ಟಿವಿಯಲ್ಲಿ ಬರ್ತಿದೆ 'ನಟ ಸಾರ್ವಭೌಮ' ಸಿನಿಮಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಸಿನಿಮಾ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದೆ. ಜೀ ಕನ್ನಡ ವಾಹಿನಿ ಚಿತ್ರದ ಪ್ರಸಾರ ಹಕ್ಕುನ್ನು ಖರೀದಿ ಮಾಡಿದ್ದು, ಸಿನಿಮಾವನ್ನು ಪ್ರಸಾರ ಮಾಡುತ್ತಿದೆ.

'ನಟ ಸಾರ್ವಭೌಮ' ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆಯಾಗಿ ಇತ್ತೀಚಿಗಷ್ಟೆ ಐವತ್ತು ದಿನವನ್ನು ಪೂರೈಸಿತ್ತು. ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ, ಹಾಸನ ಹೀಗೆ ಅನೇಕ ಜಿಲ್ಲೆಗಳಲ್ಲಿ ಸಿನಿಮಾ ಇನ್ನೂ ಪ್ರದರ್ಶನ ಆಗುತ್ತಿದೆ.

ಈ ಸಿನಿಮಾ ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದೆ. ಸಿನಿಮಾದ ಪ್ರೋಮೊ ಹಾಕುವ ಮೂಲಕ ಚಿತ್ರದ ಪ್ರಸಾರದ ವಿಷಯವನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಶೀಘ್ರದಲ್ಲೇ ಸಿನಿಮಾ ಪ್ರಸಾರ ಆಗುತ್ತದೆ ಎಂದು ತಿಳಿಸಿದ್ದು, ಯುಗಾದಿ ಹಬ್ಬಕ್ಕೆ ಚಿತ್ರದ ಪ್ರಸಾರ ಆಗಬಹುದು ಎಂಬ ನಿರೀಕ್ಷೆ ಇದೆ.

nata sarvabhouma kannada movie will be telecasting in zee kannada soon

ಅಂದಹಾಗೆ, 'ನಟ ಸಾರ್ವಭೌಮ ಮೂಲಕ ಪುನೀತ್ ಮೊದಲ ಬಾರಿಗೆ ಹಾರರ್ ಟಚ್ ಇರುವ ಸಿನಿಮಾದಲ್ಲಿ ನಟಿಸಿದ್ದರು. ಪವನ್ ಒಡೆಯರ್ ಎರಡನೇ ಬಾರಿ ಪುನೀತ್ ಗೆ ನಿರ್ದೇಶನ ಮಾಡಿದ್ದರು. ರಾಕ್ ಲೈನ್ ವೆಂಕಟೇಶ್ ಚಿತ್ರದ ನಿರ್ಮಾಣ ಮಾಡಿದ್ದರು.

ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಚಿತ್ರದ ನಾಯಕಿಯರಾಗಿದ್ದರು. ಅನುಪಮ ಅವರ ಕನ್ನಡದ ಮೊದಲ ಸಿನಿಮಾ ಇದಾಗಿದ್ದು, ಅವರ ಪಾತ್ರಕ್ಕೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿತ್ತು.

More from Filmibeat

English summary
Power Star Puneeth Rajkumar's 'Nata Sarvabhouma 'kannada movie will be telecasting in Zee Kannada soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X