"ಮೈಕ್ ಮುಂದೆ ನಿಂತಾಗ ಇನ್ಯಾರಿಗೋ ಹಾಡುತ್ತಿರುತ್ತೇವೆ.. ನಟನೆಗಿಂತ ಹಾಡೋದೆ ಕಷ್ಟ": ನವೀನ್ ಸಜ್ಜು

By ಅನಿತಾ ಬನಾರಿ

ಬಿಗ್ ಬಾಸ್ ಕನ್ನಡ ಸೀಸನ್ ಖ್ಯಾತಿಯ ಸಂಗೀತಗಾರ ನವೀನ್ ಸಜ್ಜು ನಟನೆ ಬಗ್ಗೆ ಮಾತನಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಹಿಟ್ ಧಾರಾವಾಹಿ 'ಚುಕ್ಕಿತಾರೆ'ಯಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿರುವ ಗಾಯಕ ನವೀನ್ ಸಜ್ಜು ಇದೀಗ ಕಿರುತೆರೆ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ಬಿಗ್ ಬಾಸ್ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ತಮ್ಮ ಗಾಯನ ಹಾಗೂ ಸ್ವಭಾವದ ಮೂಲಕ ಜನಮನ ಗೆದ್ದಿದ್ದರು ಗಾಯಕ ನವೀನ್ ಸಜ್ಜು. ಈಗ 'ಚುಕ್ಕಿತಾರೆ' ಧಾರಾವಾಹಿಯಲ್ಲಿಯೂ ಒಬ್ಬ ಒಳ್ಳೆಯ ಭಾವನಾತ್ಮಕ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಇವರು ಮತ್ತೆ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದಾರೆ.

Naveen Sajju says that singing is more difficult than acting

ಹೀಗಿರುವಾಗ ಗಾಯನ ಹಾಗೂ ನಾಟಕ ಎರಡನ್ನು ಅನುಭವಿಸಿರುವ ಇವರು ಈ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ. "ನಟನೆಗೆ ಹೋಲಿಸಿದರೆ ಗಾಯನವೇ ನಿಜವಾಗಿಯೂ ಕಷ್ಟದ ವಿಚಾರ. ಏಕೆಂದರೆ ನಾವು ಮೈಕ್ ಮುಂದೆ ನಿಂತಾಗ ಇನ್ಯಾರಿಗೋ ಹಾಡುತ್ತಿರುತ್ತೇವೆ. ಇನ್ಯಾರದೋ ಭಾವನೆಗಳನ್ನು ನಾವು ಗಾಯನದ ಮೂಲಕ ಹೊರ ಹಾಕಬೇಕು. ಯಾವತ್ತಿಗೂ ಎನರ್ಜಿ ಸದಾ ನಮ್ಮೊಂದಿಗಿರಬೇಕು" ಎಂದು ಗಾಯಕ ನವೀನ್ ಸಜ್ಜು ಹೇಳಿಕೊಂಡಿದ್ದಾರೆ.

ಜೊತೆಗೆ "ನಾವು ಹಾಡಿದ ಹಾಡನ್ನು ಕೇಳುವಾಗ, ಕೇಳುಗರಿಗೂ ಅದೇ ಭಾವನೆಗಳು ಮೂಡಬೇಕು ಹಾಗಾಗಿ ನಟನೆಯನ್ನು ಕಿರುತೆರೆಯಲ್ಲಿ ಅನುಭವಿಸಿದ ನನಗೆ ಈಗ ಗಾಯನಕ್ಕೆ ಹೆಚ್ಚಿನ ಶ್ರಮ ಬೇಕು ಎಂದು ಎನಿಸಿದೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಹಂಚಿಕೊಂಡಿದ್ದಾರೆ ನಟ ನವೀನ್ ಸಜ್ಜು.

Naveen Sajju says that singing is more difficult than acting

ಕಿರುತೆರೆ ಧಾರಾವಾಹಿ ಜೊತೆ ಜೊತೆಗೆ ಗಾಯಕ, ನಟ, ನವೀನ್ ಸಜ್ಜು ಅವರು ಹೊಸ ಆಲ್ಬಂ ಒಂದಕ್ಕೂ ಕೆಲಸ ಮಾಡುತ್ತಿದ್ದಾರೆ. ಒಂದು ಕಥೆಯನ್ನು ಇಟ್ಟುಕೊಂಡು ಅದರ ಸುತ್ತ ಹೆಣೆದಿರುವ ಆರು ಹಾಡುಗಳು ಸದ್ಯದಲ್ಲೇ ಆಲ್ಬಂ ರೂಪದಲ್ಲಿ ಹೊರಬರಲಿದ್ದು, ಈ ಬಗ್ಗೆಯೂ ಇವರು ಬಹಳಷ್ಟು ಅಪೇಕ್ಷೆಯನ್ನು ಇಟ್ಟುಕೊಂಡಿದ್ದಾರೆ.

"ನನ್ನ ಹೊಸ ಆಲ್ಬಂಗೆ ಆರು ಹಾಡುಗಳನ್ನು ನಾನು ಕಾಂಪೋಸ್ ಮಾಡಿದ್ದೇನೆ. ಈ ಹಾಡುಗಳು ಹಾಗೂ ಅದರಲ್ಲಿನ ಥೀಮ್ ಜನರಿಗೆ ಇಷ್ಟವಾಗುತ್ತದೆ ಎಂದು ನಂಬಿದ್ದೇನೆ. ಈಗಾಗಲೇ ನಾನು ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವುದರಿಂದ ಜನರು ನನ್ನನ್ನು ಹಾಡಿನ ಮೂಲಕವೂ ಗುರುತಿಸಲು ಹೆಚ್ಚು ಸಹಕಾರಿಯಾಗಲಿದೆ ಎಂದು ನಂಬಿದ್ದೇನೆ" ಎಂದು ನಟ ಗಾಯಕ ನವೀನ್ ಸಜ್ಜು ಹೇಳಿದ್ದಾರೆ.

More from Filmibeat

English summary
Naveen Sajju who stepped on television for the first time. He is acting in Chukkitaare serial:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X