೆಂಟ್. ಮೃದಿನಿ ನಟನೆ ಮುಂದೆ ಸಾರಿಕಾ ನಟನೆ ಕಡಿಮೆಯೇ. ಮೃದಿನಿಗೆ ಅಭಿಮಾನಿಗಳು ಇರುವುದು ಹೆಚ್ಚು. ನನ್ನಮ್ಮ ಸೂಪರ್ ಸ್ಟಾರ್ ಸೀಸನ್ -3ರಲ್ಲಿಯೂ ಮೃದಿನಿಯನ್ನೇ ವೇದಿಕೆ ಮೇಲೆ ಕರೆದಿದ್ದು ಹೆಚ್ಚು. ಅವಳ ಮಾತನ್ನು ಕೇಳುವುದಕ್ಕೆ ತೀರ್ಪುಗಾರರು ಕಾಯುತ್ತಿದ್ದರು. ಅಷ್ಟು ಫೇಮಸ್ ಆಗಿದ್ದಳು ಮೃದಿನಿ. ಅದೇ ಥರ ಸೋಷಿಯಲ್ ಮೀಡಿಯಾದಲ್ಲೂ ಫೇಮಸ್ ಆಗಿದ್ದಾಳೆ.


Click it and Unblock the Notifications











