For Quick Alerts
ALLOW NOTIFICATIONS
For Daily Alerts

ಋಷಿಕುಮಾರನ ಬಣ್ಣ ಬಯಲು ಮಾಡಿದ್ದೇ ನಾನು

By Rajendra

Next »

« Previous

ನನ್ನನ್ನು ಕಂಡರೆ ಋಷಿಕುಮಾರ ಗಡಗಡ ನಡುಗುತ್ತಾನೆ ಎಂದು ಶರ್ಮಾ ಬೇರೆಯರ ಮುಂದೆ ಜಂಭ ಕೊಚ್ಚಿಕೊಂಡರು. ಒಂಥರಾ ಉತ್ತರ ಕುಮಾರನ ಪೌರುಷ ಒಲೆ ಮುಂದೆ ಎಂಬಂತಿತ್ತು ಅವರ ಮಾತಿನ ವರಸೆ. ಈ ಋಷಿಕುಮಾರನನ್ನು ಟಿವಿ ವಾಹಿನಿಗಳಿಗೆ ಎಳೆದು ಅವನ ಬಣ್ಣ ಬಯಲು ಮಾಡಿದ್ದು ನಾನೇ ಎಂದೂ ಶರ್ಮಾ ಹೇಳಿಕೊಂಡರು.

ಋಷಿಕುಮಾರನಿಂದ ಎಷ್ಟು ದೂರ ಇದ್ದರೆ ಅಷ್ಟು ಒಳ್ಳೆಯದು ಎಂದು ಎಲ್ಲರಿಗೂ ಮತ್ತೊಮ್ಮೆ ಶರ್ಮಾ ಎಚ್ಚರಿಸಿದರು. ಬಳಿಕ ಕಾಳಿಕಾ ಮಠದ ಶ್ರೀಗಳು ಸ್ಪರ್ಧಿಗಳ ಜೊತೆಗೆ ಬೆರೆಯುವ ಪ್ರಯತ್ನ ಮಾಡಿದರು. "ನಿಮ್ಮ ಮನಸ್ಸು ಒಪ್ಪಿದರೆ ನನ್ನನ್ನು ಸ್ವಾಮೀಜಿ ಎಂದು ಕರೆಯಿರಿ. ಇಲ್ಲದಿದ್ದರೆ ನಿಮಗೆ ಏನು ತೋಚತ್ತೋ ಹಾಗೆ ಕರೆಯಿರಿ" ಎಂದು ಎಲ್ಲರ ಸೆಳೆಯುವ ಪ್ರಯತ್ನ ಮಾಡಿದರು.

ನಾನೂ ಸಾಮಾನ್ಯರಲ್ಲಿ ಸಾಮಾನ್ಯ. ಮಠದಲ್ಲಿ ಅಡುಗೆಯವರು ಯಾರೂ ಇಲ್ಲದಿದ್ದರೆ ನಾನೇ ಅಡುಗೆ ಮಾಡಿ ಬಂದವರಿಗೆ ಬಡಿಸುತ್ತಿದ್ದೆ. ಇಲ್ಲಿ ಅಡುಗೆ ಮಾಡುವುದರಲ್ಲಿ ತಪ್ಪೇನು ಇಲ್ಲ. ಇಷ್ಟು ದೊಡ್ಡ ಮನೆ ಕೊಟ್ಟಿದ್ದಾರೆ ಎಂದರೆ ಆರಾಮವಾಗಿ ಇದ್ದು ಬಿಡುತ್ತೇನೆ ಎಂದು ಹುಸಿ ನಗೆ ನಕ್ಕರು ಕಾಳಿಕಾ ಶ್ರೀ.

ನಾನ್ ವೆಜ್ ಬಗ್ಗೆ ಋಷಿಕುಮಾರ ಸ್ವಾಮೀಜಿ ಹೇಳಿದ್ದೇನೆಂದರೆ. ಅವರವರ ಇಷ್ಟ. ತಿನ್ನುವವರನ್ನು ನಾನು ವಿರೋಧಿಸುವುದಿಲ್ಲ ಎಂದರು. ನಮಗೆ ಬೇಡ ಅಂದ್ರೆ ಆಯ್ತಪ್ಪಾ ಎಂದರು. ಒಟ್ಟಿನಲ್ಲಿ ಅವರು ತಿಂತಾರೋ ಇಲ್ಲವೋ ಎಂಬುದು ಮಾತ್ರ ವೀಕ್ಷಕರಿಗೆ ಸ್ಪಷ್ಟವಾಗಲಿಲ್ಲ.

Next »

« Previous

English summary
Etv Kannada reality show 'Bigg Boss' 14th and 15th highlights. Narendra Babu Sharma seems to be very unhappy with Bigg Boss for bringing Rishi Kumar to the house. At every given opportunity, he was seen criticising the latter. He also advised a couple of housemates to stay away from him and seeded a fear of black magic

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X