ಜಗ್ಗೇಶ್ ಹತ್ರ ಕಾಸ್ ಇಲ್ವಾ, ಟೋಕನ್ ಹಾಕಿಯೇ ಹಣ ಮಾಡಬೇಕಾ?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಕಿರುತೆರೆ ಪ್ರೇಕ್ಷಕರ ಹಾಟ್ ಫೇವರಿಟ್ ಕಾರ್ಯಕ್ರಮ. ಅಪ್ಪು ನಡೆಸಿಕೊಡುವ ಕಾರ್ಯಕ್ರಮ ಎನ್ನುವ ಖುಷಿ ಒಂದೆಡೆ ಆದ್ರೆ ಕಲಿಕೆಯ ದೃಷ್ಟಿಯಿಂದ ಇದೊಂದು ಉತ್ತಮವಾದ ಕಾರ್ಯಕ್ರಮ.
ಮನರಂಜನೆಯ ಜೊತೆಗೆ ಜ್ಞಾನವನ್ನೂ ಹೆಚ್ಚಿಸಿಕೊಳ್ಳುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ನವರಸ ನಾಯಕ ಜಗ್ಗೇಶ್ ಎಂಟ್ರಿ ಕೊಟ್ಟಿದ್ದಾರೆ. ಜಗ್ಗೇಶ್ ಇದಾರೆ ಅಂದ್ಮೇಲೆ ಅಲ್ಲಿ ಹಾಸ್ಯಕ್ಕೇನು ಬರ ಇಲ್ಲ. ಹಾಗಾಗಿ ಈ ವಾರ ಪ್ರಸಾರವಾಗುವ ಕೋಟ್ಯಧಿಪತಿಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ವಾರದ ವಿಶೇಷ ಅಂದ್ರೆ ಕನ್ನಡದ ಕೋಟ್ಯಧಿಪತಿಯಲ್ಲಿ ಒಂದು ದಿನ ಜಗ್ಗೇಶ್ ಕಾಣಿಸಿಕೊಂಡರೆ ಮತ್ತೊಂದು ದಿನ ಬಿಜೆಪಿಯ ನಾಯಕರಿಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ.

ಎರಡನೆ ಬಾರಿ ಕೋಟ್ಯಧಿಪತಿ ವೇದಿಕೆ ಏರಿದ ಜಗ್ಗೇಶ್
ಕನ್ನಡದ ಕೋಟ್ಯಧಿಪತಿ ಸೀಸನ್ 4 ನಡೆಯುತ್ತಿದೆ. ಮೊದಲೆರಡು ಸೀಸನ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಟ್ಟಿದ್ದರು. ಪುನೀತ್ ನಡೆಸಿಕೊಟ್ಟಿದ್ದ ಶೋನಲ್ಲಿ ನವರಸ ನಾಯಕ ಜಗ್ಗೇಶ್ ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ ಜಗ್ಗೇಶ್ 3,20,000 ಗೆದ್ದಿದ್ದರು. ಈಗ ಮತ್ತೆ ಎರಡನೆ ಬಾರಿ ಕೋಟ್ಯಧಿಪತಿ ಹಾಟ್ ಸೀಟ್ ಏರಿದ್ದಾರೆ.

ನೀರಿಗಾಗಿ ಜಗ್ಗೇಶ್ ಆಟ
ಮನರಂಜನೆಯ ಜೊತೆಗೆ ಒಂದೊಳ್ಳೆ ಉದ್ದೇಶಕ್ಕಾಗಿ ಜಗ್ಗೇಶ್ ಎರಡನೆ ಬಾರಿ ಕೋಟ್ಯಧಿಪತಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಈ ಬಾರಿ ಜಗ್ಗೇಶ್ ನೀರಿಗಾಗಿ ಆಡುತ್ತಿದ್ದಾರೆ. ಈ ಮೂಲಕ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಜನರ ಕಷ್ಟಕ್ಕೆ ನಿಂತಿದ್ದಾರೆ ಜಗ್ಗೇಶ್. ನೀರಡಿಕೆಯ ಪರಿಹಾರಕ್ಕಾಗಿ ಜಗ್ಗೇಶ್ ಪವರ್ ಸ್ಟಾರ್ ಕೇಳುವ ಪ್ರಶ್ನಗೆ ಉತ್ತರಿಸಲಿದ್ದಾರೆ. ಈ ಬಾರಿ ಜಗ್ಗೇಶ್ ಎಷ್ಟು ಹಣ ಗೆಲ್ಲಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

ಟೋಕನ್ ಹಾಕಿಯೇ ಕಾಸ್ ಮಾಡಬೇಕಾ?
ಜಗ್ಗೇಶ್ ಇದ್ದಮೇಲೆ ಅಲ್ಲಿ ಮನರಂಜನೆಗೆ ಚೌಕಾಸಿ ಇಲ್ಲ. ಮನರಂಜನೆಯ ಜೊತೆಗೆ ನೀರಿಗಾಗಿ ಆಟ ಆಡುತ್ತಿರುವ ಜಗ್ಗೇಶ್ ಹಾಟ್ ಸೀಟಿನಲ್ಲಿ ಕುಳಿತು ಶಾಕಿಂಗ್ ಹೇಳಿಕೆ ನೀಡಿದ್ದಾರೆ. "ಜಗ್ಗೇಶ್ ಹತ್ರ ಹಣ ಇಲ್ವಾ? ಇಲ್ಲಿಗೆ ಬಂದು ಟೋಕನ್ ಹಾಕಿಯೆ ಕಾಸ್ ಮಾಡಬೇಕಾ ಎಂದು ಅಂದ್ಕೊಡ್ರೆ ಕಷ್ಟ" ಎಂದು ಹೇಳಿದ್ದಾರೆ. "ಪವರ್ ಸ್ಟಾರ್ ಗೋಸ್ಕರ ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಮುಂದಿನದು ನೀವು ರುಬ್ಬಬೇಕು" ಅಂತ ಪಕ್ಕ ಜಗ್ಗೇಶ್ ಶೈಲಲ್ಲೆ ಡೈಲಾಗ್ ಹೇಳಿ ನಗಿಸಿದ್ದಾರೆ.

ಹಾಟ್ ಸೀಟಲ್ಲಿ ಬಿಜೆಪಿ ಯಂಗ್ ಲೀಡರ್ಸ್
ಬಿಜೆಪಿಯ ಇಬ್ಬರು ನಾಯಕರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಪ್ರವಾಹ ಸಂತ್ರಸ್ತರಿಗಾಗಿ ಆಡುತ್ತಿದ್ದಾರೆ. ಪ್ರವಾಹದಲ್ಲಿ ಕೊಚ್ಚಿಹೋದ ಕನಸುಗಳಿಗೆ ಜೀವ ತುಂಬಲು ಇವರಿಬ್ಬರು ಹಾಟ್ ಸೀಟಿನಲ್ಲಿ ಕುಳಿತು ಪವರ್ ಸ್ಟಾರ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಉಂಟಾದ ಬೀಕರ ಪ್ರವಾಹದಿಂದ ಬದುಕು ಕಳೆದುಕೊಂಡವರ ಕಷ್ಟಕ್ಕೆ ನೆರವಾಗಲು ಇಬ್ಬರು ಹಟ್ ಸೀಟ್ ಏರಿದ್ದಾರೆ. ಇಲ್ಲಿ ಗೆದ್ದ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದಾರೆ.


Click it and Unblock the Notifications











