Nannamma superstar: ಮಗನಿಗಾಗಿ ಸುದ್ದಿ ನಿರೂಪಕಿ ವೃತ್ತಿ ತೊರೆದ ಉಷಾ ಜೀವನ ಕಥೆ ಏನು?

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ಮತ್ತೆ ಮನರಂಜಿಸುವುದಕ್ಕೆ 'ನನ್ನಮ್ಮ ಸೂಪರ್ ಸ್ಟಾರ್ ಸೀಸನ್- 3' ಶುರುವಾಗಿದೆ. ತುಂಟಾಟ ಮಾಡುವ ಮಕ್ಕಳೊಂದಿಗೆ ಅಮ್ಮಂದಿರು ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಸೀಸನ್ 1 ಮತ್ತು 2 ಕೂಡ ಅದ್ಭುತವಾಗಿ‌ ಮೂಡಿ ಬಂದಿತ್ತು. ಸಕ್ಸಸ್ ಆದ ಹಿನ್ನೆಲೆ ಈಗ ಸೀಸನ್- 3 ಅನ್ನು ತಂದಿದ್ದಾರೆ.

ಈಗಿನ ಜನರೇಷನ್ ಮಕ್ಕಳಂತೂ ಸಿಕ್ಕಾಪಟ್ಟೆ ಚೂಟಿ ಇರುತ್ತಾರೆ. ಹೈಪರ್ ಆ್ಯಕ್ಟೀವ್ ಆಗಿರುತ್ತಾರೆ. ಮುಂಚಿನ ರೀತಿ, ಅಜ್ಜಿ ಮನೆಯಲ್ಲೋ, ಚಿಕ್ಕಮ್ಮನ ಮನೆಯಲ್ಲೋ ಬಿಟ್ಟು ಬೆಳೆಸುವಷ್ಟು ಸೈಲೆಂಟ್ ಆಗಿ ಇರುವುದೇ ಇಲ್ಲ. ತಾಯಿ ಸಂಪೂರ್ಣವಾಗಿ‌ ಮಕ್ಕಳಿಗೆ ಸಮಯ ನೀಡಬೇಕಾಗಿದೆ. ಜಗತ್ತು ಅಷ್ಟೇ ಬೆಳೆದಿರುವ ಕಾರಣ, ಮಕ್ಕಳನ್ನು ತಯಾರು ಮಾಡಲು ತಾಯಿಯ ಪೂರ್ತಿ ಸಮಯ ಮಕ್ಕಳಿಗೆ ಬೇಕಾಗಿರುತ್ತದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅದೆಷ್ಟೋ ತಾಯಂದಿರು ತಮ್ಮ ಕನಸ್ಸನ್ನು ತೊರೆದಿದ್ದಾರೆ. ಅದರಲ್ಲಿ ಮಾಜಿ ನ್ಯೂಸ್ ಆಂಕರ್ ಉಷಾ ಕೂಡ ಒಬ್ಬರು.

Nannamma super star season- 3 Written Update on February 4th episode

ಆರ್ಯನ್ ಜೊತೆಗೆ ಬಂದ ಉಷಾ

ನನ್ನಮ್ಮ ಸೂಪರ್ ಸ್ಟಾರ್ ಸೀಸನ್- 3ರಲ್ಲಿ ಹಲವು ವಿಭಾಗಗಳಿಂದ ಟ್ಯಾಲೆಂಟೆಡ್ ಅಮ್ಮಂದಿರು ಬಂದಿದ್ದಾರೆ. ತಮ್ಮ ಪ್ರತಿಭಾವಂತ ಮಕ್ಕಳನ್ನು ಕರೆದುಕೊಂಡು. ಅದರಲ್ಲಿ ಮಾಜಿ ಸುದ್ದಿ ನಿರೂಪಕಿ ಕೂಡ ಭಾಗಿಯಾಗಿದ್ದು, ತಮ್ಮ‌ಜೀವನ ಅಮೂಲ್ಯ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ಸುದ್ದಿ ನಿರೂಪಕಿ ಆಗಿ ಜನಪ್ರಿಯ

2007-2010ರ ತನಕ ಉಷಾ ಮನೆ ಮನೆಯಲ್ಲೂ ಪರಿಚಿತರಾಗಿದ್ದವರು. ಖಾಸಗಿ ಚಾನೆಲ್ ಮೂಲಕ ಸುದ್ದಿ ನಿರೂಪಕಿಯಾಗಿ ಗಮನ ಸೆಳೆದವರು. ಆದರೆ ಮಗು ಎಂಬ ವಿಚಾರ ಬಂದಾಗ ಕೆಲಸವನ್ನು ಬಿಟ್ಟು, ಮಗನಿಗೆ ಫುಲ್ ಟೈಮ್ ಅಮ್ಮ ಆದವರು. 2010ರಲ್ಲಿ ಉಷಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2012 ರಿಂದ ಮಗುವಿಗಾಗಿ ಪ್ಲ್ಯಾನ್ ಮಾಡಿದವರು ಉಷಾ ದಂಪತಿ.

Nannamma super star season- 3 Written Update on February 4th episode

ಮಗು ಬೇಕೆಂದು ತಪಸ್ಸು ಮಾಡಿದ್ದ ದಂಪತಿ

ಉಷಾ ದಂಪತಿ ಮಗು ಬೇಕು ಎಂದಾಗಲೂ ಮಗು ಆಗಿರಲಿಲ್ಲ. ಆಗ ಐವಿಎಫ್ ಚಿಕಿತ್ಸೆಗೆ ಒಳಗಾಗುವಂತೆ ಸಾಕಷ್ಟು ಜನ ಸಲಹೆ ನೀಡಿದ್ದರಂತೆ. ಆದರೆ ಆ ರೀತಿಯೆಲ್ಲಾ ಚಿಕಿತ್ಸೆ ಬೇಡ ಎಂದು ನಿರ್ಧರಿಸಿದ್ದರಂತೆ. ಬಳಿಕ ಗರ್ಭಿಣಿ ಎಂದು ಗೊತ್ತಾದ ಕೂಡಲೇ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದರಂತೆ.

ಮಗುವಿಗಾಗಿ ಕೆಲಸಕ್ಕೆ ಗುಡ್‌ಬೈ

ಯಾವುದೇ ಚಿಕಿತ್ಸೆಯಿಲ್ಲದೆ ಉಷಾ ಗರ್ಭಿಣಿ ಆಗಿದ್ದರಂತೆ. ಮಗು ಆಗೋದೆ ಇಲ್ಲ ಎಂದುಕೊಂಡಾಗ ಮಗು ಆಗಿದ್ದಕ್ಕೆ, ಯಾವ ಕೆರಿಯರ್ ಬೇಡ,‌ ಮೊದಲು ಮಗು ಮುಖ್ಯ ಎಂದು ಕಾಳಜಿ ಮಾಡಿದ್ದರಂತೆ. ಸಾಕು ಮಗು ನೋಡಿಕೊಂಡು ಇದ್ದು ಬಿಡುತ್ತೀನಿ ಅಂತ ನಿರ್ಧಾರ ಮಾಡಿದ್ದರಂತೆ. ಈಗ ನನ್ನಮ್ಮ ಸೂಪರ್ ಸ್ಟಾರ್ ಸೀಸನ್-3 ಮೂಲಕ ಕಮ್ ಬ್ಯಾಕ್ ಆಗಿದ್ದಾರೆ.

ಮಗ ಪ್ರೋ ಕಿಡ್ ಅಂತೆ

ಆರ್ಯನ್ ಬಗ್ಗೆ ಅಪ್ಪ-ಅಮ್ಮ ಇಬ್ಬರು ತುಂಬಾ ಪ್ರೌಡ್ ಫೀಲ್ ಮಾಡುತ್ತಾರೆ. ಆರ್ಯನ್‌ಗೆ ಈಗ 6 ವರ್ಷ 11 ತಿಂಗಳು ವಯಸ್ಸು. ತುಂಬಾ ಸ್ಮಾರ್ಟ್, ತುಂಬಾ ಟ್ಯಾಲೆಂಟೆಡ್, ಅವನೊಂದು ಥರ ಪ್ರೋ ಕಿಡ್. ಓದುವುದು, ಬರೆಯುವುದರ ಕಡೆಗೆ ಹೆಚ್ಚು ಒಲವು. ಮಗನಿಗೆ ಹತ್ತು ರೂಪಾಯಿಯ ಕ್ರಯಾನ್ ಪೆನ್ನು ತಂದುಕೊಟ್ಟರು ಸಾಕು ಅಂತಾರೆ ಅವರ ಅಮ್ಮ.

More from Filmibeat

English summary
Here is the details about Nannamma super star season-3 first episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X