»   » ನವರಾತ್ರಿ ವಿಶೇಷ: ಕಲರ್ಸ್ ಕನ್ನಡ ವಾಹಿನಿಯಲ್ಲಿ 'ನವರಾತ್ರಿ ನವಶಕ್ತಿ'

ನವರಾತ್ರಿ ವಿಶೇಷ: ಕಲರ್ಸ್ ಕನ್ನಡ ವಾಹಿನಿಯಲ್ಲಿ 'ನವರಾತ್ರಿ ನವಶಕ್ತಿ'

Posted By:
Subscribe to Filmibeat Kannada

ನವರಾತ್ರಿ, ದುರ್ಗಾಪೂಜೆ ಸಂಭ್ರಮದಲ್ಲಿ ಇಡೀ ದೇಶವೇ ಮಿಂದೇಳುತ್ತಿದೆ. ದುರ್ಗೆಯ ಅವತಾರವನ್ನು ಸಾರುವ ವಿಗ್ರಹಗಳು, ದುರ್ಗಾ ಮಾತೆ ಎದುರು ಭಕ್ತರ ನೃತ್ಯ, ಮೆರವಣಿಗೆ, ಭಕ್ತಿಗೀತೆ, ಘೋಷಣೆಗಳು ನವರಾತ್ರಿಯ ವಿಶೇಷ.

ಈ ನವರಾತ್ರಿಗೆ ಇನ್ನಷ್ಟು ಮೆರುಗು ನೀಡಲು ಕಲರ್ಸ್ ಕನ್ನಡ ವಾಹಿನಿಯಲ್ಲಿ 'ನವರಾತ್ರಿ ನವಶಕ್ತಿ' ಎಂಬ ವಿಶೇಷ ಕಾರ್ಯಕ್ರಮ ಪ್ರಸಾರ ಆಗಲಿದೆ. ನವರಾತ್ರಿಯ ಒಂಬತ್ತೂ ದಿನಗಳು 'ನವರಾತ್ರಿ ನವಶಕ್ತಿ' ರಾತ್ರಿ 10 ಗಂಟೆಗೆ ಪ್ರಸಾರವಾಗಲಿದ್ದು, ಮನೆಮನೆಯಲ್ಲಿ ದೇವಿಯರನ್ನು ನೋಡುವ ಸದಾವಕಾಶ ನಿಮ್ಮದು.

Navarathri Special: Navashakthi Navarathri in Colors Kannada

'ಕುಲವಧು' ಧನ್ಯಾ, 'ಪುಟ್ಟಗೌರಿ ಮದುವೆ'ಯ ಗೌರಿ, 'ಲಕ್ಮೀ ಬಾರಮ್ಮ' ಧಾರಾವಾಹಿಯಿಂದ ಲಚ್ಚಿ, ಗೊಂಬೆ, 'ಪದ್ಮಾವತಿ'ಯ ತುಳಸಿ, 'ರಾಧಾರಮಣ'ದ ಆರಾಧನಾ, 'ಅಗ್ನಿಸಾಕ್ಷಿ'ಯ ಸನ್ನಿಧಿ, 'ಕಿನ್ನರಿ'ಯ ಮಣಿ, 'ಅಕ್ಕ' ಧಾರಾವಾಹಿಯ ಭೂಮಿಕಾ ಈ ನವ ಕಲಾವಿದರು ನವದುರ್ಗಿಯ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ.

ಪ್ರತಿ ದಿನದ ಸಂಚಿಕೆಯು ಒಂದೊಂದು ದೇವಿಯ ವಿಶೇಷವಾಗಿದ್ದು ಸಮಾಜದಲ್ಲಿರುವ ಸಂಕೋಲೆ, ಸ್ತ್ರೀಯರ ಮೇಲಿರುವ ಶೋಷಣೆ, ತಾರತಮ್ಯ, ಹೆಣ್ಣು ಭ್ರೂಣಹತ್ಯೆ ಮೊದಲಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ದೇವಿಯ ವಿಶೇಷ ಕಾರ್ಯಕ್ರಮ ಇದಾಗಿದೆ.

English summary
Navarathri Special: Navashakthi Navarathri to telecast in Colors Kannada from September 21st to September 29th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada