»   » ಸುವರ್ಣ ನ್ಯೂಸ್ ಚಾನಲ್ ನಲ್ಲಿ ಬೃಹತ್ 'ಬ್ರಹ್ಮಾಂಡ'

ಸುವರ್ಣ ನ್ಯೂಸ್ ಚಾನಲ್ ನಲ್ಲಿ ಬೃಹತ್ 'ಬ್ರಹ್ಮಾಂಡ'

Posted By:
Subscribe to Filmibeat Kannada
Brahmanda by Narendra Babu Sharma
ಸುದೀರ್ಘ ಸಮಯದ ಬಳಿಕ 'ಬೃಹತ್ ಬ್ರಹ್ಮಾಂಡ' ಖ್ಯಾತಿಯ ನರೇಂದ್ರ ಬಾಬು ಶರ್ಮ ಅವರು ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಈ ಬಾರಿ ಅವರು ನೇರವಾಗಿ ಸುವರ್ಣ 24x7 ನ್ಯೂಸ್ ಚಾನಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸುವರ್ಣ ನ್ಯೂಸ್ ಆರಂಭಿಸಿರುವ ಹೊಸ ಕಾರ್ಯಕ್ರಮಕ್ಕೆ 'ಬ್ರಹ್ಮಾಂಡ' ಎಂದು ಹೆಸರಿಡಲಾಗಿದೆ.

ಈ ಬಾರಿಯೂ ಸ್ವಾಮೀಜಿಗಳು ತಮ್ಮ ಅಖಂಡ 'ಬ್ರಹ್ಮಾಂಡ'ವನ್ನು ಬಿಚ್ಚಿಡಲಿದ್ದಾರೆ. ಸನಾತನ ಧರ್ಮ, ವಾಸ್ತು, ಪೂಜಾ ವಿಧಾನಗಳು, ದೇವಸ್ಥಾನಗಳ ಬಗ್ಗೆ ಸ್ವಾಮೀಜಿಗಳು ನಿರರ್ಗಳವಾಗಿ ಮಾತನಾಡಲಿದ್ದಾರೆ. ಸೋಮವಾರದಿಂದ ಶುಕ್ರವಾರದ ತನಕ ಪ್ರತಿನಿತ್ಯ ಸಂಜೆ 6.30ಕ್ಕೆ ಬ್ರಹ್ಮಾಂಡ ಕಾರ್ಯಕ್ರಮ ಪ್ರಸಾರವಾಗಲಿದೆ.

ಈಗಾಗಲೆ ಆರಂಭವಾಗಿರುವ ಬ್ರಹ್ಮಾಂಡ ಕಾರ್ಯಕ್ರಮವನ್ನು ನೀವು ಒಮ್ಮೆ ವೀಕ್ಷಿಸಿ ತಮ್ಮ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಈ ಹಿಂದೆ ಇದೇ ಸ್ವಾಮೀಜಿಗಳು ಜೀ ಕನ್ನಡ ವಾಹಿನಿಯಲ್ಲಿ ಬೃಹತ್ ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಈಗ ನರೇಂದ್ರ ಬಾಬು ಶರ್ಮ ಅವರು ನಡೆಸಿಕೊಡುವ ಬ್ರಹ್ಮಾಂಡ ಕಾರ್ಯಕ್ರಮವನ್ನು ಸುವರ್ಣ ನ್ಯೂಸ್ ಚಾನಲ್ ನಲ್ಲಿ ನೇರ ಪ್ರಸಾರ ಮಾಡಲಿದೆ. ಟಿವಿ ವಾಹಿನಿಗಳ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ್ದ ನರೇಂದ್ರ ಬಾಬು ಶರ್ಮ ಹಲವಾರು ಕಾರಣಗಳಿಗೆ ವಿವಾದಕ್ಕೆ ಗುರಿಯಾಗಿದ್ದರು.

ಜೀ ಕನ್ನಡ ವಾಹಿನಿಯಿಂದ ಹೊರಬಿದ್ದಿದ್ದ ಸ್ವಾಮೀಜಿಗಳು ಇಷ್ಟು ದಿನಗಳ ಕಾಲ ತಮ್ಮ ಚಿಕ್ಕಗೊಲ್ಲರಹಟ್ಟಿಯ ಜಗನ್ಮಾತ ನಿಲಯದ ಆಶ್ರಮದಲ್ಲೇ ಜ್ಯೋತಿಷ್ಯ, ಭವಿಷ್ಯ, ಗ್ರಹಚಾರ ಫಲಗಳನ್ನು ಹೇಳುತ್ತಿದ್ದರು. ಇನ್ನೇನು ಇವರನ್ನು ಜನ ಮರೆತೆ ಬಿಟ್ಟರೇನೋ ಎಂಬಂತಂತಹ ಪರಿಸ್ಥಿತಿಯಲ್ಲಿ ಇದೀಗ ಸುವರ್ಣ ನ್ಯೂಸ್ ಚಾನಲ್ ನಲ್ಲಿ ಪ್ರತ್ಯಕ್ಷವಾಗಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Narendra Babu Sharma is back to television. This programme is titled "Brahmanda" again, in which Sharma shares knowledge on Sanathana Dharma, Vasthu, Pooja Procedures, Temples etc. It is telecasted in Suvarna 24x7 News Channel at 06:30 PM from Monday to Friday.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada