ಸುವರ್ಣ ವಾಹಿನಿಯಿಂದಲೂ ಕಂಬಿ ಕಿತ್ತ ಬ್ರಹ್ಮಾಂಡ

ಈಗ ಅಲ್ಲಿಂದಲೂ ಏಕಾಏಕಿ ಕಾಣೆಯಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ವೀಕ್ಷಕರಿಂದ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತವಾಗಿದ್ದೇ ಶರ್ಮ ಅವರು ಕಂಬಿ ಕೀಳಲು ಕಾರಣ ಎನ್ನಲಾಗಿದೆ. ಸುವರ್ಣ ನ್ಯೂಸ್ ಆರಂಭಿಸಿರುವ ಹೊಸ ಕಾರ್ಯಕ್ರಮಕ್ಕೆ 'ಬ್ರಹ್ಮಾಂಡ' ಎಂದು ಹೆಸರಿಡಲಾಗಿದೆ.
ಈ ಹಿಂದೆ ನರೇಂದ್ರ ಬಾಬು ಶರ್ಮ ಅವರು ಕಸ್ತೂರಿ ವಾಹಿನಿಯಲ್ಲಿ ಬ್ರಹ್ಮಾಂಡ, ಸುವರ್ಣ ವಾಹಿನಿಯಲ್ಲಿ ಭವ್ಯ ಬ್ರಹ್ಮಾಂಡ ಹಾಗೂ ಜೀ ಕನ್ನಡದಲ್ಲಿ ಬೃಹತ್ ಬ್ರಹ್ಮಾಂಡ ಎಂಬ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಸ್ವಲ್ಪ ವಿರಾಮದ ಬಳಿಕ ಅವರು ಸುವರ್ಣ ನ್ಯೂಸ್ ಚಾನಲ್ ಗೆ ಪಾದಾರ್ಪಣೆ ಮಾಡಿದ್ದರು.
"ಹೆಣ್ಣು ಮಕ್ಕಳು ನೈಟಿ ತೊಡಬಾರದು. ಸಲ್ವಾರ್ ಕಮೀಜ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ರಾತ್ರಿ ಗಂಡನ ಜತೆ ಮಲಗಿ ಬೆಳಿಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗಬಾರದು. ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಲಕ್ಷಣ. ಅಗಲವಾದ ಬಿಂದಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಬೂಬಮ್ಮಗಳ ಹಾಗೆ ಕಾಣುತ್ತೀರಿ. (ಬೂಬಮ್ಮ ಎಂದರೆ ಮುಸ್ಲಿಂ ಹೆಂಗಸು)...
ಇಡೀ ಜಗತ್ತು ಮುಳುಗಿ ಹೋಗುತ್ತದೆ, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿದುಕೊಳ್ಳುತ್ತದೆ. ಪಾಪಿಗಳು ಮಾಡಿದ ತಪ್ಪಿಗಾಗಿ ಪಾಪಿಗಳಲ್ಲದವರೂ ನಾಶವಾಗುತ್ತಾರೆ. ಹಾವು ಎಂದರೆ ದೇವರು. ಜಪಾನ್ ದೇಶದವರು ಹಾವು ತಿನ್ನುತ್ತಾರೆ, ಅದಕ್ಕೆ ಸುನಾಮಿ ಬಂದಿದ್ದು.." .ಹಾಗೆ ಹೀಗೆ ಎಂದು ಹೇಳಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು ಶರ್ಮ.
ಈಗ ಸುವರ್ಣ ನ್ಯೂಸ್ ಚಾನಲ್ ನಿಂದಲೂ ಕಾಲ್ಕಿತ್ತಿರುವ ನರೇಂದ್ರ ಬಾಬು ಶರ್ಮ ಅವರು ಮತ್ತಿನ್ಯಾವ ಚಾನಲ್ ನಲ್ಲಿ ಪ್ರತ್ಯಕ್ಷರಾಗುತ್ತಾರೋ ಎಂದು ಜನರ ಊಹೆಗೂ ನಿಲುಕುತ್ತಿಲ್ಲ. ಅವರು ಯಾವುದೇ ಚಾನಲ್ ನಲ್ಲಿ ಯಾವುದೇ ರೂಪದಲ್ಲಿ ಪ್ರತ್ಯಕ್ಷರಾದರೂ 'ಬ್ರಹ್ಮಾಂಡ'ದಷ್ಟೇ ಬೃಹತ್ ಆದ ಅವರು ಜನರ ಕಣ್ಣಿಗೆ ಬಿದ್ದೇ ಬೀಳುತ್ತಾರೆ ಬಿಡಿ.


Click it and Unblock the Notifications











