ಬಿಗ್ ಬಾಸ್ ಮನೆಯಲ್ಲಿ ದೊಡ್ಡವರ ಸಣ್ಣತನ ಬಯಲು
ಅಡುಗೆ ಮನೆಗೆ ಹೋದ ಋಷಿಕುಮಾರ ಅಲ್ಲಿನ ಇಂಡಕ್ಷನ್ ಒಲೆಯನ್ನು ಕೈಗೆತ್ತಿಕೊಂಡು ಇದನ್ನೂ ತೆಗೆದುಕೊಂಡು ಹೋಗುತ್ತೇನೆ ಎಂದರು. ಇನ್ನೊಂದಿಷ್ಟು ಸಲುಗೆ ಕೊಟ್ಟಿದ್ದರೆ ಮನೆಯೇ ಮಠ ಮಾಡಿಕೊಟ್ಟು ಬಿಡಿ ಎನ್ನುತ್ತಿದ್ದರೋ ಏನೋ?
ಸಂಜನಾ ಸಹ ಅಷ್ಟೇ ಮೈಕ್ರೋವೇವ್ ಓವೆನ್ ಕೈಗೆತ್ತಿಕೊಂಡರು. ಇದು ನನಗೆ ಬೇಕು ಎಂದು. ಇವರಿಬ್ಬರ ವರಸೆಯನ್ನು ನೋಡಿದ ಬಿಗ್ ಬಾಸ್. ಈ ಮನೆಯ ಯಾವುದಾದರೂ ಒಂದು ಭಾವನಾತ್ಮಕವಾದ ವಸ್ತುವನ್ನು ಎತ್ತಿಕೊಂಡು ಹೋಗಲು ಹೇಳಿದ್ದೆವು. ಆದರೆ ನೀವು ನಮಗೆ ಅವಮಾನ ಮಾಡಿದಿರಿ. ಹಾಗಾಗಿ ನಿಮಗೆ ಏನೂ ಕೊಡುತ್ತಿಲ್ಲ. ನೀವಿನ್ನು ನಿರ್ಗಮಿಸಬಹುದು ಎಂದು ಹೇಳಿ ಮುಖಕ್ಕೆ ಮಂಗಳಾರತಿ ಮಾಡಿದರು.

ನಿಕಿತಾರನ್ನು ಯಾವುದೇ ಕಾರಣಕ್ಕೂ ಗೆಲ್ಲಿಸಬಾರದು ಎಂದು ವಿನಾಯಕ ಜೋಷಿ ಮುಖಕ್ಕ್ಕೆ ಹೊಡೆದಂತೆ ಹೇಳಿದ ಮಾತುಗಳಿಗೆ ನಿಕಿತಾ ಕಣ್ಣೀರಿಟ್ಟರು. ವಿಜಯ್ ಬಿಸಿಯಪ್ಪುಗೆಯಲ್ಲೇ ಸಮಾಧಾನಪಡಿಸಿದರು. ಬಿಗ್ ಬಾಸ್ ಕೊಟ್ಟಂತಹ ಸಿಮ್ ಇಲ್ಲದ ಮೊಬೈಲ್ ಫೋನ್ ನಲ್ಲಿ ಎಲ್ಲರೂ ಮನೆಯ ಮಧುರ ನೆನಪುಗಳನ್ನು ಸೆರೆಹಿಡಿದರು.
ಅರುಣ್ ಸಾಗರ್ ಅವರು ಗೇಟಿನಿಂದ ಆರಂಭಿಸಿದರೆ, ವಿಜಯ್ ರಾಘವೇಂದ್ರ ಲಿವಿಂಗ್ ಏರಿಯಾದಿಂದ ಸೆರೆಹಿಡಿದರು. ಇನ್ನು ನಿಕಿತಾ ಹಾಗೂ ಬ್ರಹ್ಮಾಂಡ ಶರ್ಮಾ ಅವರು ಬೆಡ್ ರೂಮಿನಿಂದಲೇ ಮಧುರ ನೆನಪಿನ ಚಿತ್ರಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡರು. ಅಲ್ಲಿಗೆ ಮನೆಯಲ್ಲಿನ ಅವರ ವಾಸದ ಕೊನೆಯ ದಿನ ಮುಗಿದಿತ್ತು.


Click it and Unblock the Notifications











