ಅತಿಯಾದ ಆತ್ಮವಿಶ್ವಾಸದಿಂದ 'ಕೋಟ್ಯಧಿಪತಿ' ಆಟ ಸೋತ ನರೇಂದ್ರ
ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿಯ ಮೂರನೇ ವಾರವೂ ಮುಗಿದಿದೆ. ಮೊದಲ ದಿನ ಒಬ್ಬರೇ ಆಟ ಆಡಿದ್ರೆ ಎರಡನೇ ವಾರ ನಾಲ್ಕು ಜನ ಹಾಟ್ ಸೀಟ್ ನಲ್ಲಿ ಕೂರುವ ಅವಕಾಶ ಪಡೆದುಕೊಂಡರು. ಈ ವಾರದ ಪ್ರಮುಖ ಆಕರ್ಷಣೆಯಾಗಿದ್ದು ತಿಪಟೂರು ಮೂಲದ ದಂಪತಿ.
ಗಂಡ ಮತ್ತು ಹೆಂಡತಿ ಇಬ್ಬರು ಕೋಟ್ಯಧಿಪತಿ ಆಟ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಎರಡನೇ ದಿನ ಮೊದಲ ಸ್ಪರ್ಧಿ ವಿಕಾಸ್ ಕೇವಲ ಹತ್ತು ಸಾವಿರ ಗೆದ್ದು ಆಟ ಮುಗಿಸಿದ. ನಂತರ ಬಂದ ಸ್ಪರ್ಧಿ ಜ್ಯೋತಿ ಕೂಡ ಹತ್ತು ಸಾವಿರಕ್ಕೆ ಸುಸ್ತಾದರು.
ಬಳಿಕ ಕೋಟ್ಯಧಿಪತಿಯ ಹಾಟ್ ಸೀಟ್ ಗೆ ಆಯ್ಕೆಯಾದ ಹಿರಿಯ ನಾಗರಿಕ ನರೇಂದ್ರನಾಥ್ ಬಹಳ ಹುಮ್ಮಸ್ಸಿನಿಂದ ಆಟ ಶುರು ಮಾಡಿದರು. ಆದರೆ, ಅಷ್ಟೇ ಬೇಗ ಆಟದಿಂದ ನಿರ್ಗಮಿಸಿದರು. ಅಷ್ಟಕ್ಕೂ, ನರೇಂದ್ರನಾಥ್ ಗೆದ್ದ ಹಣವೆಷ್ಟು? ಮುಂದೆ ಓದಿ.....

ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ
ಕನ್ನಡದ ನಾಣ್ಣುಡಿಯೊಂದು ಬರುವ ಹಾಗೆ ಈ ಪದಗಳನ್ನು ಸರಿಯಾಗಿ ಜೋಡಿಸಿ?
A ಕೋಣರಲ್ಲ
B ಚಿಕ್ಕವರೆಲ್ಲಾ
C ದೊಡ್ಡವರೆಲ್ಲಾ
D ಜಾಣರಲ್ಲ
ಸರಿಯಾದ ಉತ್ತರ: C ದೊಡ್ಡವರೆಲ್ಲಾ, D ಜಾಣರಲ್ಲ, B ಚಿಕ್ಕವರೆಲ್ಲಾ, A ಕೋಣರಲ್ಲ
ಅತಿ ವೇಗವಾಗಿ ಉತ್ತರಿಸಿದ ನರೇಂದ್ರನಾಥ್ ಹಾಟ್ ಸೀಟ್ ಗೆ ಬಂದಿದ್ದರು.

ಆರಕ್ಕೆ ಸುಸ್ತಾದರು ನರೇಂದ್ರ
ಕನ್ನಡದ ಕೋಟ್ಯಧಿಪತಿ ಶೋನಲ್ಲಿ ಭಾಗವಹಿಸಬೇಕು ಎಂಬುದು ನರೇಂದ್ರ ಅವರಿಗೆ ಬಹಳ ವರ್ಷಗಳ ಆಸೆ. ನಾಲ್ಕನೇ ಆವೃತ್ತಿಯಲ್ಲಿ ಆ ಆಸೆ ನೆರವೇರಿದೆ. ಆದ್ರೆ, ಆ ಖುಷಿ ಹೆಚ್ಚು ಸಮಯ ಇರಲಿಲ್ಲ. ಯಾಕಂದ್ರೆ, ಕೇವಲ ಆರು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ ಏಳನೇ ಪ್ರಶ್ನೆಗೆ ತಪ್ಪು ಉತ್ತರ ನೀಡಿ ಆಟದಿಂದ ನಿರ್ಗಮಿಸಿದರು.

ಯಾವುದು ಆ ಏಳನೇ ಪ್ರಶ್ನೆ?
ಭಾರತೀಯ ಬಾಹ್ಯಾಕಾಶಕ್ಕೆ ಕಳಿಸಲೆಂದು ಪ್ರಾರಂಭವಾದ ಇಸ್ರೋದ ಯೋಜನೆ ಯಾವುದು?
A ಚಂದ್ರಯಾನ
B ಮಂಗಲಯಾನ
C ಮನುಷ್ಯಯಾನ
D ಗಗನಯಾನ

ಕನ್ ಫ್ಯೂಸ್ ಆದ ನರೇಂದ್ರ
ಯಾವುದೇ ಲೈಫ್ ಲೈನ್ ಬಳಸದೆ ಆರು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದ ನರೇಂದ್ರ ಅವರು ಏಳನೇ ಪ್ರಶ್ನೆಗೆ ಕನ್ ಫ್ಯೂಸ್ ಮಾಡಿಕೊಂಡರು. ಗೊಂದಲ ಇದ್ದರೂ ಖಚಿತ ಉತ್ತರ ಇದೇ ಎಂದು ಹೇಳಿದ್ರು. ಆದ್ರೆ, ಅದು ತಪ್ಪು ಉತ್ತರ ಆಗಿತ್ತು. ನರೇಂದ್ರ ಅವರು A ಚಂದ್ರಯಾನ ಹೇಳಿದ್ದರು. ಸರಿ ಉತ್ತರ D ಗಗನಯಾನ ಆಗಿತ್ತು. ಅಲ್ಲಿಗೆ ಹತ್ತು ಸಾವಿರ ಸಿಕ್ಕಿದ್ದೇ ಹೆಚ್ಚು.


Click it and Unblock the Notifications











