ನಾರಾಯಣ ಮೂರ್ತಿ 'ಭಾರತದ ರಾಷ್ಟ್ರಪತಿ ಆಗ್ಬೇಕು' ಎನ್ನುವುದು ಇವರ ಆಸೆ
Recommended Video
ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಪತ್ನಿ ಸುಧಾಮೂರ್ತಿ ಉದ್ಯಮದಲ್ಲಿ ಮಾತ್ರವಲ್ಲ, ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆ ಮತ್ತು ಸುರಕ್ಷಿತೆಗಾಗಿ ಹಲವು ಅಭಿಯಾನಗಳ ಕೂಡ ಮಾಡಿದ್ದಾರೆ.
ರಾಜಕೀಯ ಕ್ಷೇತ್ರದಿಂದ ಸಂಪೂರ್ಣವಾಗಿ ದೂರವಿರುವ ನಾರಾಯಣ ಮೂರ್ತಿ ಮುದೊಂದು ದಿನ ಈ ದೇಶದ 'ರಾಷ್ಟ್ರಪತಿ ಆಗ್ಬೇಕು' ಎಂಬ ಆಸೆಯನ್ನ ಆಪ್ತರೊಬ್ಬರು ಹಂಚಿಕೊಂಡಿದ್ದಾರೆ.
ಹೌದು, ನಾರಾಯಣ ಮೂರ್ತಿ ಅವರ ಶಿಕ್ಷರಾಗಿದ್ದ ಸೀತಾರಂ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ನಾರಾಯಣ ಮೂರ್ತಿ ಅವರ ಬಗ್ಗೆ ಮೆಚ್ಚುಗೆ ಮತ್ತು ಹೆಮ್ಮೆಯ ಮಾತಗಳನ್ನಾಡಿದ ಅವರು ''ನಾರಾಯಣ ಮೂರ್ತಿ ಈ ದೇಶದ ರಾಷ್ಟ್ರಪತಿ ಆಗ್ಬೇಕು ಎನ್ನುವುದು ನನ್ನ ಆಸೆ'' ಎಂದು ಹೇಳಿಕೊಂಡರು.

ಇನ್ನು ತಮ್ಮ ಶಿಕ್ಷಕ ಸೀತಾರಾಂ ಅವರ ಬಗ್ಗೆ ಸಂತಸ ವ್ಯಕ್ತಪಡಿಸಿದ ನಾರಾಯಣ ಮೂರ್ತಿ ಅವರು ''ಸೀತಾರಾಂ ಅವರು ಅತ್ಯುತ್ತಮ ಶಿಕ್ಷರು. ಅದರಲ್ಲಿ ಯಾವುದೇ ಸಣ್ಣ ಅನುಮಾನವೂ ಇಲ್ಲ'' ಎಂದರು.

ಅದಕ್ಕೂ ಮುಂಚೆ ಸಾಧಕರ ಕುರ್ಚಿಯಲ್ಲಿ ಕೂತಿದ್ದ ನಾರಾಯಣ ಮೂರ್ತಿ ಅವರು, ತಮ್ಮ ಉಪನ್ಯಾಸಕ ಸೀತಾರಾಂ ಅವರು ಬಂದಿದ್ದನ್ನ ಗಮನಿಸಿ ಕುರ್ಚಿಯಿಂದ ಕೆಳಗೆ ಇಳಿದು ಬಂದು ಕಾಲಿಗೆ ನಮಸ್ಕಾರ ಮಾಡಿದರು.


Click it and Unblock the Notifications











