Kaustubha Mani: "ಮುಂದಿನ ಅಧ್ಯಾಯದ ಸಮಯ" ಎಂದ ನಟಿ ಕೌಸ್ತುಭಮಣಿ.. ಯಾಕೆ ಗೊತ್ತಾ?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನನ್ನರಸಿ ರಾಧೆ಼' ಧಾರಾವಾಹಿಯಲ್ಲಿ ನಾಯಕಿ ಇಂಚರಾ ಆಗಿ ಅಭಿ‌ನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಚೆಂದುಳ್ಳಿ ಚೆಲುವೆಯ ಹೆಸರು ಕೌಸ್ತುಭಮಣಿ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಕೌಸ್ತುಭಮಣಿ ಇದೀಗ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಗೌರಿ ಶಂಕರ'ದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮತ್ತೆ ಕನ್ನಡ ಕಿರುತೆರೆಯಲ್ಲಿ ಕಮಾಲ್ ಮಾಡಲಿದ್ದಾರೆ ಕೌಸ್ತುಭಮಣಿ. ಈಗಾಗಲೇ ಧಾರಾವಾಹಿಯ ಪ್ರೋಮೋ ಕೂಡಾ ರಿಲೀಸ್ ಆಗಿದ್ದು ಅದು ಸಕತ್ ಸದ್ದು ಮಾಡುತ್ತಿದೆ.

Nannarasi Radhe fame Kaustubha Mani returned to small screen with Gowri Shankar serial

ಇದರ ಜೊತೆಗೆ ಸ್ವತಃ ಕೌಸ್ತುಭಮಣಿ ಅವರೇ ಧಾರಾವಾಹಿಯ ಪ್ರೋಮೋ ಹಂಚಿಕೊಂಡಿದ್ದು "ಇದು ಮುಂದಿನ ಅಧ್ಯಾಯದ ಸಮಯ.‌. ಗೌರಿಶಂಕರ.‌. ನಿಮ್ಮ ಪ್ರೀತಿ, ಆಶೀರ್ವಾದ ನನ್ನ ಮೇಲಿರಲಿ" ಎಂದು ಬರೆದುಕೊಂಡಿದ್ದಾರೆ. ಇನ್ನು 'ನನ್ನರಸಿ ರಾಧೆ' ಧಾರಾವಾಹಿಯ ನಂತರ ಪರಭಾಷೆಯ ಕಿರುತೆರೆಯಿಂದ ನಟಿಸುವ ಅವಕಾಶ ಬಂದಾಗ ಒಲ್ಲೆ ಎನ್ನದ ಕೌಸ್ತುಭ ಮಣಿ ತೆಲುಗಿನ 'ಕೋಡಲು ಮೀಕು ಜೋಹರ್ಲು'ವಿನಲ್ಲಿ ನಾಯಕಿಯಾಗಿ ಮಿಂಚಿದರು.

ಇದೀಗ 'ಗೌರಿಶಂಕರ' ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಮರಳಿರುವ ಕೌಸ್ತುಭಮಣಿ ಈಗಾಗಲೇ ಹಿರಿತೆರೆಗೂ ಕಾಲಿಟ್ಟಾಗಿದೆ. ತೇಜ್ ನಿರ್ದೇಶಿಸಿ ನಟಿಸಿರುವ 'ರಾಮಾಚಾರಿ 2.0' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಹಾರಿದ ಈಕೆ ಮೊದಲ ಸಿನಿಮಾ ರಿಲೀಸ್ ಆಗುವ ಮೊದಲೇ ಮಗದೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

Nannarasi Radhe fame Kaustubha Mani returned to small screen with Gowri Shankar serial

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮೊದಲ ಬಾರಿಗೆ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದು ಅವರ ಮೊದಲ ಸಿನಿಮಾ '45'ರಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿದ್ದಾರೆ ಕೌಸ್ತುಭಮಣಿ. ಅಂದ ಹಾಗೇ ಈ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಶೆಟ್ಟಿ ಅಭಿನಯಿಸುತ್ತಿದ್ದು ಅವರ ಜೊತೆಗೆ ನಟಿಸುವ ಅವಕಾಶ ಕೌಸ್ತುಭಮಣಿಗೆ ದೊರಕಿದೆ.

More from Filmibeat

English summary
Nannarasi Radhe fame Kaustubha Mani returned to small screen with Gowri Shankar serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X