Don't Miss!
- News ಮಾಜಿ ಶಾಸಕ ಎಂ. ಕೃಷ್ಣಾರೆಡ್ಡಿ ವಿರುದ್ಧದ ಪ್ರಕರಣಕ್ಕೆ ಕೋರ್ಟ್ ತಡೆ
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Finance ರಿಲಯನ್ಸ್ ಇಂಡಸ್ಟ್ರೀಸ್ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಪ್ರಕಟ; ನಿವ್ವಳ ಲಾಭ 18,951 ಕೋಟಿ ರೂಪಾಯಿ
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Technology ಇಂದು ಮೊಟೊ G64 5G ಫೋನ್ ಫಸ್ಟ್ ಸೇಲ್!..ಈ ಫೋನಿನ ಪ್ಲಸ್ ಪಾಯಿಂಟ್ ಏನು?
- Automobiles ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟಿವಿಯಲ್ಲಿ ಬರ್ತಿದೆ 'ನಟ ಸಾರ್ವಭೌಮ' ಸಿನಿಮಾ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಸಿನಿಮಾ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದೆ. ಜೀ ಕನ್ನಡ ವಾಹಿನಿ ಚಿತ್ರದ ಪ್ರಸಾರ ಹಕ್ಕುನ್ನು ಖರೀದಿ ಮಾಡಿದ್ದು, ಸಿನಿಮಾವನ್ನು ಪ್ರಸಾರ ಮಾಡುತ್ತಿದೆ.
'ನಟ ಸಾರ್ವಭೌಮ' ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆಯಾಗಿ ಇತ್ತೀಚಿಗಷ್ಟೆ ಐವತ್ತು ದಿನವನ್ನು ಪೂರೈಸಿತ್ತು. ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ, ಹಾಸನ ಹೀಗೆ ಅನೇಕ ಜಿಲ್ಲೆಗಳಲ್ಲಿ ಸಿನಿಮಾ ಇನ್ನೂ ಪ್ರದರ್ಶನ ಆಗುತ್ತಿದೆ.
Nata Sarvabhouma Review : ಅಪ್ಪು ಪವರ್ ಫುಲ್.. ಸಿನಿಮಾ ಸಕ್ಸಸ್ ಫುಲ್..
ಈ ಸಿನಿಮಾ ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದೆ. ಸಿನಿಮಾದ ಪ್ರೋಮೊ ಹಾಕುವ ಮೂಲಕ ಚಿತ್ರದ ಪ್ರಸಾರದ ವಿಷಯವನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಶೀಘ್ರದಲ್ಲೇ ಸಿನಿಮಾ ಪ್ರಸಾರ ಆಗುತ್ತದೆ ಎಂದು ತಿಳಿಸಿದ್ದು, ಯುಗಾದಿ ಹಬ್ಬಕ್ಕೆ ಚಿತ್ರದ ಪ್ರಸಾರ ಆಗಬಹುದು ಎಂಬ ನಿರೀಕ್ಷೆ ಇದೆ.
ಅಂದಹಾಗೆ, 'ನಟ ಸಾರ್ವಭೌಮ ಮೂಲಕ ಪುನೀತ್ ಮೊದಲ ಬಾರಿಗೆ ಹಾರರ್ ಟಚ್ ಇರುವ ಸಿನಿಮಾದಲ್ಲಿ ನಟಿಸಿದ್ದರು. ಪವನ್ ಒಡೆಯರ್ ಎರಡನೇ ಬಾರಿ ಪುನೀತ್ ಗೆ ನಿರ್ದೇಶನ ಮಾಡಿದ್ದರು. ರಾಕ್ ಲೈನ್ ವೆಂಕಟೇಶ್ ಚಿತ್ರದ ನಿರ್ಮಾಣ ಮಾಡಿದ್ದರು.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಇತ್ತೀಚೆಗಷ್ಟೇ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ ' ನಟಸಾರ್ವಭೌಮ'! ಅತೀ ಶೀಘ್ರದಲ್ಲಿ.#ZeeKannada #Natasarvabouma #PuneetRajkumar #RachitaRam #Rocklineproductions #Comingsoon pic.twitter.com/Pnxdjtjsiq
— Zee Kannada (@ZeeKannada) March 31, 2019
'ನಟ ಸಾರ್ವಭೌಮ'ನ ಆತ್ಮದ ಆಟಕ್ಕೆ ಮನಸೋತ್ರಾ ವಿಮರ್ಶಕರು.?
ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಚಿತ್ರದ ನಾಯಕಿಯರಾಗಿದ್ದರು. ಅನುಪಮ ಅವರ ಕನ್ನಡದ ಮೊದಲ ಸಿನಿಮಾ ಇದಾಗಿದ್ದು, ಅವರ ಪಾತ್ರಕ್ಕೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿತ್ತು.