'ನನ್ನರಸಿ ರಾಧೆ' ಧಾರಾವಾಹಿ ನಟಿಯ ಫ್ರಿ-ವೆಡ್ಡಿಂಗ್ ಫೋಟೊಶೂಟ್ ವೈರಲ್: ವರ ಯಾರು?
ಕನ್ನಡ ಕಿರುತೆರೆಯ ತಾರೆಯರು ಕರ್ನಾಟಕದ ಮನೆ ಮನೆ ಮಂದಿಗೂ ಚಿರಪರಿಚಿತ. ಅವರು ಧಾರಾವಾಹಿಗಳಿಂದಲೇ ವೀಕ್ಷಕರ ಮನ ಸೆಳೆದು ಬಿಡುತ್ತಾರೆ. ಇತ್ತ ಅಭಿಮಾನಿಗಳು ಕೂಡ ಇವರ ಪ್ರತಿಯೊಂದು ಹೆಜ್ಜೆಯನ್ನು ಗಮನಿಸುತ್ತಲೇ ಇರುತ್ತಾರೆ. ಅದಕ್ಕೆ ತಾರೆಯರು ಕೂಡ ಹೊಸ ಧಾರಾವಾಹಿ, ನಿಶ್ಚಿತಾರ್ಥ, ಮದುವೆ ಎಲ್ಲ ವಿಷಯವನ್ನೂ ಹಂಚಿಕೊಳ್ಳುತ್ತಾರೆ.
ಕೆಲವು ದಿನಗಳ ಹಿಂದಷ್ಟೇ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ನನ್ನರಸಿ ರಾಧೆ' ಖ್ಯಾತಿಯ ಸಹನಾ ಶೆಟ್ಟಿ ನಿಶ್ವಿತಾರ್ಥದ ಸುದ್ದಿಯನ್ನು ತಿಳಿಸಿದ್ದರು. ಏಪ್ರಿಲ್ 14 ಪ್ರೇಮಿಗಳಂದೇ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದರು.

ಸಹನಾ ಶೆಟ್ಟಿ ಎಂಗೇಜ್ಮೆಂಟ್ ಮಾಡಿಕೊಂಡ ವಿಷಯವನ್ನಷ್ಟೇ ತಿಳಿಸಿದ್ದರು. ಅಲ್ಲದೆ ನಿಶ್ಚಿತಾರ್ಥದ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಆಗಲೂ ಮದುವೆ ಆಗುತ್ತಿರುವ ಹುಡುಗನ ಪರಿಚಯ ಮಾಡಿಕೊಟ್ಟಿರಲಿಲ್ಲ. ಈಗ ವರ ಯಾರು ಅನ್ನೋದನ್ನು ನಟಿ ರಿವೀಲ್ ಮಾಡಿದ್ದು,ಪ್ರೀ ವೆಡ್ಡಿಂಗ್ ಫೋಟೊವನ್ನು ಹಂಚಿಕೊಂಡಿದ್ದಾರೆ.
ಫ್ರಿ-ವೆಡ್ಡಿಂಗ್ ಫೋಟೊ ಶೇರ್
'ನನ್ನರಸಿ ರಾಧೆ' ಧಾರಾವಾಹಿಯ ನಟಿ ಸಹನಾ ಶೆಟ್ಟಿ ವಿವಾಹವಾಗುತ್ತಿರುವ ಹುಡುಗ ಪ್ರತಾಪ್ ಶೆಟ್ಟಿ. ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಫ್ರಿ ವೆಡ್ಡಿಂಗ್ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಸಹನಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಸುಮಾರು 68 ಸಾವಿರಕ್ಕೂ ಅಧಿಕ ಮಂದಿ ಫಾಲೋವರ್ಸ್ ಇದ್ದಾರೆ. ಆಗಾಗ ಹೊಸ ಹೊಸ ಫೋಟೊಶೂಟಗಳನ್ನು ಮಾಡಿಸಿಕೊಳ್ಳುತ್ತಾರೆ. ಅದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಲೂ ಇರುತ್ತಾರೆ.
ಊರ್ವಿ ಪಾತ್ರದಲ್ಲಿ ಫೇಮಸ್
ಸಹನಾ ಶೆಟ್ಟಿ 'ನನ್ನರಸಿ ರಾಧೆ' ಧಾರಾವಾಹಿಯಿಂದ ಕನ್ನಡಿಗರಿಗೆ ಚಿರಪರಿಚಿತ. ಈ ಧಾರಾವಾಹಿಯಲ್ಲಿ ಊರ್ವಿ ಅನ್ನೋ ಪಾತ್ರದಲ್ಲಿ ಜನಮನಗೆದ್ದಿದ್ದರು. ಧಾರಾವಾಹಿಯ ಪ್ರಮುಖ ಪಾತ್ರ ಅಗಸ್ತ್ಯನ ತಂಗಿಯಾಗಿ ಗಮನ ಸೆಳೆದಿದ್ದರು.
ಪ್ರತಾಪ್ ಶೆಟ್ಟಿ ಜೊತೆ ಸಹನಾ ಶೆಟ್ಟಿ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಹೊಸ ಧಾರಾವಾಹಿಗೆ ಸಹಿ ಮಾಡಿಲ್ಲ ಎನ್ನಲಾಗಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದಾರೆ. ಹೀಗಾಗಿ ವಿವಾಹದ ಬಳಿಕ ಕಿರುತೆರೆಯಲ್ಲಿ ನಟಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ನವ ಜೋಡಿ ಶುಭ ಹಾರೈಕೆ
ಸಹನಾ ಶೆಟ್ಟಿ ಹಾಗೂ ಪ್ರತಾಪ್ ಶೆಟ್ಟಿ ಇಬ್ಬರ ಪ್ರೀ ವೆಡ್ಡಿಂಗ್ ಫೋಟೊಶೂಟ್ ವೈರಲ್ ಆಗುತ್ತಿದೆ. ಸಹನಾ ಶೆಟ್ಟಿಯ ಅಭಿಮಾನಿಗಳು ಹಾಗೂ ನೆಟ್ಟಿಗರು ನವ ಜೋಡಿಯ ಪ್ರೀ ವೆಡ್ಡಿಂಗ್ ಶೂಟ್‌ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಹಾಗೇ ನವ ಜೋಡಿಗೆ ಹೊಸ ಜೀವನಕ್ಕೆ ಶುಭ ಹಾರೈಸುತ್ತಿದ್ದಾರೆ.
ಸಹನಾ ಶೆಟ್ಟಿ ಪ್ರಿ ವೆಡ್ಡಿಂಗ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಮದುವೆ ಯಾವಾಗ? ಎಲ್ಲಿ? ಅನ್ನೋ ವಿಷಯವನ್ನು ಗೌಪ್ಯವಾಗಿಯೇ ಇಟ್ಟಿದ್ದಾರೆ. ಶೀಘ್ರದಲ್ಲಿಯೇ ಕುಟುಂಬಸ್ಥರು, ಆಪ್ತರು ಸಮ್ಮುಖದಲ್ಲಿ ಹೊಸ ಬಾಳಿಕೆ ಕಾಲಿಡಲಿದ್ದಾರೆ.


Click it and Unblock the Notifications











