ಅನುಶ್ರೀಯನ್ನು ಕಳ್ಳ ಮಿಂಡ್ರಿ ಎಂದ ಶರ್ಮಾ
ಮನೆಯಲ್ಲಿ ನಿಕಿತಾ ಬಗ್ಗೆ ಗುಸುಗುಸು ಮಾತುಗಳು ಶುರುವಾಗಿವೆ. ಅಯ್ಯೋ ಅವಳು ನೊಂದ ಹೆಣ್ಣುಮಗಳು. ಇಲ್ಲಿಗೆ ಬಂದು ಒಂದಷ್ಟು ದಿನ ಇದ್ದರೆ ಬದಲಾಗುತ್ತಾಳೆ ಬಿಡಿ. ಅವಳು ಸಿಗರೇಟ್ ಸೇದುವುದನ್ನೂ ಬಿಡುತ್ತಾಳೆ ಎಂದು ಅರುಣ್ ಹೇಳಿದ.
ಇನ್ನೊಂದು ಕಡೆ ಸಣ್ಣಪುಟ್ಟ ಸಂಗತಿಗಳಿಗೂ ನಗುತ್ತಿದ್ದ ಅನುಶ್ರೀ ಅವರನ್ನು ಹೇ ಸುಮ್ಮನಿರೆ ಕಳ್ಳ ಮಿಂಡ್ರಿ ಎಂದರು ನರೇಂದ್ರ ಬಾಬು ಶರ್ಮಾ. ಅವರ ಈ ಮಾತಿನಿಂದ ಯಾರೂ ಕೋಪಗೊಳ್ಳಲೂ ಇಲ್ಲ, ಬೇಸರಿಸಿಕೊಳ್ಳಲೂ ಇಲ್ಲ. ಬದಲಾಗಿ ಜೋರಾಗಿ ನಕ್ಕರು.

ಕಡೆಗೆ ರೋಸಿಹೋದ ಬ್ರಹ್ಮಾಂಡ ಶರ್ಮಾ ಅನ್ನದ ಋಣ, ನೀರಿನ ಋಣ, ಹೆಣ್ಣಿನ ಋಣವನ್ನು ಭಗವಂತ ಬರೆದಿರುತ್ತಾನೆ ಎಂದು ಏನೇನೋ ತನ್ನ ಪಾಡಿಗೆ ತಾನು ಹೇಳಿಕೊಂಡ. ಬಳಿಕ ತಾನು ಆರಾಧಿಸುವ ಅಮ್ಮನಲ್ಲಿ ಹೆಂಗಾದರೂ ಮಾಡಿ ತಮ್ಮನ್ನು ಇಲ್ಲೇ ಉಳಿಸುವಂತೆ ಮಾಡಮ್ಮಾ ಎಂದು ಬೇಡಿಕೊಂಡರು.
ಈ ಎಲ್ಲಾ ಜಂಜಾಟಗಳ ನಡುವೆ ಬಿಗ್ ಬಾಸ್ ಇನ್ನೊಂದು ಪರೀಕ್ಷೆಯನ್ನೂ ಇಟ್ಟ. ಅದೇನೆಂದರೆ ನಾಮಿನೇಷನ್ ಪ್ರಕ್ರಿಯೆ. ಈ ಬಾರಿ ಮೂವರು ಸದಸ್ಯರು ನಾಮಿನೇಟ್ ಆಗಿದ್ದಾರೆ. ಬ್ರಹ್ಮಾಂಡ ಶರ್ಮಾ ಅವರಿಗೆ ಐದು ಓಟುಗಳು, ನಿಕಿತಾ ಹಾಗೂ ರಿಷಿಕಾ ಸಿಂಗ್ ಅವರಿಗೆ ತಲಾ ಮೂರು ಓಟುಗಳು ಬಿದ್ದು ಇವರು ಮೂವರು ನಾಮಿನೇಟ್ ಆಗಿದ್ದಾರೆ.


Click it and Unblock the Notifications











