ಮೊದಲ ಮಗುವಿನ ನಿರೀಕ್ಷೆಯಲ್ಲಿ 'ನನ್ನರಸಿ ರಾಧೆ' ಕೌಸ್ತುಭಾ ಮಣಿ; ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ ನಟಿ

By ಅನಿತಾ ಬನಾರಿ

ಹೌದು, ಕೌಸ್ತುಭ ಮಣಿ ಎನ್ನುವ ಬದಲು 'ನನ್ನರಸಿ ರಾಧೆ' ಧಾರಾವಾಹಿಯ ಇಂಚರ ಎಂದರೆ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಬಹಳ ಬೇಗ ಪರಿಚಯವಾಗುತ್ತಾರೆ. 2020 ರಿಂದ 2022ರ ತನಕ ಪ್ರಸಾರವಾದ 'ನನ್ನರಸಿ ರಾಧೆ' ಧಾರಾವಾಹಿ ಕನ್ನಡ ಕಿರುತೆರೆ ಪ್ರೇಕ್ಷಕರ ಫೇವರೆಟ್ ಧಾರಾವಾಹಿಗಳಲ್ಲೊಂದಾಗಿತ್ತು. ಅದರಲ್ಲೂ ಅಗಸ್ತ್ಯ ಹಾಗೂ ಇಂಚರ ಜೋಡಿ ಪ್ರೇಕ್ಷಕರ ಮನಗೆದ್ದ ಜೋಡಿ ಆಗಿತ್ತು.

ಈ ಧಾರಾವಾಹಿ ನಂತರ ಹೆಚ್ಚು ಬೇರೆ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ನಂತರ ಕೌಸ್ತುಭ ಮಣಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಸಿದ್ಧಾಂತ ಸತೀಶ್ ಎಂಬುವವರನ್ನು ಮದುವೆಯಾಗಿದ್ದರು. ಮದುವೆಯ ನಂತರ ಯಾವುದೇ ಧಾರಾವಾಹಿ ಆಫರ್ ಅನ್ನು ಸ್ವೀಕರಿಸದ ಮುದ್ದು ಮುಖದ ಈ ಸುಂದರಿ ಮಾಡೆಲಿಂಗ್, ಫೋಟೋ ಶೂಟ್, ಬ್ರಾಂಡ್ ಎಂಗೇಜ್ಮೆಂಟ್, ಬ್ರಾಂಡ್ ಪ್ರಮೋಷನ್ ಇಂತಹ ವಿಚಾರಗಳಲೇ ಬ್ಯುಸಿಯಾಗಿದ್ದರು.

Nannarasi Radhe serial actress Kaustubha Mani is pregnant

ಇದೀಗ ನಟಿ ಕೌಸ್ತುಭ ಮಣಿ ತಮ್ಮ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ನೀಡಿದ್ದಾರೆ. ಹೌದು ಕಳೆದ ವರ್ಷ ಏಪ್ರಿಲ್‌ನಲ್ಲಿ ಮದುವೆಯಾದ ನಟಿ ಕೌಸ್ತುಭ ಮಣಿ ಇದೀಗ ತಾವು ತಾಯಿಯಾಗುತ್ತಿರುವ ವಿಚಾರವನ್ನು ಅಭಿಮಾನಿಗಳಿಗೆ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಈ ವಿಚಾರವನ್ನು ತಿಳಿದು ಫ್ಯಾನ್ಸ್ ಅಂತೂ ಬಹಳ ಖುಷಿಪಟ್ಟಿದ್ದಾರೆ. ಶುಭಾಶಯಗಳ ಬಹುದೊಡ್ಡ ಸುರಿಮಳೆ ಕಮೆಂಟ್ ಸೆಕ್ಷನ್ ಮೂಲಕ ಸುರಿದಿದ್ದಾರೆ.

ಧಾರಾವಾಹಿ ಅಷ್ಟೇ ಅಲ್ಲದೆ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿರುವ ನಟಿ ಕೌಸ್ತುಭ ಮಣಿ, ಸಿಹಿ ಕಹಿ ಚಂದ್ರು ಅವರ ನೇತೃತ್ವದ ಬೊಂಬಾಟ್ ಭೋಜನ ರಿಯಾಲಿಟಿ ಶೋನಲ್ಲಿಯೂ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಓಟಿಟಿ ಪ್ಲಾಟ್ ಫಾರ್ಮ್‌ನಲ್ಲಿಯೂ ನಟಿ ಕೌಸ್ತುಭ ಮಣಿ ಸ್ಪರ್ಧಿಸಿದ್ದರು.

Nannarasi Radhe serial actress Kaustubha Mani is pregnant

ಅಂದ ಹಾಗೆ ನಟಿ ಕೌಸ್ತುಭ ಮಣಿ ಸದ್ಯಕ್ಕೆ ಧಾರಾವಾಹಿ ಇಂದ ಹೊರಗಿದ್ದರೂ ಸಹ ಒಂದು ಸಿನಿಮಾದಲ್ಲಿಯೂ ನಟಿಸಿದ್ದರು. ಡಾ. ಶಿವರಾಜಕುಮಾರ್ ಅಭಿನಯದ 45 ಎಂಬ ಚಿತ್ರದಲ್ಲಿ ನಟಿ ಕೌಸ್ತುಭ ಮಣಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣ ಅಷ್ಟೇ ಅಲ್ಲದೆ ರಾಜ್ ಬಿ ಶೆಟ್ಟಿ ಹಾಗೂ ಉಪೇಂದ್ರ ಅವರೂ ನಟಿಸಿದ್ದಾರೆ.

ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಅವರ ನಿರ್ದೇಶಕ ಮೊದಲ ಸಿನಿಮಾ ಇದಾಗಿದ್ದು ಇದರಲ್ಲಿ ಅವಕಾಶ ಪಡೆದಿರುವ ಕೌಸ್ತುಭ ಮಣಿ ಈ ಸಿನಿಮಾ ಮೂಲಕ ತಮ್ಮ ನಟನ ಕೆರಿಯರ್ ಗೆ ಬಹುದೊಡ್ಡ ಬ್ರೇಕ್ ಸಿಗುತ್ತದೆ ಎನ್ನುವ ಆಕಾಂಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅಂದ ಹಾಗೆ ಎರಡೂವರೆ ವರ್ಷದ ಹಿಂದೆಯೇ ಆರಂಭವಾದ 45 ಸಿನಿಮಾದ ಕೆಲಸಗಳು ಇನ್ನೇನು ಕೊನೆಯಾಗುತ್ತಿದ್ದು ಕಳೆದ ತಿಂಗಳಷ್ಟೇ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ.

ಪ್ರಸ್ತುತ ನಟಿ ಕೌಸ್ತುಭ ಮಣಿ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ಗೆ 142,000ಕ್ಕೂ ಹೆಚ್ಚು ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ. ಸದ್ಯಕ್ಕೆ ತಮ್ಮ ವೈವಾಹಿಕ ಜೀವನವನ್ನೇ ಹೆಚ್ಚು ಫೋಕಸ್ ಮಾಡಿರುವ ಈ ನಟಿ ಪತಿ ಸಿದ್ಧಾಂತ ಸತೀಶ್ ಅವರೊಂದಿಗೆ ವಿದೇಶ ಪ್ರವಾಸವನ್ನು ಮಾಡಿದ್ದಾರೆ. ಜೊತೆಗೆ ಕೌಸ್ತುಭ ಮಣಿ ಇದೀಗ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಹೊರ ಹಾಕಿದ್ದು ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದಾರೆ. ಸದ್ಯದಲ್ಲೇ ಇವರ ಮೊದಲ ಚಲನಚಿತ್ರ ಬಿಡುಗಡೆಯಾಗಲಿದ್ದು, ಕೌಸ್ತುಭ ಮಣಿ ಹಾಗೂ ಅವರ ಕುಟುಂಬಕ್ಕೆ ಡಬಲ್ ಧಮಾಕ ಎಂದರೆ ತಪ್ಪಾಗಲ್ಲ.

More from Filmibeat

English summary
Nannarasi Radhe serial actress Kaustubha Mani is pregnant:
Read more about: actress serial pregnant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X